
ಕೋಲಾರ,ಸೆ,೧೨-ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಕಳೆದ ೧೫ ದಿನಗಳಿಂದ ಅರಣ್ಯ ಇಲಾಖೆಯ ೧೦೩೫ ಎಕರೆ ಭೂಮಿಯ ಒತ್ತುವರಿ ತೆರವು ಮಾಡಲಾಗಿದೆ, ಮಲ್ಲಂಪಲ್ಲಿ, ದಳಸನೂರು ಹಾಗೂ ಶ್ರೀನಿವಾಸಪುರಕ್ಕೆ ಸೇರಿದ ಮೂರು ಭಾಗದ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಒತ್ತುವರಿ ಮಾಡಲಾಗಿದ್ದ ಜಾಗವನ್ನು ಕಾನೂನು ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಕಾಯ್ದೆ ಪ್ರಕಾರ, ನ್ಯಾಯಾಲಯದ ಆದೇಶದ ಪ್ರಕಾರ ಶೇ.೧೦೦ ರಷ್ಟು ಜಾಗವನ್ನು ಪೊಲೀಸ್ ಇಲಾಖೆ, ಕಂದಾಯ ಇಲಾಖೆಯ ಸಹಕಾರದೊಂದಿಗೆ ತೆರವು ಮಾಡಿಸಿ ಸಾರ್ವಜನಿಕರ ಸಂಪತ್ತುನ್ನು ಭೂ ಮಾಫಿಯಾದಿಂದ ಸ್ವಾಧೀನಪಡಿಸಿಕೊಂಡಿದೆ ಎಂದು ಜಿಲ್ಲಾ ಅರಣ್ಯ ಇಲಾಖೆಯ ಉಪಸಂರಕ್ಷಣಾಧಿಕಾರಿ ವಿ.ವೇಡಕೊಂಡಲು ತಿಳಿಸಿದರು.
ನಗರದ ಹೊರವಲಯದ ಸಾಮಾಜಿಕ ಅರಣ್ಯ ಸಂರಕ್ಷಣ ಇಲಾಖೆಯ ಕಚೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಅರಣ್ಯ ಇಲಾಖೆಯ ಒತ್ತುವರಿ ಮಾಡಿಕೊಂಡಿರುವ ೧೦೩೫ ಎಕರೆ ಜಾಗದಲ್ಲಿ ೩೦ ಎಕರೆ ಮಾವು ಹೊರತುಪಡಿಸಿದರೆ ಉಳಿದಂತೆ ಅಂತಹ ಬೆಳೆಗಳು ಯಾವುದೂ ಇಲ್ಲ, ಒತ್ತುವರಿದಾರರು ಯಾರೂ ಸಣ್ಣ, ಪುಟ್ಟ ರೈತರು ಇಲ್ಲ ಎಲ್ಲರೂ ದೊಡ್ಡ ರೈತರೇ ಆಗಿದ್ದು ೨೫,೫೦,೭೫ ಹಾಗೂ ೧೦೦ ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡುವವರು ಆಗಿದ್ದಾರೆ ಎಂದು ಸ್ವಷ್ಟಪಡಿಸಿದರು.
ನಮ್ಮ ಸಮಾಜದ ಸಾರ್ವಜನಿಕರ ಸಂಪತ್ತನ್ನು ಉಳಿಸುವುದು ನಮ್ಮ ಮುಖ್ಯ ಉದ್ದೇಶವಾಗಿತ್ತು, ಇದರಲ್ಲಿ ನಮ್ಮ ವೈಯುಕ್ತಿ ಆಸಕ್ತಿ ಯಾವುದೂ ಇಲ್ಲ. ಅರಣ್ಯವನ್ನು ಉಳಿಸಬೇಕಾಗಿರುವುದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯವಾಗಿತ್ತು ಹೊರತಾಗಿ ನಮಗೆ ಬೇರೆ ಯಾವ ಉದ್ದೇಶವು ಇಲ್ಲ. ನಮ್ಮ ಮೇಲೆ ಯಾರ ಒತ್ತಡವು ಇಲ್ಲ. ಕಳೆದ ೨೦೦೧ ರಿಂದ ಕೆಲವು ಪ್ರಭಾವಿತರು ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಾರೆ ಹೊರತಾಗಿ ಇದು ಯಾರೋಬ್ಬರ ವೈಯುಕ್ತಿಕ ಸ್ವತ್ತು ಅಗಿರಲಿಲ್ಲ ಎಂದರು.
