ಅರಕೇರಾ: ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ

ಅರಕೇರಾ.ನ.೮-ಹಳ್ಳಿ-ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ. ಸ್ವಚ್ಛತೆಯಿಂದ ಅಭಿವೃದ್ಧಿಯತ್ತ ಸಾಗಬಹುದು ಯಶಸ್ವಿಯಾಗಬೇಕಾದರೆ ಗ್ರಾಮ ಪಂಚಾಯತಿ ಮತ್ತು ಗ್ರಾಮಸ್ಥರು ಅಭಿಯಾನದಲ್ಲಿ ಭಾಗವಹಿಸಿದಾಗ ಮಾತ್ರ ಗ್ರಾಮಗಳಲ್ಲಿ ಸ್ವಚ್ಚೆಯನ್ನು ಕಾಪಾಡಲು ಸಾಧ್ಯವೆಂದು ಕೆಚ್ಚೆದೆಯ ಕನ್ನಡತಿ ಅಕ್ಕ ಅನು ಸಮಾಜ ಸೇವಕಿ ಹೇಳಿದರು.
ಅವರು ಅರಕೇರಾ ಗ್ರಾಮದಲ್ಲಿನ ಶ್ರೀ ಭಾಗ್ಯವಂತಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಸ್ವಚ್ಛ ಭಾರತ ಮತ್ತು ಸರ್ಕಾರಿ ಶಾಲೆಗಳನ್ನು ಉಳಿಸಿ ಅಭಿಯಾನದಲ್ಲಿ ಮಾತನಾಡಿದರು. ಸ್ವಾಸ್ಥ್ಯ ಮನಸ್ಸಿನಿಂದ ಪ್ರತಿಯೊಬ್ಬರು ಇಂತಹ ಕಾರ್ಯಗಳಲ್ಲಿ ಭಾಗವಹಿಸಬೇಕು. ದೇವಸ್ಥಾನಗಳು, ಸರ್ಕಾರಿ ಶಾಲೆಗಳು, ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದಾಗಿ ಅನೇಕ ಯುವ ಜನೆತೆ ಒಂದು ಹೊಸ ಪರಿಕಲ್ಪನೆ ಮೂಡಬಹುದು ಎಂಬ ಮಹಾದಾಸೆ ಇದೆ ಎಂದು ಹೇಳಿದರು.
ದೇವಸ್ಥಾನದ ಸುತ್ತಲಿನ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಸುಮಾರು ೧೦೦ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಅರಕೇರಾ ಪಟ್ಟಣದಲ್ಲಿ ಇನ್ನೂ ೦೩ ದಿನಗಳವರೆಗೆ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ವಾಟ್ಸಪ್ ಮತ್ತು ಪೇಸ್ ಬುಕ್‌ಗಳಲ್ಲಿ ಅವರು ಮಾಡುವ ಕಾರ್ಯನೋಡುತ್ತಿದ್ದವರಿಗೆ ಇಂದು ಅರಕೇರಾ ಗ್ರಾಮಕ್ಕೆ ಬಂದು ಸ್ವಚ್ಚೆಯ ಕಾರ್ಯ ಕೈಗೊಂಡಿರುವ ಇವರಿಗೆ ಮಕ್ಕಳು ಹಾಗೂ ಅಭಿಮಾನಿಗಳು ಅನುಅಕ್ಕನ ಪಕ್ಕದಲ್ಲಿ ನಿಂತುಕೊಂಡು ಪೋಟೋ ತೆಗೆಸಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತ್ತು. ಅವರ ಜೋತೆಯಲ್ಲಿ ಸ್ವಚ್ಚೆಯ ಕಾರ್ಯದಲ್ಲಿ ಭಾಗವಹಿಸಿ ಸುತ್ತಮುತ್ತಲ್ಲಿನ ಗ್ರಾಮದಿಂದ ಅಭಿಮಾನಿಗಳು ನಮ್ಮ ಗ್ರಾಮದಲ್ಲಿ ಕೂಡಾ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಿರಿ ಎಂದು ಅಭಿಮಾನಿಗಳು ಬಂದು ಅವರಿಗೆ ತಿಳಿಸಿದರು ಅವರು ಕೂಡಾ ಬರುವುದಾಗಿ ಹೇಳಿ ಕಳುಹಿಸಿದರು. ಕೈ ಜೋಡಿಸಿದ ಗ್ರಾಮ ಪಂಚಾಯತ ಸ್ವಚ್ಛೆಮಾಡಿದ ಕಸವನ್ನು ಗ್ರಾಮ ಪಂಚಾಯತಿಯ ಕಸವಿಲೇವಾರಿ ವಾಹನದೊಂದಿಗೆ ಸಾಗಿಸಲಾಯಿತು.
ಸಂದರ್ಭದಲ್ಲಿ ಮಹಾಂತೇಶ ಪೂಜಾರಿ, ಸಂಗಮೇಶ ತಾಳಿಕೋಟಿ, ಅರುಣ ಕುಮಾರ ಅಂಗಡಿ, ಸೂಗುರೇಶ್ವರ ಎಸ್ ಗುಡಿ, ಗ್ರಾಪಂ ಮಾಜಿ ಸದಸ್ಯ ಹನುಮಂತ್ರಾಯ ಗಾಲಿ, ವಿಜಯ ಮಹಾಂತೇಶ ಹಿರೇಮಠ, ರಹೀಂ ಖಾಜಿ, ಖಾದರ್ ಸಾಬ ಟೈಲರ್, ವೀರಭದ್ರ ಕುಂಬಾರ, ಮಹಾದೇವ ಸ್ವಾಮಿ, ಗಣೇಶ ಯಲ್ಲಾಪುರ, ಗಣೇಶ ಅಂಚೆ, ಶರತ್ ಜಮಾದರ್, ಬಾಗೇಶ ನಾಯಕ ರೇಕಲಮರಡಿ ಬಂಡೇಶ ನಾಯಕ ಶಿವರಾಜಗುರಿಕಾರ, ಶೇಖಮೈಹಿಬೂಬು , ರಂಗನಾಥ ಪೂಜಾರಿ,ಕ್ರೀಷ್ಟಪ್ಪ ಡ್ರೈವರ, ಗುಲ್ಲೇಶಕುಮಾರ, ಚನ್ನಬಸವ ಗುತ್ತೇದಾರ, ಬಸವಟೈಲರ್, ನರಸಿಂಹಪೂಜಾರಿ, ಮುದಿರಂಗಪ್ಪ,ಇನ್ನಿತರರು ಇದ್ದರು.