ಅರವಿಂದ ಜತ್ತಿ ಅವರಿಗೆ ಆತ್ಮೀಯ ಸನ್ಮಾನ

ಕಲಬುರಗಿ:ನ.30:ಬಸವ ಸಮಿತಿ ಅಧ್ಯಕ್ಷರಾದ ಶ್ರೀ ಅವರವಿಂದ ಜತ್ತಿ ಅವರಿಗೆ 2020 ನೇ ಸಾಲಿನ ಡಾ. ಚೆನ್ನಬಸವ ಪಟ್ಟದ್ದೇವರ ಅನುಭವ ಮಂಟಪ ಪ್ರಶಸ್ತಿ ದೊರಕಿದ್ದು ಸಂತೋಷದ ಸಂಗತಿ. ಶ್ರೀ ಜತ್ತಿ ಅವರಿಗೆ ಸಂದ ಈ ಪ್ರಶಸ್ತಿ ಬಸವ ಸಮಿತಿ ಚಟುವಟಿಕೆಗಳು ಇನ್ನಷ್ಟು ಭರದಿಂದ ಜರುಗಿಸಲು ಕಾರಣವಾಗುತ್ತದೆ ಎಂದು ಶ್ರೀ ಚಿತ್ರಶೇಖರ ಕೇಸೂರ ಅವರು ಅಭಿಪ್ರಾಯ ಪಟ್ಟರು.
ದಿ: 29-11-2021 ರಂದು ಶ್ರೀ ಅರವಿಂದ ಜತ್ತಿ ಅವರಿಗೆ ಸಂದ ಈ ಪ್ರಶಸ್ತಿ ಸಂದರ್ಭದಲ್ಲಿ ಕಲುಬುರ್ಗಿ ಬಸವ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಂಡಪ್ಪ ಕೇಸೂರ ಅವರು ಶ್ರೀ ಜತ್ತಿ ಅವರಿಗೆ ತಮ್ಮ ಮನೆಯಲ್ಲಿ ಆತ್ಮೀಯ ಸನ್ಮಾನವನ್ನು ಏರ್ಪಡಿಸಿದ್ದರು.
ಈ ಸಂದರ್ಭದಲ್ಲಿ ಬಂಡಪ್ಪ ಕೇಸೂರ ಪರಿವಾರದ ಅನೇಕ ಜನ ಸಂಬಂಧಿಕರು ಸೇರಿದ್ದರು. ಜೊತೆಗೆ ಕಲಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ.ಜಯಶ್ರೀ ದಂಡೆ, ಡಾ. ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿರ್ದೇಶಕರಾದ ಡಾ. ವೀರಣ್ಣ ದಂಡೆ, ಶ್ರೀಮತಿ ಈರಮ್ಮ ಬಂಡಪ್ಪ ಕೇಸೂರ, ಶ್ರೀಮತಿ ಶರಣಮ್ಮ ಮಳಖೇಡಕರ, ಶ್ರೀಮತಿ ಮಹಾನಂದಾ ಪಾಟೀಲ ಸಾತಖೇಡ, ಶ್ರೀಮತಿ ನಾಗಮ್ಮ ಜೀರಗಿ ಮತ್ತಿತರು ಭಾಗವಹಿಸಿದ್ದರು.