ಈ ಹಿಂದಿನಿಂದಲೂ ಹಲವಾರು ಭಾರಿ ಇಲಾಖೆಯ ಕಾಯ್ದೆಗಳ ಕುರಿತು ಸೂಚನೆಗಳನ್ನು ನೀಡಲಾಗಿತ್ತು, ಆದರೆ ಒಂದು ಬೆಳೆ ಫಸಲು ಬಂದ ಬೆನ್ನ ಹಿಂದೆಯೇ ಮತ್ತೊಂದು ಬೆಳೆ ಇಡುತ್ತಿದ್ದರಿಂದ ಹಿಂದಿನ ಅಧಿಕಾರಿಗಳಿಗೆ ಒತ್ತುವರಿ ತೆರವು ಮಾಡಿಸಲು ಅಡ್ಡಿ ಪಡಿಸುತ್ತಾ ಬರುತ್ತಿದ್ದರು, ಹಲವಾರು ಬಾರಿ ಒತ್ತುವರಿದಾರರಿಗೆ ತೆರವು ಮಾಡಲು ನೀಡಿದ್ದ ಅವಕಾಶಗಳನ್ನು ದುರ್‍ಬಳಿಸಿಕೊಳ್ಳುತ್ತಿದ್ದರು ಹಾಗಾಗಿ ಈ ಭಾರಿ ಹಠತ್ತನೇ ದಾಳಿ ಮಾಡುವುದು ಅನಿವಾರ್ಯವಾಗಿತ್ತು ಎಂದು ಹೇಳಿದರು.
ಮಾವಿನ ತೋಪು ತೆರವು ಪ್ರಕಣವನ್ನು ಈ ಹಿಂದೆ ಕಳೆದ ಪ್ರಕರಣದಲ್ಲಿ ಅರಣ್ಯ ಪ್ರದೇಶ ಒತ್ತುವರಿ ಮಾಡಿ ಕಾಫಿ ಎಸ್ಟೇಟ್ ಮಾಡಿಕೊಂಡಿದ್ದರು. ಈ ಪ್ರಕರಣವು ಇದೇ ರೀತಿ ನ್ಯಾಯಾಲಯದಲ್ಲಿ ಸುದೀರ್ಘಕಾರ ವಿಚಾರಣೆಗಳು ನಡೆದು ಅಂತಿಮವಾಗಿ ತೆರವು ಮಾಡಲು ಆದೇಶಿಸಿತ್ತು, ಅದಕ್ಕೆ ಯಾವುದೇ ಪರಿಹಾರವು ನೀಡಲಿಲ್ಲ. ಇನ್ನು ಒತ್ತುವರಿದಾರರೇ ಅರಣ್ಯ ಇಲಾಖೆಗೆ ಪರಿಹಾರ ನೀಡಬೇಕು ಎಂದು ಪ್ರತಿಪಾದಿಸಿದ ಅವರು ಒಂದೇ ರೀತಿಯ ಮರಗಳನ್ನು ಬೆಳೆಸುವ ಬದಲು ವಿವಿಧ ಜಾರಿಯ ಮರಗಳನ್ನು ಬೆಳೆಸಿ, ಅರಣ್ಯದ ಪರಿಸರಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಂಡು ಅಭಿವೃದ್ದಿಪಡಿಸುತ್ತೇವೆ ಎಂದು ವಿವರಿಸಿದರು.
