ಅರವಿಂದ್ ಕೇಜ್ರಿವಾಲ್ ಬಂಧನ ಖಂಡಿಸಿ ಆಮ್ ಆದ್ಮಿ ಕಾರ್ಯಕರ್ತರ ಪ್ರತಿಭಟನೆ

ಸಂಜೆವಾಣಿ ವಾರ್ತೆ
ದಾವಣಗೆರೆ. ಏ.8;  ರಾಷ್ಟ್ರೀಯ ನಾಯಕರು ಹಾಗೂ ದೆಹಲಿಯ ಮುಖ್ಯಮಂತ್ರಿಯಾದ ಅರವಿಂದ್ ಕೇಜ್ರಿವಾಲ್ ಅಕ್ರಮ ಬಂಧನವನ್ನ ಖಂಡಿಸಿ  ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು  ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹವನ್ನು ನಡೆಸಿದರು.ಈ ವೇಳೆ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ ಎಸ್ ಶಿವಕುಮಾರಪ್ಪ ಮಾತನಾಡಿ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಹಾಗು ಸಾಮಾನ್ಯ ಜನರ ವಾಕ್ ಸ್ವಾತಂತ್ರವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಾ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕರನ್ನ ಬಂಧಿಸುವ ಮೂಲಕ ನಿಷ್ಪಕ್ಷವಾದ ಚುನಾವಣೆಯನ್ನು ನಡೆಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಇದೆ. ಜನರ ಆಯ್ಕೆಗಳ ಹೇರಿಕೆಯನ್ನು ಮಾಡಲಾಗುತ್ತಿದೆ.ಕೇಂದ್ರ ಸರ್ಕಾರವು  ಸಿಬಿಐ ಐಟಿ ಇಲಾಖೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಬಂಧಿಸುವ ಕೆಲಸಗಳು ನಡೆಯುತ್ತಿವೆ ಹಾಗೆಯೇ ಸಂವಿಧಾನ ಆಶಯಗಳನ್ನು ಧಿಕ್ಕರಿಸಿ ತಮ್ಮದೇ ವಿರೋಧ ನೀತಿಗಳ  ಮೂಲಕ ಸರ್ಕಾರ ನಡೆಸುತ್ತಿದೆ ಎಂದರು. ದೇಶದ ಯುವಕರಿಗೆ ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ ಬಡವರಿಗೆ ಸಾಮಾಜಿಕವಾಗಿ ಆರ್ಥಿಕವಾಗಿ ತುಳಿಯುತ್ತಾ ಇದ್ದಾರೆ ಉದ್ಯೋಗ ಮಾಡುವ ಜನರಿಗೆ ಸರಿಯಾದ ಅವಕಾಶಗಳು ಇಲ್ಲದೆ ಹಲವಾರು ಕೈಗಾರಿಕೆಗಳು ನಷ್ಟದ ಹಾದಿ ಹಿಡಿಯುತ್ತಿವೆ  ಬಡತನ ಹೆಚ್ಚಾಗಿದೆ ಆದರೂ ಕೂಡ ಕೇಂದ್ರ ಸರ್ಕಾರವು ವಿರೋಧ ಪಕ್ಷದ ನಾಯಕರನ್ನು ಬಂಧಿಸುವಲ್ಲಿ ಮುಳುಗಿದೆ ಈ ನಿಟ್ಟಿನಲ್ಲಿ ಕೂಡಲೇ ಅರವಿಂದ ಕೇಜ್ರಿವಾಲ್ ರವರನ್ನು ಬಿಡುಗಡೆ ಮಾಡಬೇಕು ಹಾಗೂ ನಿಷ್ಪಕ್ಷವಾಗಿ ದೇಶಾದ್ಯಂತ ಚುನಾವಣೆಯನ್ನು ನಡೆಸಬೇಕು ಎಂದು ಒತ್ತಾಯ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅರುಣ್ ಕುಮಾರ್ ಸಿ.ಆರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಆದಿಲ್ ಖಾನ್ ಎಸ್ ಕೆ , ಕಾರ್ಯದರ್ಶಿಗಳಾದ ರವೀಂದ್ರ ಕೆ ಸುರೇಶ್ ಸಿಡ್ಲಪ್ಪ, ಲಕ್ಷ್ಮಣ ನಾಯ್ಕ್, ಎಸ್‌ಟಿ ಘಟಕದ ಅಧ್ಯಕ್ಷರಾದ ಧರ್ಮಾ ನಾಯ್ಕ್ , ಹರಿಹರ ತಾಲೂಕು ಅಧ್ಯಕ್ಷರಾದ ಬಸವರಾಜ್ ಜಿ ಎಚ್, ಮಹಮ್ಮದ್ ಯುಸಫ್, ಮಲ್ಲೇಶ್ ಭಾಗವಹಿಸಿದ್ದರು.