
ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಏ.24: ತಾಲೂಕಿನ ಅರಸಿಕೇರಿ ಕೋಲಶಾಂತೇಶ್ವರ ಮಠದಲ್ಲಿ ಕೋಲಶಾಂತೇಶ್ವರ ಜನ ಕಲ್ಯಾಣ ಕೇಂದ್ರ ಹಾಗೂ ಕೋಲಶಾಂತೇಶ್ವರ ಸಮಾಜಮುಖಿ ಸಾಂಸ್ಕೃತಿಕ ಕಲಾಕೇಂದ್ರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 40 ಜೋಡಿ ವಧು ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಹೂವಿನ ಹಡಗಲಿ ಯ ಮ.ನಿ.ಪ್ರಡಾ. ಹಿರಿಶಾಂತವೀರ ಮಹಾಸ್ವಾಮಿಗಳು ಭಕ್ತಿಗಾಗಿ, ಸಮಾಜಕ್ಕಾಗಿ ಜನರಿಗಾಗಿ ತಮ್ಮ ತನುಮನ ಧನ ಸೂರೇಗೈದಂತವರು ಕೋಲಶಾಂತ ಮಠದ ಶಾಂತಲಿಂಗದೇಶಿ ಕೇಂದ್ರ ಸ್ವಾಮೀಜಿಯವರು ಎಂದರು.
ರೈತಪರವಾಗಿ ಚಿಂತನೆ ಮಾಡುವುದರ ಜೊತೆಗೆ ಶೈಕ್ಷಣಿಕ ಹಾಗೂ ಸಾಮಾಜಿಕ, ಧಾರ್ಮಿಕ ಕ್ರಾಂತಿಯನ್ನು ಇಲ್ಲಿಯ ಶ್ರೀಗಳು ಮಾಡಿದ್ದಾರೆ. ಈ ಮಠದಲ್ಲಿ ದಾಂಪತ್ಯಕ್ಕೆ ಜೀವನಕ್ಕೆ ಪಾದಾರ್ಪಣೆ ಮಾಡುತ್ತಿರುವುದು ನಿಮ್ಮ ಪುಣ್ಯ ಎಂದರು.
ದಂಪತಿಗಳು ಏನೆ ಕಷ್ಟ ಸುಖ ಬಂದರೂ ಹೊಂದಿಕೊಂಡು ಅನ್ಯೋನ್ನತೆಯಿಂದ ಜೀವನ ಸಾಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಸವ ಗುರುಕಿರಣ ಪ್ರಶಸ್ತಿಯನ್ನು ದಾವಣಗೆರೆಯ ಡಾ.ಉದಯಕುಮಾರ ಅವರ ಪರವಾಗಿ ಪ್ರಭಾಕರ ಸ್ವೀಕರಿಸಿದರು.
ಕೋಲಶಾಂತೇಶ್ವರ ಸೇವಾ ಪ್ರಶಸ್ತಿಯನ್ನು ಅಣ್ಣಿಗೇರಿಯ ನಡಕಟ್ಟಿನ ಅಬ್ದುಲ್ ಕಾದರ್ ಇಮಾಮ್ ಸಾಹೇಬ್ ಅವರು ಸ್ವೀಕರಿಸಿದರು. ಕೋಲಶಾಂತೇಶ್ವರ ಮಠದ ಶಾಂತಲಿಂಗದೇಶಿಕೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ವಿವಾಹ ಜರುಗಿದವು.
ಉತ್ತಂಗಿ ಹನಸಿ ಮ.ನಿ.ಪ್ರ.ಸೋಮಶೇಖರ ಸ್ವಾಮಿಗಳು ಸಾನಿದ್ಯ ವಹಿಸಿದ್ದರು.
ಮ.ನಿ.ಪ್ರ ಸೋಮಶೇಖರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಅಣ್ಣಿಗೇರಿ ಪ್ರೊ|| ಸ್.ಎಸ್.ರ್ಲಾಪು, ಮುಖಂಡರಾದ ವೈ.ಡಿ.ಅಣ್ಣಪ್ಪ, ಪ್ರಶಾಂತ ಪಾಟೀಲ್, ನೆಲಗೊಂಡನಹಳ್ಳಿ ಭರತ್, ಬಿ.ರಾಮಣ್ಣ, ಮರಿಯಪ್ಪ, ಅಜೀಮಸಾಹೇಬ್, ಲಲಿತಮ್ಮ, ಹಾಲಪ್ಪ, ಇತರರು ಇದ್ದರು.