ಇತಿಹಾಸದ ಪ್ರಕಾರ ನೋಡಿದರೆ ಕಳೆದ ೫೦೦ ವರ್ಷದಿಂದ ಈ ಪ್ರದೇಶಗಳೆಲ್ಲಾ ಅರಣ್ಯವೇ ಆಗಿದ್ದು ವನ್ಯ ಜೀವಿಗಳಿಂದ ಕೂಡಿತ್ತು. ೧೪೦ ವರ್ಷಗಳ ಹಿಂದೆ ಮೈಸೂರಿನ ಮಹಾರಾಜರ ಆಳ್ವಿಕೆಯಲ್ಲಿ ಅರಣ್ಯ ಅಭಿವೃದ್ದಿ ಪಡೆಸಿ ಅರಣ್ಯ ಇಲಾಖೆಯ ಸ್ವಾಧೀನದಲ್ಲಿಯೇ ಇತ್ತು, ಆದರೆ ಕಳೆದ ೨೦೦೧ ರಲ್ಲಿ ಭೂ ಮಾಫಿಯಗಳಿಗೆ ಅರಣ್ಯ ಜಾಗದಲ್ಲಿ ಕಣ್ಣು ಬಿದ್ದಿತ್ತು. ೨೦೦೫ರಲ್ಲಿ ಗೋಪಾಲರೆಡ್ಡಿ ಅವರು ತಮ್ಮ ಪಠಾಲಂ ಜೊತೆ ಸೇರಿ ಕೊಂಡು ಅತಿಕ್ರಮಿಸಿ ಕೊಂಡಿದ್ದಾರೆ. ಇವರೊಂದಿಗೆ ಕೆಲವು ಸರ್ಕಾರಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ೧೫ ಮಂದಿ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಅರಣ್ಯ ಭೂಮಿಗಳನ್ನು ಕೆಲವು ಪ್ರತಿಷ್ಠಿತರಿಂದ ತೆರವು ಮಾಡಿದ್ದರಿಂದ ರೈತರು ಹರ್ಷಪಡಿಸಿ ಅರಣ್ಯ ಇಲಾಖೆಯನ್ನು
ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿರುವ ೧೪ ಮಂದಿ ಸೇರಿಕೊಂಡು ಸಮಾಜದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಮೂಲಕ ಶಾಂತಿ ಸುವ್ಯವಸ್ಥೆಗೆ ಧಕ್ಕೆವುಂಟು ಮಾಡಲು ಪ್ರಯತ್ನಿಸಿದೆ. ಸಾರ್ವಜನಿಕರಿಗೆ ನಮಗೆ ನೋಟಿಸ್ ಕೊಟ್ಟಿಲ್ಲ ಪಿತ್ರಾರ್ಜಿತ ಕಾಲದಿಂದ ಸ್ವಾಧೀನದಲ್ಲಿತ್ತು, ಸರ್ಕಾರವು ನೀಡಿರುವ ದಾಖಲೆಗಳನ್ನು ಅರಣ್ಯ ಇಲಾಖೆ ಧಿಕ್ಕರಿಸಿದೆ, ಮರಗಳನ್ನು ಸಂರಕ್ಷಿಸುವಂತ ಇಲಾಖೆಯೇ ಮರಗಳನ್ನು ನಾಶ ಮಾಡುತ್ತಿದೆ. ಮರಗಳನ್ನು ಕಡಿಯುವುದು ಕಾನೂನು ಉಲ್ಲಂಘನೆಯಾಗಿದೆ ಎಂದು ಜನರನ್ನು ದಿಕ್ಕುತಪ್ಪಿಸಲು ತಪ್ಪು ಮಾಹಿತಿಗಳನ್ನು ಪ್ರಚಾರ ಮಾಡಲಾಗುತ್ತಿದೆ ಇದನ್ನು ಯಾರೋ ನಂಬಬಾರದು, ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ಜನರ ಮುಂದೆ ಇಟ್ಟು ದಿಕ್ಕು ತಪ್ಪಿಸುತ್ತಿದ್ದಾರೆ. ದರಖಾಸ್ತು ಸಮಿತಿಯ ಮಂಜೂರಾತಿಯು ಸಮರ್ಪವಾದ ದಾಖಲೆಗಳನ್ನು ಪರಿಶೀಲಿಸದೆ ಮಂಜೂರಾತಿ ನೀಡಿರುವುದು ಎಂದು ವಿವರಿಸಿದರು.
ಕರ್ತವ್ಯಕ್ಕೆ ಅಡ್ಡಿಪಡಿಸಿ ನಷ್ಟ ಪಡಿಸಿದ ೨೦ ಮಂದಿಯ ವಿರುದ್ದ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳಾದ ಸಹನ್ ಸುಮಂತ್, ಮಹೇಶ್ ಕುಮಾರ್ ಇದ್ದರು.