ಅರಣ್ಯ ಹುತಾತ್ಮರ ದಿನಾಚರಣೆ

ವಿಜಯಪುರ, ಸೆ.12-ಪ್ರಾದೇಶಿಕ ಅರಣ್ಯ ವಿಭಾಗ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ಎಲ್ಲ ಸಿಬ್ಬಂದಿಗಳು ಸೇರಿ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಂಗನಾಥ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಗಳು ಭಾಗ್ಯವಂತ ಮಸೂದಿ ಎಸಿಎಫ್ ಚವ್ಹಾಣ ಎಸಿಎಫ್, ಹಾಗೂ ಮಹೇಶ ಕ್ಯಾತನ ಎಸಿಎಫ್ ಹಾಗೂ ಆರ್‍ಎಫ್‍ಓ ಗಳಾದ ಸಂತೋಷ ಅಜೂರೆ, ಬಿರಾದಾರ, ಪ್ರಬುಲಿಂಗ ರಾಜು ಬಿರಾದಾರ, ಇರಶಾದೆ, ಮಲಕಣ್ಣವರ, ಗಿರೀಶ ಅರಿಕೆಡೆ ಶಾಂತರಾಜು, ಅರಣ್ಯ ರಕ್ಷಕರು, ಆರಣ್ಯ ವಿಕ್ಷಕರು ಹಾಗೂ ಅರಣ್ಯಸಿಬ್ಬಂದಿ ಸಮವಸ್ತರದೊಂದಿಗೆ ಗೌರವ ಸಲ್ಲಿಸಿದರು.
1730 ಸೆಪ್ಟಂಬರ 11 ರಂದು ಜೋದಪುರನ ಮಹಾರಾಜ ಆಭಯಸಿಂಗನ ಅರಮನೆಗೆ ಕಟ್ಟಡಕ್ಕೆ ಮರಗಳನ್ನು ಕಡಿಯುವಾಗ ಇದನ್ನು ವಿರೋಧಿಸಿದ ಬಿಪ್ಲೋಯಿ ಸಮುದಾಯದ 363 ಪುರುಷ ಮಹಿಳೆಯ ಮತ್ತು ಮಕ್ಕಳನ್ನು ಕೊಲ್ಲಲಾಯಿತು.ಮರಗಳ ಸಂರಕ್ಷಣೆಗಾಗಿ ಬಿಪ್ಲೊಯಿಗಳ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಲು ಭಾರತ ಸರಕಾರ ಈ ದಿನವನ್ನು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿರುತ್ತಾರೆ.
ಕರ್ನಾಟಕ 54 ಅರಣ್ಯ ಹುತಾತ್ಮರನ್ನು ನೆನಪಿಸಲಾಯಿತು. ಅತಿಥಿಗಳು ಪುಷ್ಪ ನಮನ ಸಲ್ಲಿಸಿ ಮೌನ ಆಚರಸಿ ರಾಷ್ಟ್ರಗೀತೆಯೊಂದಿಗೆ ಸಮಾರೋಪ ಹೊಂದಿದೆ.