ಅರಕೇರಾ : ವಿಶ್ವ ಪರಿಸರ ದಿನಾಚರಣೆ


ಅರಕೇರಾ.ಜೂ.೦೬-ಪ್ರತಿಯೊಬ್ಬರು ಪರಿಸರದ ಬಗ್ಗೆ ಕಾಳಜಿವಹಿಸುವದು ಮುಖ್ಯವಾಗಿದ್ದು ಇಂದು ವಿಶ್ವ ಪರಿಸರ ದಿನಚರಣೆ ಅಂಗವಾಗಿ ಬಸ್ಸುನಿಲ್ದಾಣ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಮಾಜಿಕ ಅರಣ್ಯಿಇಲಾಖೆ ದೇವದುರ್ಗ ಹಾಗೂ ಅರಕೇರಾ ಗ್ರಾಮಪಂಚಾಯತ ಆಡಳಿತ ಮಂಡಳಿಯವತಿಯಿಂದ ಸಸಿನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗಿಡನೆಡುವ ಮೂಲಕ ಸ್ವಚ್ಚ ಸುಂದರ ಹಾಗೂ ಹಸಿರು ಪರಿಸರದ ಸಂಕಲ್ಪ ತೋಟ್ಟು ಗಿಡಗಳನ್ನು ಬೆಳಸಿ ಭೂಮಿಯ ನೈಸರ್ಗಿಕ ಸೌಂದರ್ಯವನ್ನು ಕಾಪಾಡುವುದೇ ನಮ್ಮೆಲ್ಲರ ಜವ್ದಾಬಾರಿಯಾಗಿದೆಂದು ಅರಕೇರಾ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಾದ ಬೂದೇಪ್ಪ ಯಾದವ ಅಭಿಪ್ರಾಯಪಟ್ಟರು.
ಗಿಡಮರಗಳನ್ನು ಬೆಳಸುವುದರಿಂದ ಸ್ವಚ್ಚತೆ ಮತ್ತು ಶಾಂತಿಯುತ ವಾತವರಣ ನಿರ್ಮಾಣವಾಗುತ್ತಿದೆ ನಮ್ಮ ಮುಂದಿನ ಪಿಳಿಗೆಗೆ ನಾವುಕೊಡುವ ಶ್ರೇಷ್ಟ ಉಡುಗೂರೆಯಾಗಿದೆಂದರು.
ಸಂದರ್ಭದಲ್ಲಿ ತಿಮ್ಮಪ್ಪನಾಯಕಪೋಲಿಸ್ ಪಾಟೀಲ್ ಮಾಜಿ ಗ್ರಾ.ಪಂ.ಅಧ್ಯಕ್ಷರು ಹಾಲಿ ಸದಸ್ಯರು,ಬಿಜೆಪಿ ಯುವಮುಖಂಡರಾದ ಕೆ.ಭಗವಂತ್ರಾಯನಾಯಕ ಡಾ||ರಾಘವೇಂದ್ರವಡಿಗೇರಾ ಮುದುಕಪ್ಪ ಮೇಣಸಿನಕಾಯಿ ಸಾಮಾಜಿಕ ಅರಣ್ಯಿಇಲಾಖೆ ವನಪಾಲಕರಾದ ರಾಮಣ್ಣ, ಅರಣ್ಯ ಪ್ರೇರಕರಾದರಂಗಣ್ಣನಾಯಕ ಮರಕಂದಿನ್ನಿ,ಹನುಮಂತ್ರಾಯಪೂಜಾರಿ, ಯಮನಪ್ಪ ಕುಂಬಾರ ಬಿಲ್ ಕಲ್ಟೇರ್ ಶೇಖರಪ್ಪ ಗುಡಿ ಡ್ರೈವರ,ಶಿವರಾಜ ಡ್ರೈವರ ಬಿ.ಗಣೇಕಲ್, ಮಹ್ಮದ ಇದ್ರೀಸ್ ಅಮರೇಶಬಳೆಗಾರ, ಗುಲ್ಲೇಶಕುಮಾರ ಗ್ರಾಮದ ಯುವಕರು ಭಾಗವಹಿಸಿದ್ದರು.
ಸಿದ್ದಯ್ಯಹವಲ್ದಾರ ಸರಕಾರಿ ಬಾಲಕರ ಪ್ರೌಢಶಾಲೆ ಅರಕೇರಾದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಶಾಲಾ ಆವರಣದಲ್ಲಿ ಮುಖ್ಯೋಪಾದಯ್ಯರಾದ ಜಗದೀಶಪ್ಪ ಬಿ.ಗಣೇಕಲ್ ಸಸಿನೆಡುವ ಮೂಲಕ ಪರಿಸರ ದಿನಾಚರಣೆ ಆಚರಣೆ ಮಾಡಲಾಯಿತು.