ಅರಕೇರಾ : ೯ ಜನರಿಗೆ ಕೋವಿಡ್ ದೃಡ

ಅರಕೇರಾ.ಮೇ.೨೯- ಕೊರೋನಾಗೆ ಯಾರು ನಿರ್ಲಕ್ಷಿಸದೇ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ಮುಕ್ತ ಗ್ರಾಮವನ್ನಾಗಿ ಮಾಡಲು ಗ್ರಾಮಸ್ಥರ ಸಹಕಾರದೊಂದಿಗೆ ವೈರಸ್ ವಿರುದ್ದ ಪಣತೋಡಣವೆಂದು ತಾಲ್ಲೂಕಾ ಪಂಚಾಯತಿ ಕಾರ್ಯನಿವಾಹಕ ಅಧಿಕಾರಿ ಪಂಪಾಪತಿ ಹಿರೇಮಠ ಗ್ರಾಮಸ್ಥರಿಗೆ ಹೇಳಿದರು.
ಅವರು ಅರಕೇರಾ ಗ್ರಾಮದಲ್ಲಿ ಸಾರ್ವಜನಿಕರಿಗೆ ಕೋರೋನಾ ವೈರಸ ಬಗ್ಗೆ ಜನಜಾಗೃತಿ ಹಾಗೂ ಟಾಸ್ಕ ಪೋರ್ಸ ಸಮಿತಿವತಿಯಿಂದ ಮನೆ ಮನೆಗೆ ತೆರಳಿ ಕೊರೋನಾ ಜಾಗೃತಿ ಮೂಡಿಸಿ ಕೋರೋನಾ ತಡೆಗಟ್ಟಲು ಎಲ್ಲರು ಮನೆಯಿಂದ ಹೊರಗಡೆ ಬರದೇ ಮನೆಯಲ್ಲಿರುವಂತೆ ಹೇಳಿದರು.
ಗ್ರಾಮದಲ್ಲಿ ಈಗಾಗಲ್ಲೇ ಹೆಚ್ಚು ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ಭಯದ ವಾತಾವರಣ ನಿರ್ಮಾಣವಾಗಿದೆ. ಸೋಂಕಿನ ನಿಯಂತ್ರಣಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಂಪಾಪತಿ ಹಿರೇಮಠ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿ ವೆಂಕಟಪ್ಪ ಅವರ ನೇತೃವದಲ್ಲಿ ಕೊರೋನಾ ಸೋಂಕಿತರ ಮನೆಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಜಾಗೃತಿಯನ್ನು ಮೂಡಿಸಿದರು. ಅವರನ್ನು ದೇವದುರ್ಗದ ಕೋವಿಡ್ ಕ್ವಾರೆಂಟೈನ್ ಆರೈಕೆ ಕೇಂದ್ರಕ್ಕೆ ದಾಖಲಾಗುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಗ್ರಾಮದಲ್ಲಿ ಇಂದು ೯ ಸೋಂಕಿತರನ್ನು ಕ್ವಾರೆಂಟೈನ್ ಆರೈಕೆ ಕೇಂದ್ರಕ್ಕೆ ಕಳುಹಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾz ಬೂದೇಪ್ಪ ಯಾದವ ,ಅರಕೇರಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ನಾಗೇಶಶ್ಯಾವಿ ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ಗ್ರಾ.ಪಂಸಿಬ್ಬಂದಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.