ಅರಕೇರಾ : ಪ್ರತಿಭಾ ಕಾರಂಜಿ ಕಾರ್ಯಕ್ರಮ

ಅರಕೇರಾ,ಸೆ.೦೯-
ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೋಳಿಸುವುದೇ ಪ್ರತಿಭಾ ಕಾರಂಜಿಯ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕೆ,ಅನಂತರಾಜನಾಯಕ ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ರಾಯಚೂರು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳವರ ಕಾರ್ಯಲಯ ದೇವದುರ್ಗ ಸಮೂಹ ಸಂಪನ್ಮೂಲ ಕೇಂದ್ರ ಅರಕೇರಾ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ದೇಗಳು ೨೦೨೩-೨೪ ನೇ ಸಾಲಿನ ಪ್ರತಿಭಾ ಕಾರಂಜಿ ಸ್ಪರ್ದೆಯ ಕಾರ್ಯಕ್ರಮವನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ರಂಗಮ್ಮನಾಯಕ ಉದ್ಘಾಟಿಸಿದರು ಅರಕೇರಾ ಪಟ್ಟಣದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಜರುಗಿತ್ತು.
ಅದರಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಮಕ್ಕಳ ಪ್ರತಿಭೆಗಳನ್ನು ಸಾಂಸ್ಕೃತಿಕ ಚಟುವಟಿಕೆಗಳು ಮೂಲಕ ಅನಾವರಣ ಮಾಡಲು ಪ್ರತಿಭಾ ಕಾರಂಜಿ ವ್ಯಾಪ್ತಿಯಲ್ಲಿಬರುವದರಿಂದ ಕಾರ್ಯಕ್ರಮದಲ್ಲಿ ಮಕ್ಕಳು ಭಾಗವಹಿಸಿವುದರ ಜತೆಗೆ ಕಲಾಭಿರುಚಿಯ ಸಾಮರ್ಥ್ಯವನ್ನು ಹೆಚ್ಚಿಸಲು ಇದೊಂದು ಉತ್ತಮ ವೇದಿಕೆಯಾಗಿದೆಂದರು.
ಮುಖ್ಯ ಅತಿಥಿಗಳಾಗಿ ಮತನಾಡಿದ ರಾಜಶೇಖರನಾಯಕ ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕರು ಗ್ರಾಮೀಣಾ ಭಾಗದ ಪ್ರತಿಯೊಂದು ಮಗುವಿನಲ್ಲಿ ಒಂದಲ್ಲ ಒಂದು ಸಾಂಸ್ಕೃತಿಕ ಪ್ರತಿಭೆ ಅಡಗಿರುತ್ತದೆ.ಅದನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸುವಲ್ಲಿ ಶಿಕ್ಷಕರ ಶ್ರಮ ಮಹತ್ವದ್ದು ಎಂದರು. ಕ್ಲಸ್ಟರ ಮಟ್ಟದಿಂದ ರಾಷ್ಟ್ರಮಟ್ಟ ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕು ಎಂದರು.ನಮ್ಮೂರಿನಲ್ಲಿ ಪ್ರತಿಯೊಬ್ಬರಿಗೂ ಗ್ರಾಮದಲ್ಲಿ ಶಿಕ್ಷಣ ಸಿಗುವಂತದಗಾಲಿ ಎಂದು ತಮ್ಮ ಜಮ್ಮೀನನ್ನು ದಾನವನ್ನಾಗಿ ಸರಕಾರಿ ನೀಡಿದ್ದರಿಂದ ಗ್ರಾಮದಲ್ಲಿ ಅಂದು ಪ್ರಾಥಮಿಕ ಶಾಲೆಗೆ ಭೂಮಿದಾನಮಾಡಿದ ರಾಜಾಕ್ರೀಷ್ಟಪ್ಪನಾಯಕರವರ ಶಿಕ್ಷಣ ಕಾಳಜಿಯಿಂದ ಪ್ರಾಥಮಿಕ ಶಾಲೆ ಮತ್ತೇ ಪ್ರೌಢಶಾಲೆಗೆ ಭೂಮಿಧಾನಮಾಡಿದ ಶ್ರೀಸಿದ್ದಯ್ಯ ಹವಲ್ದಾರ. ಹಾಗೂ ಮಕ್ಕಳಿಗೆ ಆಟವಾಡಲು ಕ್ರೀಡಾಂಣ ನಿರ್ಮಾಣಕ್ಕೆ ಭೂಮಿದಾನ ಮಾಡಿದ ಶ್ರೀಎ.ವೆಂಕಟೇಶನಾಯಕ ಸೇರಿದಂತೆ ಮೂರು ಜನರು ದಾನಮಾಡಿರುವ ವ್ಯಕ್ತಿಗಳು ಇವರನ್ನು ನೆನೆಯುವದು ಮತ್ತು ಅವರ ಮೂರ್ತಿಗಳನ್ನು ನಿರ್ಮಾಣಮಾಡಲು ಗ್ರಾಮ ಪಂಚಾಯತ ಆಡಳಿತ ಮಂಡಳಿಯವರು ಮುಂದಾಗಬೇಕಾಗಿದೆಂದರು.
