ಅರಟಾಳ – ಐಗಳಿ ರಸ್ತೆ ಕಾಮಗಾರಿ ಕಳಪೆ.! ಗುತ್ತಿಗೆದಾರನಿಂದ ರಾತ್ರಿ ವೇಳೆ ಕಾಮಗಾರಿ : ಗ್ರಾಮಸ್ಥರ ಅಕ್ರೋಶ

ಅಥಣಿ: ಎ.10:ವಿಧಾನಸಭಾ ಚುನಾವಣೆಯ ದಿನಗಳು ಸಮೀಪಿಸುತ್ತಿದ್ದಂತೆ ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳ ಕಾಮಗಾರಿಗಳನ್ನು ಹಗಲು ರಾತ್ರಿ ಎನ್ನದೆ ತರಾತುರಿಯಲ್ಲಿ ದುರಸ್ತಿ ಹಾಗು ಡಾಂಬರೀಕರಣ ಕಾಮಗಾರಿಗಳು ನಡೆಯುತ್ತಿದೆ. ಈ ಕಾಮಗಾರಿಗಳು ಕಳಪೆ ಮಟ್ಟದ್ದಾಗಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೇರಿಕೊಂಡು ಜನರ ಕಿವಿಗೆ ಹೂವು ಇಡುವ ಕೆಲಸವನ್ನ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಹೌದು ಇದಕ್ಕೆ ನಿದರ್ಶನ ಎಂಬಂತೆ ಅಥಣಿ ತಾಲೂಕಿನ ಅರಟಾಳ – ಐಗಳಿ ರಸ್ತೆ ಕಾಮಗಾರಿ ತರಾತುರಿಯಲ್ಲಿ ನಡೆಸಲಾಗುತ್ತಿದ್ದು, ಈ ಕಾಮಗಾರಿ ಅತ್ಯಂತ ಕಳಪೆ ಮಟ್ಟದ್ದಾಗಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಿಲ್ಲ, ಗುತ್ತಿಗೆದಾರರಿಗೆ ಎಷ್ಟು ಬಾರಿ ಹೇಳಿದರೂ ಉಡಾಫೆ ಮಾತನಾಡುತ್ತಾನೆ ಎಂದು ಅರಟಾಳ ಗ್ರಾಮಸ್ಥರು ಗುರುವಾರ ಸಾಯಂಕಾಲ ಕಳಪೆ ಕಾಮಗಾರಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿ ಪ್ರಸಂಗ ನಡೆದಿದೆ.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ರಾಮಪ್ಪ ಪೂಜಾರಿ ಮಾತನಾಡಿ ಅರಟಾಳ ಗ್ರಾಮದಿಂದ ಐಗಳಿ ವರೆಗಿನ 8 ಕಿಲೋ ಮೀಟರ್ ರಸ್ತೆ ಕಾಮಗಾರಿ ಒಟ್ಟು 3.90 ಲಕ್ಷ ರೂ ಅನುಧಾನ ರಸ್ತೆಗಳ ಅಭಿವೃದ್ಧಿಗಾಗಿ ಮಂಜೂರಾಗಿದ್ದು, ಕಳೆದ ಒಂದು ವರ್ಷದ ಹಿಂದೆ ರಸ್ತೆ ಕಾಮಗಾರಿಗೆ ಭೂಮಿ ಪೂಜೆಯಾಗಿದ್ದರೂ ಕಾಮಗಾರಿ ಕೆಲಸ ಮಾತ್ರ ಆಮೆ ಗತಿಯಲ್ಲಿ ಸಾಗುತ್ತ ಬಂದಿದೆ. ಚುನಾವಣೆ ಸಂದರ್ಭದಲ್ಲಿ ಈಗ ಹಗಲು- ರಾತ್ರಿ ಎನ್ನದೆ ತರತುರಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಈ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದ್ದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇದರ ಗುಣಮಟ್ಟವನ್ನ ಪರಿಶೀಲಿಸಬೇಕು, ಉತ್ತಮ ಗುಣಮಟ್ಟದ ರಸ್ತೆ ತಯಾರಿಸಬೇಕು. ಕಳಪೆ ಮಟ್ಟದ ಕಾಮಗಾರಿಯನ್ನು ಕೈಕೊಳ್ಳಲು ನೋವು ಬಿಡುವುದಿಲ್ಲ ಎಂದು ಡಾಂಬರೀಕರಣಕ್ಕೆ ಆಗಮಿಸಿದ ವಾಹನವನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಶ್ರೀಶೈಲ ಪೂಜಾರಿ, ಅಣ್ಣಪ್ಪ ಕಾಂಬಳೆ, ಕಲ್ಲಪ್ಪ ಪಾಟೀಲ, ರುಪೇಶ ಘಾಟಗೆ, ಮಿಥುನ ಘಾಟಗೆ, ಮಾಣಿಕ ಸಿಂಧೂರ, ಹಣಮಂತ ಕುಳ್ಳೋಳಿ, ಮಹಾತೇಶ ಸಿಂಧೂರ, ಅಪ್ಪಸಾಬ ನಾಯಿಕ ಇನ್ನಿತರರು ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಗ್ರಾಮಸ್ಥರು ಮುಂದೆ ನಿಂತು ಕಳಪೆಯಾಗದಂತೆ ಮಾಡಿಕೊಳ್ಳಬೇಕು. ಇಗಾಗಲೇ ನಾನು ಗುತ್ತಿಗೆದಾರನ ಜೊತೆಗೆ ಮಾತನಾಡಿದ್ದೇನೆ. ರಾತ್ರಿ ವೇಳೆ ರಸ್ತೆಯ ಕಾಮಗಾರಿ ಕೆಲಸ ಮಾಡದೇ ಕೇವಲ ಹಗಲು ಹೊತ್ತಿನಲ್ಲಿ ಕೆಲಸ ಮಾಡಿಸುವಂತೆ ಸೂಚಿಸಿದ್ದೇನೆ. ನಾನು ಕೂಡ ಶೀಘ್ರದಲ್ಲಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯನ್ನ ಪರಿಶೀಲಿಸುತ್ತೇನೆ.
– ಎಂ. ರುದ್ರಗೌಡ, ಅಭಿಯಂತರ, ಹಿಪ್ಪರಗಿ ನೀರಾವರಿ ಯೋಜನೆ, ಅಥಣಿ.