ಅರಣ್ಯ ಅಧಿಕಾರಿ ಆತ್ಮಹತ್ಯೆ

ಸಂಡೂರು ಜ 05 : ಇಲ್ಲಿನ ಉಪವಲಯ ಅರಣ್ಯಾಧಿ ಕಾರಿ ಬಸವರಾಜ ವೀರಾಪುರ (31) ಮೊನ್ನೆ ಭಾನವಾರ ರಾತ್ರಿ ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಗಾವತಿ ತಾಲ್ಲೂಕಿನ ಜಮಾಪುರದ ಬಸವರಾಜ ಈಚೆಗೆ ಮದುವೆಯಾಗಿದ್ದರು. ನಿನ್ನೆ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.