ಬೀದರ, ಜೂ 12:ಬೀದರ ಜಿಲ್ಲಾ ಅರಣ್ಯ ಇಲಾಖೆಯ ವತಿಯಿಂದ ಆಯೋಜಿಸಿದ ಗೌರವ ವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅರಣ್ಯ ಪರಿಸರ ಮತ್ತು ಜೈವಿಕ ಹಾಗು ಬೀದರ ಜಿಲ್ಲಾ ಉಸ್ತುವಾರಿ ಸಚವರಾದ ಈಶ್ವರ ಬಿ, ಖಂಡ್ರೆ ಅವರು ಗೌರವ ವಂದನೆ ಸ್ವೀಕರಿಸಿದರು. ಗೌರವ ಒಂದನೆ ಸ್ವೀಕರಿಸಿದ ಸಚಿವರು ಪ್ರಾದೇಶಿಕ ಮತ್ತು ಸಮಾಜಿಕ ಅರಣ್ಯ ವಿಭಾಗ ಬೀದರ, ಆರ್,ಎಸ್.ಡಿ.ಪಿ ಯೋಜನೆಯಡಿ ಬೆಳೆಸಲಾದ ಸಸಿಗಳನ್ನು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ರೈತರಿಗೆ ರೀಯಾತಿ ದರದ್ಲಿ ಸಸಿಗಳನ್ನು ವಿತರಿಸಲು ತೆರೆದ ಮಾರಾಟ ಮಳಿಗೆಗಳಿಗೆ ಚಾಲನೆ ನೀಡದರು. ಮತ್ತು ಸಿಸಿಗಳನ್ನು ನೆಟ್ಟರು.
ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ ಖಾನ್, ವಿಧಾನ ಪರಿಷತ ಸದಸ್ಯ ಅರವಿಂದಕುಮಾರ ಅರಳಿ, ಕಲಬುರ್ಗಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಸ್.ವೆಂಕಟೇಶ, ಪಶು ವೈದ್ಯಕೀಯ ಮಹಾವಿದ್ಯಾಲಯದ ಕುಲಸಚಿವ ಶಿವಶಂಕರ, ರಾಯಚೂರಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಣ್ಣ, ಯಾದಗೀರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜಲ್ ಪಾಟೀಲ್, ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ,ಬಿ ಪಾಟೀಲ್, ಕಲಬುರ್ಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಮ್.ಎಲ್ ಭಾವಿಕಟ್ಟಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.