ಕೋಲಾರ,ಸೆ,೨೬:ಊಳುವವನಿಗೆ ಭೂಮಿ ಎಂದು ನಿಯಮವನ್ನು ಜಾರಿ ಮಾಡಿ, ಸಾಗುವಳಿ, ಪಹಣಿ, ಚೀಟಿ ನೀಡಿ, ಕಂದಾಯ ಕಟ್ಟಿಸಿ ಕೊಂಡು ಕಳೆದು ೫೦-೬೦ ವರ್ಷಗಳಿಂದ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದ ರೈತರ ಜಮೀನುಗಳನ್ನು ಅರಣ್ಯ ಇಲಾಖೆಗೆ ಸೇರಿದೆಯೆಂದು ಯಾವೂದೇ ನೋಟಿಸ್ ಜಾರಿ ಮಾಡದೆ ರಾತ್ರೋರಾತ್ರಿ ೩-೪ ಗಂಟೆಯ ವೇಳೆಯಲ್ಲಿ ೧೫-೨೦ ವರ್ಷದ ಮಾವಿನ ಮರಗಳನ್ನು ಕಟಾವು ಮಾಡುವ ಮೂಲಕ ರೈತರ ಮೇಲೆ ದೌರ್ಜನ್ಯದಿಂದ ಒಕ್ಕಲೆಬ್ಬಿಸಿರುವ ವಿರುದ್ದ ಕ್ರಮ ಕೈಗೊಳ್ಳ ಬೇಕೆಂದು ಸಂಸದ ಎಸ್.ಮುನಿಸ್ವಾಮಿ ಆಗ್ರಹ ಪಡೆಸಿದರು,
ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಜನತಾ ದರ್ಶನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಸರ್ಕಾರವೇ ಮಂಜೂರು ಮಾಡಿರುವ ಭೂಮಿ, ಸರ್ಕಾರವೇ ನೀಡಿರುವ ದಾಖಲಾತಿಗಳು ಹೇಗೆ ಸ್ವಾಮಿ ಒತ್ತುವರಿಯಾಗುತ್ತದೆ.೫೦-೬೦ ವರ್ಷಗಳಿಂದ ಸ್ವಾವನುಭವದಲ್ಲಿರುವ ಭೂಮಿಯು ಅರಣ್ಯ ಇಲಾಖೆದು ಎಂದು ಹೇಳುತ್ತಾರೆ ಇಷ್ಟು ವರ್ಷಗಳಿಂದ ಏನು ಮಾಡುತ್ತಿದ್ದರೂ ಸ್ವಾಮಿ ಹಠತ್ತನೆ ಇಂದು ಜ್ಞಾಪಕ ಬಂದಿದೇಯಾ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು,
ರಾತ್ರೋ ರಾತ್ರೋ ರೈತರ ಜಮೀನುಗಳ ಮೇಲೆ ದಾಳಿ ಮಾಡುವುದು ಸಮಂಜಸವಲ್ಲ. ಅವರೆಲ್ಲಾ ನ್ಯಾಯಾಬದ್ದವಾಗಿ ಸರ್ಕಾರದಿಂದ ದಾಖಲಾತಿಗಳನ್ನು ಪಡೆದೆ ಕೃಷಿ ತೋಟಗಾರಿಕೆಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ರಾಜಧಾನಿ ಮೊದಲು ಅರ್ಧ ಭಾಗಕ್ಕೂ ಹೆಚ್ಚು ಅರಣ್ಯ ಪ್ರದೇಶವಾಗಿತ್ತು ಅವುಗಳೆಲ್ಲವನ್ನು ಒತ್ತುವರಿ ಮಾಡಿ ನಗರವನ್ನಾಗಿ ಪರಿವರ್ತಿಸಿಲ್ಲವೇ. ಅವುಗಳು ಮೊದಲು ಅರಣ್ಯ ಇತ್ತು ಎಂದು ತೆರವು ಮಾಡಿ ನೋಡೋಣಾ ಎಂದು ಸವಾಲ್ ಹಾಕಿದರು,
ನಾನು ಕುಂಬಳಕಾಯಿ ಕಳ್ಳ ಎಂದು ಕೊಗಿದೆ ಅಷ್ಟೆ ಅದಕ್ಕೆ ಬಂಗಾರಪೇಟೆ ಶಾಸಕರು ಹೆಗಲು ಮುಟ್ಟಿ ಕೊಂಡು ಬಾಯಿಗೆ ಬಂದಂತೆ ಅರಚಾಡಿ ಇಡೀ ಸಭೆಯನ್ನೆ ಗೊಂದಲಕ್ಕೆ ಒಳಪಡೆಸಿದರು. ಅವರ ಮಿತಿಮೀರಿದ ಪದಗಳ ಬಳಕೆ ಅದೇ ಪದಗಳಲ್ಲಿಯೇ ಉತ್ತರಿಸ ಬೇಕಾಗಿರುವುದು ಅನಿವಾರ್ಯವಾಗಿತ್ತು. ಸರ್ಕಾರಿ ಭೂಮಿಯನ್ನು ಯಾವ ರಾಜಕಾರಣಿಯೇ ಒತ್ತುವರಿ ಮಾಡಿರಲಿ ಮುಲಾಜಿಲ್ಲದೆ ಪ್ರಕರಣ ದಾಖಲು ಮಾಡಿ ತೆರವು ಮಾಡಿಸಿ ಎಂದು ಆಗ್ರಹ ಪಡೆಸಿದರು,