ಅರಸರಿಂದಲೇ ವಿದೇಶದಲ್ಲೂ ಮೈಸೂರು ಖ್ಯಾತಿ: ನಿಂಗರಾಜೇಗೌಡ

ಸಂಜೆವಾಣಿ ನ್ಯೂಸ್
ಮೈಸೂರು: ಜು.26:- ಮೈಸೂರು ಅನ್ನೂ ಆಳಿದ ಯದುವಂಶದ ಅರಸರು, ವಿಶೇಷವಾಗಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರಿಂದಾಗಿ ಮೈಸೂರು ನಗರವೂ ಸಾಂಸ್ಕೃತಿಕ ಚಟುವಟಿಕೆಗಳ ರಾಜಧಾನಿಯಾಗಿ ದೇಶ-ವಿದೇಶಗಳಲ್ಲಿ ಇಂದಿಗೂ ಪ್ರಖ್ಯಾತಿಯನ್ನೂ ಪಡೆದಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ತಿಳಿಸಿದರು.
ಪ್ರಜ್ಞಾ ಫೌಂಡೇಶನ್ ಹಾಗೂ ಮೈಸೂರು ವಿವಿ ಸಮಾಜ ಕಾರ್ಯ ಅಧ್ಯಯನ ವಿಭಾಗ, ಲಿಯೋ ಕ್ಲಬ್ ಆಫ್ ಮೈಸೂರು ಪ್ಯಾಲೆಸ್ ಸಿಟಿ ಅಡಿಯಲ್ಲಿ ಆಯೋಜಿಸಿದ್ದ ಪತಂಗ -2023ರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೈಸೂರಿನಲ್ಲಿ ಯೋಗ, ಆಯುರ್ವೇದ, ಜನಪದ, ಸಂಗೀತ, ನಾಟಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವಾರು ವಿದ್ವಾಂಸರು, ಗುರುಗಳು ಇಲ್ಲಿ ಇದ್ದಾರೆ. ರಾಜ -ಮಹಾರಾಜರಿಂದಾಗಿ ಗುರು-ಶಿಷ್ಯ ಪರಂಪರೆಯೂ ಮೈಸೂರಿನಲ್ಲಿದೆ. ಇದನ್ನೂ ಕಲಿಯಲೂ ಕೇವಲ ಹೊರ ರಾಜ್ಯದವರಲ್ಲದೇ, ವಿದೇಶಗಳಿಂದಲೂ ವಿದ್ಯಾರ್ಥಿಗಳು ಬರುತ್ತೀದ್ದಾರೆ. ಆದುದರಿಂದ ಇದರ ಸಂಪೂರ್ಣ ಉಪಯೋಗವನ್ವೂ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತೀರುವ ಎಲ್ಲಾ ವಿದ್ಯಾರ್ಥಿಗಳು ಪಡೆದು ಕೊಳ್ಳಬೇಕೆಂದರು.
ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪದವಿಗಳ ಪ್ರವೇಶಾತಿ ಸಂದರ್ಭದಲ್ಲಿ ಪ್ರತಿ ವಿಭಾಗಕ್ಕೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಉನ್ನತ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಸೀಟುಗಳನ್ನೂ ಮೀಸಲಾಗಿರಿಸಿದೆ. ಎಲ್ಲಾ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರವರ ವ್ಯಕ್ತಿ ನಿರ್ಮಾಣದಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾಧ್ಯ ಎನ್ನೂವುದನ್ನೂ ನೆನಪಿನಲ್ಲಿ ಇಟ್ಟುಕೊಂಡು ಸಾಧನೆ ಮಾಡುವುದರ ಮೂಲಕ ಭಾರತವೂ ವಿಶ್ವಕ್ಕೆ ಮಾರ್ಗದರ್ಶನ ಮಾಡುವಂತೆ ಜಗದ್ಗುರು ಆಗುವಲ್ಲಿ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಪರಿಶ್ರಮ ಪಟ್ಟು ಸಾಧನೆ ಮಾಡಬೇಕೆಂದರು.
ಜನಪದ ಗೀತೆ, ನಾಟಕ, ದೇಶಭಕ್ತಿ ಗೀತೆ, ಪ್ರಬಂಧ ಸ್ಪರ್ಧೆ, ಅಶು ಭಾಷಣ ಸ್ಪರ್ಧೆ ಇನ್ನೀತರ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಕಾರ್ಯಕ್ರಮದ ಉದ್ಘಾಟನೆಯನ್ನೂ ಮೈಸೂರಿನ ಮಹಾಪೌರ ಶಿವಕುಮಾರ ನೇರವೇರಿಸಿದರು. ಡಾ.ಹೆಚ್.ಪಿ.ಜ್ಯೋತಿ, ಡಾ.ಚಂದ್ರಮೌಳಿ, ಕಾರ್ಯಕ್ರಮದ ಸಂಚಾಲಕ ಎಸ್.ಪಿ.ಮಲ್ಲಪ್ಪ, ಲಯನ್ ಜಿ.ಶಿವಕುಮಾರ ಮತ್ತಿತರರು ಉಪಸ್ಥಿತರಿದ್ದರು.