ಅರಮನೆ ಮುಂಭಾಗ ಪುನೀತ್ ರಾಜ್ ಕುಮಾರ್‍ಗೆ ಶ್ರದ್ಧಾಂಜಲಿ

ಮೈಸೂರು,ಅ.30:- ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವರು ಇನ್ನಿಲ್ಲ ಎಂಬುದನ್ನು ಅವರ ಅಭಿಮಾನಿಗಳಿಗೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ. ಅವರ ನಗುಮುಖ ಅಭಿಮಾನಿಗಳನ್ನು ಕಾಡುತ್ತಿದೆ. ದರ್ಪವಿಲ್ಲದ ಸರಳ, ಸಜ್ಜನಿಕೆಯ ನಟನಾಗಿ ಗುರುತಿಸಿಕೊಂಡಿದ್ದು, ಸಹಾಯಕ್ಕೆ ತಕ್ಷಣ ಧಾವಿಸುತ್ತಿದ್ದ, ನೆಚ್ಚಿನ ನಟನನ್ನು ಕಳೆದುಕೊಂಡಿರುವುದು ಅಭಿಮಾನಿಗಳ ದುಃಖದ ಕಟ್ಟೆಯೊಡೆದಿದೆ.
ಅಭಿಮಾನಿಗಳು ತಮಗೆ ಕಂಡ ರೀತಿಯಲ್ಲಿ ಅಗಲಿದ ನಟನಿಗೆ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದಾರೆ. ಮೈಸೂರಿನ ಅರಮನೆ ಮುಂಭಾಗ ನಿತ್ಯವೂ ಮುಂಜಾನೆ ಪಾರಿವಾಳಗಳಿಗೆ ಆಹಾರ ನೀಡುವ ಪುನೀತ್ ಅಭಿಮಾನಿಯೋರ್ವರು ಓಂ ಶಾಂತಿ ಪುನೀತ್ ರಾಜ್ ಕುಮಾರ್ ಎಂದು ಬರೆಯುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.