ಪ್ರಾಸ್ತವಿಕವಾಗಿ ಶಿವುಕುಮಾರನಾಡಗೌಡ ಬಿಆರ್ ಪಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಉದ್ಘಾಟನೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀಮತಿ ರಂಗಮ್ಮನಾಯಕ ಸತ್ಯನಾರಾಯಣನಾಯಕ ಪೋಪಾ. ಅತಿಥಿಗಳಾಗಿ ಚನ್ನವಿರಯ್ಯಸ್ವಾಮಿ ಹಿರೇಮಠ, ವೀರುಪಣ್ಣನಾಯಕದೊರೆ, ಮುದಕಪ್ಪನಾಯಕ ನಿವೃತ್ತಿ ಶಿಕ್ಷಕ, ಕೆ,ಭಗವಂತ್ರಾಯನಾಯಕ.ಸಿದ್ದಾರ್ಥ ಹವಲ್ದಾರ .ಜಾವೀದ್ ಆರ್ ಚಿಂಚೋಳಿಕರ ಎಸ್ ಡಿಎಂಸಿ ಅಧ್ಯಕ್ಷರು. ಬಾಷಸಾಬವೈಲ್ಡಿಂಗ್,ರವಿನಾಯಕ, ಬೀಮಣ್ಣನಾಯಕಕೋಣಚಪ್ಪಳಿ, ಬೂದೇಪ್ಪ ಪರ್ಸಲ್,ವಿದ್ಯಾವತಿ ಹಿರೇಮಠ ಪ್ರಭಾರಿ ಪ್ರಾಚಾರ್ಯರು ಶ್ರೀ ಸಿದ್ದಯ್ಯ ಹವಲ್ದಾರ ಸರಕಾರಿ ಪದವಿ ಪೂರ್ವಕಾಲೇಜು, ಬೂದೇಪ್ಪ ಯಾದವ ಪಿಡಿಒ. ಬಸವರಾಜ ಸಿಆರ್ ಪಿ.ಬಸವರಾಜನಾಯಕ ಶಿಕ್ಷಕರ ಸಂಘದ ನಿರ್ದೇಶಕರು ಮುಖ್ಯೋಪಾಧ್ಯಯರಾದ ಮುರುಳಿದರ ರಾವ್,ದೇವಿಂದ್ರಕುಮಾರ, ಹುಸೇನಬಾಷ,ಕುಮಾರಸ್ವಾಮಿ ಹಿರೇಮಠ,ಹನುಮಯ್ಯನಾಯಕ ಅರಳೆಬಂಡೆ, ಬಗಯ್ಯನಾಯಕ ಎಸ್ ಡಿ ಎಂಸಿ ಅಧ್ಯಕ್ಷರು ಪಾತರಗುಡ್ಡ ಇತರರು ಇದ್ದರು. ಪ್ರತಿಭಾ ಕಾರಂಜಿ ಸ್ಪರ್ದೇಯಲ್ಲಿ ಪ್ರೌಢಶಾಲೆ ಹಿರಿಯ ಪ್ರಾಥಮಿಕ ಶಾಲೆ ಕಿರಿಯ ಪ್ರಾಥಮಿಕ ಶಾಲೆಗಳು ಸೇರಿದಂತೆ ಸುಮಾರು ೧೭ ಶಾಲೆಗಳು ಭಾಗವಹಿಸಿದ್ದವು.ಕಾರ್ಯಕ್ರಮನಿರೂಪಣೆ ಸ್ವಾಗತ: ರೀಯಾಜ್ ಸಹಶಿಕ್ಷಕರಿಂದ