ಅರಣ್ಯ ಉಳಿಸಿ ಬೆಳೆಸುವ ಕಾರ್ಯವಾಗಲಿ: ಕಡಪಟ್ಟಿ

ವಿಜಯಪುರ, ಜೂ.7:ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಬಿ.ಎಲ್.ಡಿ.ಇ. ಸಂಸ್ಥೆ ಇವರ ಸಂಯುಕ್ತಾ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತವಾಗಿ ಸಸಿ ನೆಡುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.
ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಅಪ್ಪಾಸಾಹೇಬ ಅಂಬಲಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,
ವಿಶ್ವ ಪರಿಸರ ದಿನದಂದು ಸಸಿ ನೆಡುವುದರ ಜೊತೆಗೆ ಪರಿಸರ ಉಳಿಸಿ ಬೆಳೆಸುವುದು ಮಹತ್ತರ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು.
ಇಂದು ಆಧುನೀಕರಣಕ್ಕೆ ಒಳಪಟ್ಟು ಪ್ರಿಡ್ಜ್, ಎ.ಸಿ., ಬಳಕೆ ಸಾಮಾನ್ಯವಾಗಿದೆ. ಈ ಯಂತ್ರಗಳಿಂದ ಹೊರ ಹೊಮ್ಮುವ ಕಲ್ಮಶಗಳಿಂದ ಓಝೋನ್ ಪದರಗಳಿಗೆ ರಂಧ್ರಗಳಾಗುತ್ತಿರುವುದರಿಂದ ಇಂದು ನಾವು ವಿಪರೀತ ಬಿಸಿಲಿನ ತಾಪವನ್ನು ಅನುಭವಿಸುತ್ತಿದ್ದೇವೆ. ಆದ್ದರಿಂದ ಇಂದು ನಾವು ಎಲ್ಲರೂ ಮನೆಗೊಂದು ಮರ ಬೆಳೆಸೋಣ. ಅದರಂತೆ ಮುಂದಿನ ಪೀಳಿಗೆಗೆ ಆರೋಗ್ಯವಂತ ಪರಿಸರವನ್ನು ಕೊಡೋಣ ಎಂದು ಹೇಳಿದರು.
ಸರ್ಕಾರಿ ವೀಕ್ಷಣಾಲಯದ ಪರಿವೀಕ್ಷಣಾಧಿಕಾರಿ ರಮೇಶ ಎಸ್. ಕಡಪಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಿಎಸ್ಪಿ ಬಸವರಾಜ ಯಲಿಗಾರ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಸರ್ಕಾರಿ ವೀಕ್ಷಣಾಲಯದ ಆಪ್ತ ಸಮಾಲೋಚಕ ಶ್ರೀಕಾಂತ ಬಿರಾದಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ ಅವರು ಮಾತನಾಡಿದರು.
ಸರಕಾರಿ ವೀಕ್ಷಣಾಲಯದ ಪರಿವೀಕ್ಷಣಾಧಿಕಾರಿ ರಮೇಶ ಕಡಪಟ್ಟಿ, ಬಾಲ ನ್ಯಾಯಮಂಡಳಿ ಸದಸ್ಯ ರಮೇಶ ಕುಲಕರ್ಣಿ, ಸಿಪಿಐ ಪರಮೇಶ್ವರ ಕವಟಗಿ, ಸಂಚಾರಿ ಪೊಲೀಸ್ ಠಾಣೆ ಎಎಸ್‍ಐ ಶಿವಾನಂದ ಕಟ್ಟಿಮನಿ, ವಾಣಿಶ್ರೀ ನಿಂಬಾಳ, ವಿಜಯಕುಮಾರ ತಳವಾರ ಮತ್ತಿತರರು ಇದ್ದರು.