ಅರಕೇರಿ ಗ್ರಾಮದಲ್ಲಿ ಸೌರಶಕ್ತಿ ಚಾಲಿತ ಶೀತಲ ಘಟಕದ ಉದ್ಘಾಟನೆ

ವಿಜಯಪುರ:ಜೂ.3: ಮೌಲ್ಯವರ್ಧನೆ ಮಾಡಿ ಹೆಚ್ಚಿನ ಆದಾಯ ಪಡೆಯಲು ರೈತ ಉತ್ಪಾದಕ ಕಂಪನಿಗೆ ಬಹಳ ಸಹಾಯ ಕಾರಿಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರೂಪ ಎಲ್ ಹೇಳಿದರು.
ಅವರು ಈಚೆಗೆ ಕೃಷಿಇಲಾಖೆ, ನಬಾರ್ಡ, ಸೆಲ್ಕೊ ಫೌಂಡೇಶನ್ ಹಾಗೂ ವಿಶಾಲಾ ಸಂಸ್ಥೆ ಇವರ ಸಹಯೋಗದಲ್ಲಿ 10 ಮೆಟ್ರಿಕ್ ಟನ್ ಸಾಮ್ಯರ್ಥದ ಸೌರಶಕ್ತಿ ಚಾಲಿತ ಶೀತಲಘಟಕವನ್ನು ಅರಕೇರಿಯಲ್ಲಿ ಉದ್ಘಾಟಿಸಿ ಮಾತನಾಡಿದರು.
ಶೀತಲ ಘಟಕದ ಮಹತ್ವ, ನಿರ್ವಹಣೆ ಹಾಗೂ ಅವುಗಳ ಸದಪಯೋಗದ ಕುರಿತು ಮಾಹಿತಿ ನೀಡಿದರಲ್ಲದೇ ರೈತರು ಬೆಳೆದ ಹಣ್ಣುಗಳು, ತರಕಾರಿಗಳು, ಬೆಳೆಕಾಳಗಳು ಹಾಗೂ ಸಿರಿ ಧಾನ್ಯಗಳನ್ನು ಸಂಗ್ರಹಿಸುವದು ಅವಶ್ಯವಾಗಿದೆ ಎಂದರು.
ಸೆಲ್ಕೊ ಫೌಂಡೇಶನ್‍ದ ಪ್ರಕಾಶಮೇಟಿ ಮಾತನಾಡಿ, ಜೀವನಾಧಾರಿತ ಚಟುವಟಿಕೆಗಳಾದ ಹಿಟ್ಟಿನ ಗಿರಣಿ, ಖಾರಾ ಕುಟ್ಟುವ ಯಂತ್ರ, ಶಾವಗಿ, ರೊಟ್ಟಿ, ಅಡುಗೆ ಎಣ್ಣೆ, ಖವಾ, ಕುಂಬಾರಿಕೆ, ಅಕ್ಕಿ ಇತ್ಯಾದಿಗಳಿಂದ ಮೌಲ್ಯವರ್ಧನೆ ಮಾಡುವ ಯಂತ್ರಗಳ ಸೌಲಭ್ಯದ ಹಾಗೂ ಹಣಕಾಸಿನ ನೆರವು ಕುರಿತು ಮಾಹಿತಿ ನೀಡಿದರು.
