ಅರಕೇರಾ : ವಿವಿಧ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆ

ಅರಕೇರಾ.ಸೆ.೦೭- ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದಲ್ಲಿನ ಶ್ರೀ ಸಿದ್ದಯ್ಯ ಹವಲ್ದಾರ ಸರಕಾರರಿ ಪದವಿಪೂರ್ವಕಾಲೇಜು,ಶ್ರೀಸಿದ್ದಯ್ಯ ಹವಲ್ದಾರ ಸರಕಾರಿ ಬಾಲಕಿಯರ ಪ್ರೌಢಶಾಲೆ.ಸರಕಾರಿ ಬಾಲಕಿಯರ ಪ್ರೌಢಶಾಲೆ.ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ.ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಮಾಲಿಗೌಡಓಣಿ.ಮೌಲನ ಆಜಾದ ಶಾಲೆ.ಸರಕಾರಿ ಉರ್ದು ಶಾಲೆ ,ಸರಕಾರಿ ಆದರ್ಶವಿದ್ಯಾಲಯ ಸೇರಿದಂತೆ ಎಲ್ಲಾ ಶಾಲೆಗಳಲ್ಲಿ ಮಕ್ಕಳು ಹಾಗೂ ಶಿಕ್ಷಕರು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
ಸರಕಾರಿ ಆದರ್ಶವಿದ್ಯಾಲಯದಲ್ಲಿ ಮಕ್ಕಳು ಸೇರಿಕೊಂಡು ವಿಶಿಷ್ಠರೀತಿಯಲ್ಲಿ ಶಿಕ್ಷಕರ ದಿನಾಚರಣೆ ಮಾಡಲಾಯಿತು. ಮುಂಜಾನೆ ವಿದ್ಯಾರ್ಥಿಗಳು ,ವಿದ್ಯಾರ್ಥಿನಿಯರು ಸೇರಿಕೊಂಡು ಶಾಲಾ ಶಿಕ್ಷಕರಿಗೆ ಕ್ರೀಡೆಗಳನ್ನು ಆಯೋಜನೆಮಾಡಿದರು ಕ್ರೀಡೆಮತ್ತು ಕ್ಷೀಜ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು ಭಾಗವಹಿಸಿದ ಶಿಕ್ಷಕರಿಗೆ ಮಕ್ಕಳು ಸನ್ಮಾನಿಸಿ ಬಹುಮಾನ ಮತ್ತು ನೆನೆಪಿನಕಾಣಿಕೆ ನೀಡಿದರು. ಮದ್ಯಾಹ್ನ ಉಟದ ಸಮಯದಲ್ಲಿ ಸಹಿ ಹಂಚಿದರು ಒಟ್ಟಾರೆ ಮಕ್ಕಳು ಸೇರಿಕೊಂಡು ದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆಮಾಡಿದರು.
ಇದೇ ಸಂದರ್ಭದಲ್ಲಿ ವೇದಿಕೆಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ವೇದಿಕೆಯಲ್ಲಿ ಶಿಕ್ಷಕರಿಗೆ ಮಾತ್ರ ವೇದಿಕೆ ತೈಯಾರಿಸಿ ಕೆಕ್ ಕತ್ತರಿಸಿದ ಮುಖ್ಯೋಪಾಧ್ಯಯರಾದ ಕುಮಾರಸ್ವಾಮಿ ಹಿರೇಮಠ,ಹಿರಿಯ ಶಿಕ್ಷಕರಾದ ಶ್ರೀಶೈಲಾ.ಮಂಜುನಾಥ. ಬದ್ರಣ್ಣ, ಮಲ್ಲಿಕಾರ್ಜುನ, ಚನ್ನಮಲ್ಲಪ್ಪ, ಸಿದ್ದಾರಾಮಪ್ಪ, ಶಾಂತಾಬಾಯಿ, ಅತಿಥಿ ಶಿಕ್ಷಕರಾದ ಬಸ್ಸಮ್ಮ, ಮುದಕಪ್ಪ,ರೇಣುಕಾ, ಮೈನಾವತಿ,ಬಸನಗೌಡ, ಬಸವರಾಜ,ಪ್ರಶಿಕ್ಷಣಾರ್ಥಿಯಾದ ಕೃಷ್ಣವೇಣಿ ಮುಂತಾದವರು ಉಪಸ್ಥಿತರಿದ್ದರು ವಿಜೃಂಬಣೆಯಿಂದ ಮತ್ತು ಅದ್ದೂರಿಯಾಗಿ ಶಿಕ್ಷಕರ ದಿನಾಚರಣೆ ಆಚರಣೆಮಾಡಿ ಗಮನಸೇಳೆದರು.