ಅರಣ್ಯಾಧಿಕಾರಿಗಳಿಗೆ ಸನ್ಮಾನ

ಶಿರಹಟ್ಟಿ,ಡಿ25 : ಪಟ್ಟಣದ ವಲಯ ಅರಣ್ಯಾಧಿಕಾರಿ ಎ ಎಚ್. ಮುಲ್ಲಾ ಹಾಗೂ ಪ್ರಭಾರ ವಲಯ ಅರಣ್ಯಾಧಿಕಾರಿ ಎಸ್ ಬಿ. ಪೂಜಾರ ಮುಖ್ಯಮಂತ್ರಿ ಪದಕ ಪಡೆದ ಇವರನ್ನು ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಮಾನವ ಹಕ್ಕುಗಳ ರಕ್ಷಣಾ ಸಮಿತಿ ವತಿಯಿಂದ ಸನ್ಮಾನಿಸಿದರು.
ಈ ವೇಳೆ ಗದಗ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅರುಣಕುಮಾರ ತಿರ್ಲಾಪೂರ ಮಾತನಾಡುತ್ತಾ, ಶಿರಹಟ್ಟಿ ತಾಲೂಕಿನಲ್ಲಿ ಹೇರಳವಾದ ನೈಸರ್ಗಿಕ ಸಂಪತ್ತು ಹೊಂದಿದ್ದು. ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಬಿಂಬಿತವಾಗಿ, ದೇಶ ವಿದೇಶಗಳಲ್ಲಿ ಹೆಸರನ್ನು ಪಸರಿಸಿದ್ದು, ಸಾವಿರಾರು ಔಷಧಿ ಗುಣ ಹೊಂದಿರುವ ಸಸ್ಯಗಳು ಇವೆ. ಇತ್ತೀಚಗೆ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಸರಕಾರ ಘೋಷಣೆ ಮಾಡಿದ್ದು, ಸಸ್ಯಕಾಶಿಯನ್ನು ಕಾಯುವ ಕೆಲಸದಲ್ಲಿ ವಲಯ ಅರಣ್ಯಾಧಿಕಾರಿಗಳು ತುಂಬಾ ಶ್ರಮವಹಿಸಿದ್ದಾರೆ. ಇವರ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ ಇತ್ತೀಚೆಗೆ ಮುಖ್ಯಮಂತ್ರಿ ಪದಕ ನೀಡಿದ್ದು, ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹನುಮಂತ ವಡ್ಡರ, ನೌಶಾದ ಶಿಗ್ಲಿ, ಉಮೇಶ ವಡ್ಡರ, ಮಂಜುನಾಥ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.