ಸೆಲ್ಕೋ ಫೌಂಡೇಶನ್‍ದ ತಿಪ್ಪೇಶ ಮಾತನಾಡಿ, ಕೃಷಿ ಹಾಗೂ ಪಶು ಸಂಗೋಪನಾ ಚಟುವಟಿಗಳಗೆ ಪೂರಕವಾಗುವ ಯಂತ್ರಗಳ ಲಭ್ಯತೆ ಹಣಕಾಸಿನ ನೆರವು ಹಾಗೂ ತಾಂತ್ರಿಕತೆ ಕುರಿತು ಮಾಹಿತಿ ನೀಡಿದರಲ್ಲದೇ, ಬೇರೆ ಜಿಲ್ಲೆಗಳಲ್ಲಿ, ಶೀತಲಘಟಕದ ಉಪಯೋಗ ಮಾಡಿ ಕೊಂಡ ಸೌರಶಕ್ತಿ ಬಳಕೆಯ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿದ್ದ ನಬಾರ್ಡ ಜಿಲ್ಲಾ ಅಭಿವೃದ್ದಿ ವ್ಯವಸ್ಥಾಪಕ ವಿಕಾಸ ರಾಠೋಡ ಮಾತನಾಡಿ, ಅಮೋಘಸಿದ್ಧೇಶ್ವರ ರೈತ ಉತ್ಪಾದಕ ಕಂಪನಿ ರಚನೆಯಾಗಿದ್ದು, ರೂರಲ್ ಮಾರ್ಟ (ಮೋಬೈಲ್ ವ್ಯಾನ), ಸೌಲಭ್ಯಪಡೆದಿದ್ದು ರೈತರು ಬೆಳೆದ ಉತ್ಪನ್ನಗಳನ್ನು ಸಂಗ್ರಹಿಸಿ, ವಿಂಗಡಿಸಿ, ಶ್ರೇಣಿಕರಣ ಹಾಗೂ ಮೌಲ್ಯವರ್ಧಿತ ಪದಾರ್ಥಗಳನ್ನು ತಯಾರಿಸಿ ರೂರಲ್ ಮಾರ್ಟನಲ್ಲಿ ಮಾರಾಟ ಮಾಡಿ ಹೆಚ್ಚಿನ ರೀತಿಯಲ್ಲಿ ಉತ್ಪನ್ನದಾಯಕ ಚಟುವಟಿಕೆಯಾಗಿ ಮುಂದುವರೆಯಲು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಕೇರಿಯ ಶ್ರೀ ಅಮೋಘಸಿದ್ದೇಶ್ವರ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಅಧ್ಯಕ್ಷ ಪೀರ ಪಟೇಲ ಪಾಟೀಲ ವಹಿಸಿದ್ದರು.
ಮುಖ್ಯಅತಿಥಿಗಳಾಗಿ ಸೆಲ್ಕೋ ಫೌಂಡೇಶನ್‍ದ ಆನಂದ ಗ್ರಾಮ ಅರಕೇರಿ ಪಂಚಾಯತ ಕಾರ್ಯದರ್ಶಿ ಚಂದ್ರಶೇಖರ ಬಿದರಿ ಉಪಸ್ಥಿತರಿದ್ದರು.
ವಿಶಾಲಾ ಸಂಸ್ಥೆಯ ನಿರ್ದೇಶಕಿ ಸರೋಜಾ ಕೌಲಾಪೂರ ಸ್ವಾಗತಿಸಿ ಮಾತನಾಡಿ, ಸಂಸ್ಥೆ ನಡೆದು ಬಂದ ದಾರಿ ಅರಕೇರಿ ಗ್ರಾಮ ದಲ್ಲಿ ಕೈಕೊಂಡ ವಿವಿಧಯೋಜನೆಗಳು/ಕಾರ್ಯಕ್ರಮಗಳು, ಮಹಿಳಾಸಬಲಿಕರಣ, ಸುಸ್ಥಿರ ಕೃಷಿ, ಸಮುದಾಯ ಸಂಘಟನೆಗಳು ಕುರಿತು ಮಾಹಿತಿ ನೀಡಿದರು.
ಶ್ರೀ ಅಮೋಘಸಿದ್ದೇಶ್ವರ ರೈತ ಉತ್ಪಾದಕ ಕಂಪನಿಯ ಸಿಇಓ ಎಂ ಕೆ ಶೇಖ ಮಾತನಾಡಿ, ಕಂಪನಿಯಲ್ಲಿ 510 ಶೇರುದಾರರಿದ್ದು ಕಳೆದ 3 ವರ್ಷಗಳಲ್ಲಿ 1.24 ಕೋಟಿ ರೂ ವಹಿವಾಟು ಮಾಡಿದ್ದು, ರೈತ ಉತ್ಪಾದಕ ಕಂಪನಿಯ ಎಲ್ಲಾ ದಾಖಲಾತಿಗಳು ಲಭ್ಯವಿದೆ. ಈ ಶೀತಲ ಘಟಕವನ್ನು ರೈತರ ಬೆಳದ ಉತ್ಪನ್ನಗಳನ್ನು ಸಂಗ್ರಹಿಸಿ ಮಾರುಕಟ್ಟೆ ಮಾಡಲು ಅವಕಾಶ ವಿರುವ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಮುದಾಯದಿಂದ ಸಿದ್ದಪ್ಪಾ ಚಡಚಣ, ರಮೇಶ ಬೆಳ್ಳುಬ್ಬಿ, ಶೈನಾಬಾಯಿ, ಮಲ್ಲಿಕಾರ್ಜುನ ಸಂಸ್ಥೆ ಹಾಗೂ ಇಲಾಖೆಗಳಿಂದ ಪಡೆದ ಯೋಜನೆಗಳು ಹಾಗೂ ಅದರ ಸದುಪಯೋಗದ ಬಗ್ಗೆ ಅನುಭವ ಹಂಚಿಕೊಂಡರು.