ಅರಣ್ಯ ಇಲಾಖೆ ನೂತನ ಕಟ್ಟಡ ಉದ್ಘಾಟನೆ


ಹರಪನಹಳ್ಳಿ.ನ.೨೧; ಪಟ್ಟಣದ ಅರಣ್ಯ ಇಲಖೆ ಆವೃನದಲ್ಲಿ ನಿರ್ಮಾಣ ಮಾಡಲಾಗಿರುವ ತಾಲೂಕು ಪ್ರಾದೇಶಿಕ ಅರಣ್ಯ ಇಲಾಖೆಯ ನೂತನ ಕಟ್ಟಡವನ್ನು ಶುಕ್ರವಾರ ಶಾಸಕ ಜಿ.ಕರುಣಾಕರರೆಡ್ಡಿ ಉದ್ಘಾಟಿಸಿದರು. ಕಟ್ಟಡವನ್ನು ವೀಕ್ಷಿಸಿದ ಶಾಸಕರು ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಜೊತೆಗೆ ಗೂಣಮಟ್ಟವೂ ಕಾಪಾಡಿಕೊಳ್ಳಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾದಿಕಾರಿ ಸಂಜಯ್ ಮೋಹನ್, ಬಳ್ಳಾರಿ ಮುಖ್ಯ ಅರಣ್ಯ ಸಂರಕ್ಷಣಾದಿಕಾರಿ ಲಿಂಗರಾಜ್, ದಾವಣಗೆರೆ ಉಪ ಅರಣ್ಯ ಸಂರಕ್ಷಣಾದಿಕಾರಿ ಶ್ರೀನಿವಾಸಮೂರ್ತಿ, ದಾವಣಗೆರೆ ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ತಿಪ್ಪೇಸ್ವಾಮಿ, ತಾ.ಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಉಪವಿಭಾಗಾದಿಕಾರಿ ವಿ.ಕೆ.ಪ್ರಸನ್ನಕುಮಾರ್, ತಾಲ್ಲೂಕು ವಲಯ ಅರಣ್ಯಾದಿಕಾರಿ ಡಿ.ಭರತ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ವಿವಿಧ ಕಾಮಗಾರಿಗೆ ಭೂಮಿ ಪೂಜೆ
ಪಟ್ಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪಕ್ಕದಲ್ಲಿ ಅಲ್ಪ ಸಂಖ್ಯಾತರ ಇಲಾಖೆಯಿಂದ ಸುಮಾರು ೧.೯೯ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ಬಾಲಕರ ಹಾಸ್ಟೆಲ್ ನಿರ್ಮಾಣ ಕಾಮಗಾರಿ ಹಾಗೂ ೭೯.೯೫ಲಕ್ಷ ವೆಚ್ಚದ ಡಿ.ಎಂ.ಎಫ್ ಅನುಧಾನದಲ್ಲಿ ಲಂಡನ್ ಹಳ್ಳ ನಿರ್ಮಾಣದ ಕಾಮಗಾರಿಗಳಿಗೆ ಶಾಸಕ ಜಿ.ಕರುಣಾಕರರೆಡ್ಡಿ ಅವರು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ಪಟ್ಟಣದ ಕುರುಬರಗೇರಿಯ ೭ನೇ ವಾರ್ಡನ ಲಂಡನ್ ಹಳ್ಳ ಹೊನ್ನೂರು ವಲಿ ಸಾಬ್ ಮನೆಯಿಂದ ಪೊಲೀಸ್ ತಿಮ್ಮಪ್ಪನ ಮನೆಯವರೆಗೆ ಹಾಗು ಕೊರಚರ ಓಣಿ ಬ್ರಿಡ್ಜ್‌ನಿಂದ ಬಿ,ಇ.ಒ ಕಛೇರಿ ಹಿಂಭಾಗದವರೆಗೆ ೨೦೧೯-೨೦ನೇ ಸಾಲಿನ ಡಿ.ಎಂ.ಎಫ್ ಯೋಜನೆಯಡಿಯಲ್ಲಿ ೭೯.೯೫ಲಕ್ಷಗಳ ಸಿಮೆಂಟ್ ಕಾಂಕ್ರಿಟ್ ರಾಜಕಾಲುವೆ ನಿರ್ಮಾಣಕ್ಕೆ ಶಾಸಕರು ಭೂಮಿಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅನಿಲ್‌ಕುಮಾರ್, ಡಿ.ವೈ.ಎಸ್.ಪಿ ಮಲ್ಲೇಶ್ ದೊಡ್ಡಮನಿ, ಪಿ.ಎಸ್.ಐ ಪ್ರಕಾಶ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಮುಖಂಡರಾದ ಎಂ.ಪಿ.ನಾಯ್ಕ, ಆರ್.ಲೋಕೇಶ್, ನಿಟ್ಟೂರು ಸಣ್ಣಹಾಲಪ್ಪ, ರಾಘವೇಂದ್ರಶೆಟ್ಟಿ, ಯು.ಪಿ.ನಾಗರಾಜ್, ಮಜ್ಜಿಗೇರಿ ಭೀಮಪ್ಪ, ನೀಲಗುಂದದ ರೆಡ್ಡಿ ಸಿದ್ದೇಶ್, ಸಹಾಯಕ ಕಾರ್ಯಪಾಲಕ ಅಭಿಯಂತಕ ಲಿಂಗಪ್ಪ, ಜೆಇ ಅಶೋಕ, ನಿರ್ಮಿತಿ ಕೇಂದ್ರದ ಯುವ ಜನ ನಿರ್ದೇಶಕ ಆರ್.ಎಂ.ವಾಸುದೇವ, ರಂಗಸ್ವಾಮಿ, ಜಯದೇವ್, ಜಗದೀಶ್, ಜಯದೇವ, ಮತ್ತಿರರು ಉಪಸ್ಥಿತರಿದ್ದರು.