ಅರಣ್ಯ ಇಲಾಖೆಯ ವಾಚರ್ ಗಳಿಗೆ ಬ್ಯಾಂಕ್ ಖಾತೆ ಮೂಲಕ ವೇತನ ನೀಡಲು ಮನವಿ

ಶಹಾಪುರ:ನ.11:ತಾಲೂಕಿಗೆ ಅರಣ್ಯ ಇಲಾಖೆಯ ನೆಡುತೋಪು ಹಾಗೂ ಪ್ಲಾಂಟೇಶನ್ ವೀಕ್ಷಣೆಗೆ ಮಂಗಳವಾರ ಆಗಮಿಸಿದ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಭಿವೃದ್ಧಿ ವಿಭಾಗ ಮುಖ್ಯಸ್ಥ ಆರ್ ಕೆ ಸಿಂಗ್ ಅವರಿಗೆ ತಾಲೂಕ ಸಿಐಟಿಯು ಸಂಚಾಲಕ ಮಲ್ಲಯ್ಯ ಪೆÇೀಲಂಪಲ್ಲಿ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು

ಅರಣ್ಯ ಇಲಾಖೆಯಲ್ಲಿ 15-20 ವರ್ಷದಿಂದ ನೆಡುತೋಪು ಮತ್ತು ಪ್ಲಾಂಟೇಶನ್ ನಲ್ಲಿ ದುಡಿಯುವ ವಾಚಾರಗಳಿಗೆ ಕೆಲವೊಂದು ಕಡೆ 4, ಮತ್ತೊಂದು ಕಡೆ 5, 6 ಸಾವಿರ ನೀಡುತ್ತ ಬಂದಿದ್ದಾರೆ. ತಿಂಗಳಿಗೆ ಇವರು ನೀಡುವ ಸಂಬಳ ಒಬ್ಬ ಕುಟುಂಬದ ಸದಸ್ಯರಿಗೆ ಒಪ್ಪತ್ತಿನ ಊಟಕ್ಕೂ ಸಾಕಾಗುವುದಿಲ್ಲ. ಪರಿಸರದಲ್ಲಿ ಗಿಡ ಮರಗಳನ್ನು ಸಂರಕ್ಷಿಸಿ ಬೆಳೆಸುವಲ್ಲಿ ಇವರೇ ಪ್ರಮುಖ ಪಾತ್ರ ವಹಿಸುತ್ತಾರೆ. ಇವರ ಪರಿಶ್ರಮದ ಫಲವೇ ಪರಿಸರದಲ್ಲಿ ಅಚ್ಚಹಸಿರು ಕಾಣುತ್ತಿದೆ. ಕಷ್ಟಪಟ್ಟು ದುಡಿಯುವ ಬಡ ಕಾರ್ಮಿಕರಿಗೆ ಸರಿಯಾಗಿ ಸಂಬಳ ಸಿಗದಿದ್ದರೆ ಅವರು ಉಪಜೀವನ ಹೇಗೆ ನಡೆಯಬೇಕು. ಇವರು ಸಂಬಳ ನಗದು ರೂಪದಲ್ಲಿ ನೀಡುತ್ತಾರೆ. ಸರಕಾರದಲ್ಲಿ ನಿಗದಿಯಾದ ಸಂಬಳ ನೀಡದೆ, ಅತ್ಯಲ್ಪ ಹಣದಲ್ಲೇ ಇವರನ್ನು ದುಡಿಸಿಕೊಳ್ಳುತ್ತಾರೆ. ಸಂಬಳ ಕೇಳಿದರೆ ಸಂಬಳ ಹೆಚ್ಚು ಮಾಡಲು ಕೇಳಿಕೊಂಡರೆ ಏನಾದರೂ ನೆಪವೊಡ್ಡಿ ಅವರನ್ನು ಕೆಲಸದಿಂದ ತೆಗೆಯುವುದಾಗಿ ಹೆದರಿಸುತ್ತಾರೆ? ಸಂಬಳವನ್ನು ನಗುದು ನಗದು ರೂಪದಲ್ಲಿ ಕೊಡುವಂತೆ ಯಾವ ಕಾನೂನಿನಲ್ಲಿ ಹೇಳಿರುವುದಿಲ್ಲ, ಆದರೂ ಅರಣ್ಯ ಇಲಾಖೆಯಲ್ಲಿ ನಗದು ರೂಪದಲ್ಲಿ ಇಲ್ಲಿಯವರೆಗೂ ಸಂಬಳ ನೀಡುತ್ತ ಬಂದಿದ್ದಾರೆ. ಸಂಬಳ ಹೆಚ್ಚಿಸುವಂತೆ ಮತ್ತು ಬ್ಯಾಂಕ್ ಮೂಲಕ ಸಂದಾಯ ಮಾಡುವಂತೆ ಅನೇಕ ಸಲ ಮನವಿಗಳನ್ನು ಕೊಟ್ಟರು ಅಧಿಕಾರಿಗಳು ಕ್ರಮ ವಹಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಎಂದು ಅವರು ಆರೋಪಿಸಿದರು.

ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳಾದ ತಾವುಗಳು ಬಡಪಾಯಿ ಕಾರ್ಮಿಕರ ಬಗ್ಗೆ ಕರುಣೆ ತೋರಿ ಸಂಬಳ ಯೋಚಿಸಿ ಅದನ್ನು ಬ್ಯಾಂಕ್ ಖಾತೆ ಮೂಲಕ ಸಂದಾಯ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಪೆÇೀಲಂಪಲ್ಲಿ ಅವರು ಮನವಿ ಮಾಡಿಕೊಂಡರು.