ಅರಳಹಳ್ಳಿ: ಸರ್ಕಾರಿ ಶಾಲೆಗೆ ರೋಟರಿ ಕ್ಲಬ್‌ನಿಂದ ಕುರ್ಚಿ, ಟೇಬಲ್ ದೇಣಿಗೆ

(ಸಂಜೆವಾಣಿ ವಾರ್ತೆ)
ಸಿಂಧನೂರು.ಫೆ.೧೦- ತಾಲೂಕಿನ ಅರಳಹಳ್ಳಿ ಗ್ರಾಮದ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ನೇತ್ರ ತಜ್ಞರಾದ ಡಾ.ಚನ್ನನಗೌಡ ಅವರ ಸಹಾಯದಿಂದ ನಗರದ ರೋಟರಿ ಕ್ಲಬ್ ವತಿಯಿಂದ ಎರಡನೇ ತರಗತಿಯ ನಲಿ ಕಲಿ ಮಕ್ಕಳಿಗೆ ೩೦ ಕುರ್ಚಿ ಮತ್ತು ೫ ಟೇಬಲ್ ದೇಣಿಗೆ ನೀಡಲಾಗಿದೆಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಯಲ್ಲಪ್ಪ ಕಾರಟಗಿ ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷರಾದ ಸತ್ಯನಾರಾಯಣ ಶ್ರೇಷ್ಠಿಯವರು, ಮತ್ತು ಅವರ ಸರ್ವ ಸದಸ್ಯರು ಸರ್ಕಾರಿ ಶಾಲೆಗಳಲ್ಲಿ ಬಡವರ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಟೇಬಲ್, ಕುರ್ಚಿಗಳಿಲ್ಲದೆ ಎಷ್ಟೋ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ನೆಲದ ಮೇಲೆ ಕುಳಿತು ಅಭ್ಯಾಸ ಮಾಡುತ್ತಿದ್ದಾರೆಂಬುದು ಮನಗಂಡು ಅರಳಹಳ್ಳಿ ಸರ್ಕಾರಿ ಶಾಲೆಗೆ ೩೦ ಛೇರ್ ಮತ್ತು ೫ ಟೇಬಲ್ ದೇಣಿಗೆ ನೀಡಿ, ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾನವೀಯತೆ ಮೆರೆದಿದ್ದಾರೆ.
ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಕಾರಟಗಿ, ಪ್ರಭಾರಿ ಮುಖ್ಯ ಗುರುಗಳಾದ ಲಿಂಗರಾಜು ಟಿ, ಶಿಕ್ಷಕರಾದ ಶಾಂತ, ಶಶಿಕಲಾ, ದೀಪಿಕಾ, ವಿನಾಯಕ, ಅಮರೇಶ ಅರಗಿ, ಚೆನ್ನಮ್ಮ, ಸೇರಿದಂತೆ ಸರ್ವ ಸದಸ್ಯರು, ಗ್ರಾಮಸ್ಥರು, ವಿದ್ಯಾರ್ಥಿಗಳು, ಅಭಿನಂದನೆಗಳು ತಿಳಿಸಿದ್ದಾರೆ.