ಅರಬ್ಬಿ ಭಾಷೆ ಭೋದನೆ : ಕ್ರಮಕ್ಕೆ ಆಗ್ರಹ

ರಾಯಚೂರು.ಏ.೨೩-ನಗರದ ಆಜಾದ್ ನಗರದ ಬಡಾವಣೆಯಲ್ಲಿ ಎಕ್ಸ್‌ಲೈನ್ ಪಬ್ಲಿಕ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮಕ್ಕೆ ಪರವಾನಿಗೆ ಪಡೆದುಕೊಂಡು ದಿನೇತ್ (ಅರಬ್ಬಿ) ವಿಷಯವನ್ನು ಭೋದನೆ ಮಾಡುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿಯವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳಬೇಕೆಂದು ಬಿಜೆಪಿ ಮುಖಂಡ ಅಂಬಾಜಿರಾವ್ ಮೈದರಕರ್ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಶಿಕ್ಷಣ ಇಲಾಖೆಯಿಂದ ಶಾಲೆಯನ್ನು ಪ್ರಾರಂಭಿಸಲು ಪರವಾನಿಗೆ ನೀಡಿದ್ದಾರೆ. ಆದರೆ ಆಂಗ್ಲ ಮಾಧ್ಯಮಕ್ಕೆ ಪರವಾನಿಗೆ ಅಥವಾ ದಿನೇತ್ ಅರಬ್ಬಿ ವಿಷಯವನ್ನು ಭೋದನೆ ಮಾಡುವುದಕ್ಕೆ ಪರವಾನಿಗೆ ನೀಡಲಾಗಿದೆಯೆ ಎಂಬುದು ತಿಳಿಯುತ್ತಿಲ್ಲ. ಶಾಲೆಯಲ್ಲಿ ಎಲ್‌ಕೆಜಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳನ್ನು ದಿನೇತ್ ಅರಬ್ಬಿ ವಿಷಯವನ್ನು ಭೋದನೆ ಮಾಡುತ್ತಿದ್ದಾರೆ.
ಮಕ್ಕಳಿಗೆ ಈಗಲಿಂದ ಧರ್ಮದ ಬಗ್ಗೆ ಭೋದನೆ ಮಾಡಿದರೆ ಇಂದಿನ ದಿನಗಳಲ್ಲಿ ದೇಸದ ಮೇಲೆ ದುಷ್ಟಪರಿಣಾಮ ಬೀರುವ ಸಾಧ್ಯತೆಗಳಿವೆ. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಮೋಹಸಿನ್ ಜಮಾಲ್ ತಂದೆ ಮುನುರುದ್ದೀನ್, ಉಪಾಧ್ಯಕ್ಷ ಸಿರಾಜ್ ಹಮ್ಮದ್ ಜಾಫ್ರೀ ತಂದೆ ಜಹೀರ ಹಮ್ಮದ್ ನೇತೃತ್ವದಲ್ಲಿ ನಡೆಯುತ್ತಿದೆ. ಶಾಲಾ ಆಡಳಿತ ಮಂಡಳಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳಬೇಕೆಂದು ಒತ್ತಾಯಿಸಿದರು.
ಶಾಲೆಯು ಮನೆ ನಂ ೧-೯-೮೭ ಇದೆ ಈ ಮನೆಯು ವಾಸದ ಉದ್ದೇಶಕ್ಕೆ ನೀಡಿದ್ದು ಆದರೆ ಮನೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಶಾಲಾಡಳಿತ ಮಂಡಳಿಯ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ವಾಣಿಜ್ಯಕ್ಕೆ ಪರಿರ್ವತನೆಗೆ ಪರವಾನಿಗೆ ಪಡೆದುಕೊಳ್ಳದೆ ಹಾಗೆಯೇ ನಡೆಸುತ್ತಿದ್ದಾರೆಂದು ದೂರಿದರು.
ಈ ಬಡಾವಣೆಯಲ್ಲಿ ಅಪಘಾತ ಸಂಭವಿಸಿದ್ದಲ್ಲಿ ಅಂಬ್ಯುಲೆನ್ಸ್ ಮತ್ತು ಅಗ್ನಿ ಶಾಮಕ ವಾಹನಗಳು ಬರುವುದಕ್ಕೆ ದಾರಿಯಿಲ್ಲ. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಪಘಾತವಾದಲ್ಲಿ ಶಾಲೆಯ ಆಡಳಿತ ಮಂಡಳಿಯವರೆ ಕಾರಣವಾಗುತ್ತಾರೆ.
ಈ ವಿಷಯವನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಶಾಲಾಡಳಿತ ಮಂಡಳಿಯವರ ಸೂಕ್ತ ಕಾನೂನು ಕ್ರಮಕೈಗೊಂಡು ಶಾಲೆಯ ಪರವಾನಿಗೆ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಮೇಶ ಸೇರಿದಂತೆ ಇತರರು ಇದ್ದರು.