ಅರಬಗಟ್ಟೆಯಲ್ಲಿ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ಆರಂಭ

ಹೊನ್ನಾಳಿ.ಮೇ.೨೯ : ಇನ್ನೇರಡು ದಿನಗಳಲ್ಲಿ ಅರಬಗಟ್ಟೆಯಲ್ಲಿನ ವಸತಿ ಶಾಲೆಯಲ್ಲಿ 500 ಹಾಸಿಗೆಗಳ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ಆರಂಭಗೊಳ್ಳಲಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ಅರಬಗಟ್ಟೆಯಲ್ಲಿರವ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರೊಂದಿಗೆ ಮಾತನಾಡಿದ ರೇಣುಕಾಚಾರ್ಯ ಜೀನಹಳ್ಳಿ ಹಾಗೂ ಸಾಸ್ವೇಹಳ್ಳಿಯರುವ ಕೋವಿಡ್ ಕೇರ್ ಸೆಂಟರ್‌ಗಳನ್ನು ಮುಚ್ಚಿ, ಅರಬಗಟ್ಟೆಯ ವಸತಿ ಶಾಲೆಯಲ್ಲಿ 500 ಹಾಸಿಗೆಗಳ ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ಆರಂಭವಾಡುವುದಾಗಿ ತಿಳಿಸಿದರು.ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಪ್ರತಿನಿತ್ಯ ಸೋಂಕಿತರ ಸಂಖ್ಯೆ ಸಾವಿನ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡಿದರೆ ನೋವಾಗುತ್ತದೆ ಎಂದ ಶಾಸಕರು ನನಗೆ ಕ್ಷೇತ್ರದ ಜನರ ಆರೋಗ್ಯ ಮುಖ್ಯ ಅವರಿಗಾಗೀ ನಾನು ಪ್ರಾಣದ ಹಂಗು ತೊರೆದು ದಿನದ 18 ಘಂಟೆ ಕೆಲಸ ಮಾಡುತ್ತಿದ್ದೇನೆ ಎಂದರು.ಈಗಾಗಲೇ ಅರಬಗಟ್ಟೆ ವಸತಿ ಶಾಲೆಗೆ ತೆರಳುವ ರಸ್ತೆ ಹಾಳಾಗಿದ್ದು ಅದರ ರಿಪೇರಿ ಕೆಲಸ ನಡೆಯುತ್ತಿದ್ದು ದಿನದ 24 ಘಂಟೆಯೂ ವಿದ್ಯುತ್ ಪೂರೈಕೆಯಾಗ ಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದು ಅದರ ಕಾಮಗಾರಿ ಕೂಡ ಆರಂಭಗೊAಡಿದೆ ಎಂದ ಶಾಸಕರು, ವಸತಿ ಶಾಲೆಯ ಸ್ವಚ್ಚತೆ ಕಾರ್ಯ ನಡೆಯುತ್ತಿದೆ ಎಂದರು.ಕೋವಿಡ್ ಸೋಂಕಿತರಿಗೆ ಎಲ್ಲಾ ವ್ಯವಸ್ಥೆ ಒಂದೇ ಕಡೆ ನೀಡ ಬೇಕೆಂಬ ಉದ್ದೇಶದಿಂದ ಅರಬಗಟ್ಟೆಯ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ಮಾಣ ಮಾಡುತ್ತಿದ್ದು, 500 ಬೆಡ್‌ಗಳ ಕೋವಿಡ್ ಕೇರ್ ಸೆಂಟರ್ ಆರಂಭವಾದರೆ ಬೆಡ್‌ಗಳ ಸಮಸ್ಯೆ ಎದುರಾಗುವುದಿಲ್ಲಾ ಎಂದರು.ಇನ್ನು ಮಾದನಬಾವಿ ಹಾಗೂ ಎಚ್.ಕಡದಕಟ್ಟೆಯ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗಳು ಎಂದಿನAತೆ ಕಾರ್ಯನಿರ್ವಹಿಸಲಿವೆ ಎಂದ ಶಾಸಕರು ಅವಳಿ ತಾಲೂಕಿನಲ್ಲಿ ಕೊರೊನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದರು.ಕೋವಿಡ್ ವಿಚಾರದಲ್ಲಿ ನಾನು ಎಂದೂ ಕೂಡ ರಾಜಕಾರಣ ಮಾಡುವುದಿಲ್ಲಾ ಎಂದ ಶಾಸಕರು ಅಪಪ್ರಚಾರ ಮಾಡುವವರು ಮಾಡಲಿ ನಾನು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲಾ ಎಂದರು.ಈ ಸಂದರ್ಭ ಬೆಸ್ಕಾಂ ಎಇಇ ರವಿಕಿರಣ್, ಬೆಸ್ಕಾಂ ಸೆಷನ್ ಆಪೀಸರ್ ಶಿವರಾಜ್, ಗುತ್ತಿಗೆದಾರರಾದ ಚೌಹಾಣ್ ಸೇರಿದಂತೆ ಮತ್ತಿತರರಿದ್ದರು.