ಅರವಿಂದ್ ಚವ್ಹಾಣ್ ಬಂಧನಕ್ಕೆ ಒತ್ತಾಯಿಸಿ ಬೆಳ್ಳಂಬೆಳ್ಳಿಗ್ಗೆ ಪ್ರತಿಭಟನೆ

ಚಿತ್ತಾಪುರ:ನ.8: ಕ್ಷೇತ್ರದ ಶಾಸಕ ಪ್ರಿಯಾಂಕ ಖರ್ಗೆ ಕಾಣೆಯಾಗಿದ್ದಾರೆ ಎಂಬ ಪೆÇೀಸ್ಟರ್ ಗಳನ್ನು ಪಟ್ಟಣದಲ್ಲಿ ಅಂಟಿಸಿರುವ ಬಿಜೆಪಿಯ ಮುಖಂಡ
ಅರವಿಂದ್ ಚವ್ಹಾಣ್ ಅವರನ್ನು ಕೂಡಲೇ ಕಾನೂನು ಚೌಕಾಟಿನಲ್ಲಿ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಬೆಳಂಬೆಳಗ್ಗೆ ಪಟ್ಟಣದ ಲಾಡ್ಜಿಂಗ್ ಕ್ರಾಸ್ ನಲ್ಲಿ ಪ್ರತಿಭಟನೆ ನಡೆಸಿದರು.

ಕೆಲ ಹೊತ್ತು ಲಾಡ್ಜಿಂಗ್ ಕ್ರಾಸ್ ನಲ್ಲಿ ಬೀಗುವಿನ ವಾತಾವರಣ ನಿರ್ಮಾಣವಾಗಿತ್ತು.
ವಿಷಯ ತಿಳಿಯುತ್ತಿದ್ದಂತೆ ಸಿಪಿಐ ಪ್ರಕಾಶ್ ಯಾತ್ನೂರ್, ಪಿಎ??? ಚೇತನ್, ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ಮಾಡುವರ ಮನವೊಲಿಸಿ. ಪೆÇೀಸ್ಟರ್ ಅಂಟಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.

ನಂತರ ಪ್ರತಿಭಟನೆಯನ್ನು ಉದ್ದೇಶಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿ ಬಿಜೆಪಿ ಮುಖಂಡ ಅರವಿಂದ್ ಚವ್ಹಾಣ ಪಟ್ಟಣದಲ್ಲಿ ಅಶಾಂತಿ ಕದಡುತ್ತಿದ್ದಾರೆ. ಪಕ್ಷ ಪಕ್ಷಗಳ ಮಧ್ಯೆ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಇಂದು ಕ್ಷೇತ್ರದ ಶಾಸಕ ಪ್ರಿಯಾಂಕ ಖರ್ಗೆ ಕಾಣೆಯಾಗಿದ್ದಾರೆ ಎಂಬ ಪೆÇೀಸ್ಟರ್ಗಳನ್ನು ಪಟ್ಟಣದಲ್ಲಿ ಅಂಟಿಸುವ ಮೂಲಕ ಅಶಾಂತಿ ಉಂಟು ಮಾಡಿದ್ದಾರೆ ಹೀಗಾಗಿ ಅವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಪೆÇಲೀಸ್ ಅಧಿಕಾರಿಗಳಿಗೆ ಒತ್ತಾಯಿಸಿದರು.
ಒಂದು ವೇಳೆ ಬಂಧಿಸಿ ಕ್ರಮ ಕೈಗೊಳ್ಳದೆ ಇದ್ದಲ್ಲಿ ಚಿತ್ತಾಪುರ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್ ಕಾಶಿ, ಮುಕ್ತರ್ ಪಟೇಲ್, ಸಂತೋಷ್ ಪೂಜಾರಿ, ಸಂಜು ಬೊಳ್ಕರ್, ಮಲ್ಲಿಕಾರ್ಜುನ್ ಮುಡಬೂಳಕರ್, ವಿನ್ನು ಕುಮಾರ್, ಜಗದೀಶ್ ಚವ್ಹಾಣ್, ಶಿವಾಜಿ ಕಾಶಿ, ಶೀಲಾ ಕಾಶಿ, ರಾಜು ಬೋಳ್ಕರ್, ದೇವಿಂದ್ರ ಅಣಕಲ್, ನಜೀರ್ ಸಾಬ್, ರವಿ ಕುಮಾರ್, ಸೇರಿದಂತೆ ಇತರರು.