
ಅರಕೇರಾ,ಏ.೨೭- ನಮ್ಮದೇಶ ಪ್ರಜಾಪ್ರಭುತ್ವ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವ ಹಕ್ಕು ಇದೆ ನಿಮ್ಮ ಮತ ಬಹಳ ಪವಿತ್ರವಾದದ್ದು ಅದನ್ನು ಯಾವುದೇ ರೀತಿಯ ಅಮೀಷಗಳಿಗೆ ಗುಂಡಾಗಿರಿ ದಬ್ಬಾಳಿಕೆಗೆ ಬಲಿಯಾಗದೇ ನಿಮ್ಮ ತಾಲೂಕಿಗೆ ಮತ್ತು ಗ್ರಾಮಕ್ಕೆ ಅಭಿವೃದ್ಧಿ ಮಾಡುವಂತಹ ಯೋಗ್ಯ ವ್ಯಕ್ತಿಗೆ ನಿಮ್ಮ ಮತ ಚಲಾಯಿಸಬೇಕು ಎಂದು ಡಿ.ವೈ.ಎಸ್. ಪಿ ಎಲ್.ವೇಣುಗೋಪಾಲ ಹೇಳಿದರು.
ಅವರು ಅರಕೇರಾ ಪಟ್ಟಣದಲ್ಲಿನ ಶ್ರೀಮಹರ್ಷೀ ವಾಲ್ಮೀಕಿ ವೃತ್ತದಲ್ಲಿ ಮತದಾನ ಪ್ರತಿಜ್ಞಾ ವಿಧಿ ಬೋಧಿಸುವ ಸಂದರ್ಭದಲ್ಲಿ ಮಾತನಾಡಿ ಅವರು ಮೇ ೧೦ರಂದು ಕರ್ನಾಟಕ ವಿಧಾನಸಭೆಗೆ ನಡೆಯುವ ಸಾರ್ವತ್ರೀಕ ಚುನಾವಣೆ ಯಲ್ಲಿ ಎಲ್ಲಾರೂ ಕಡ್ಡಾಯ ವಾಗಿ ಮತದಾನ ಮಾಡಬೇಕೆಂದು ಸಾರ್ವಜನಿಕರಿಗೆ ಹೇಳಿದರು.
ಮತದಾನ ಪ್ರತಿಜ್ಞಾ ವಿಧಿಯನ್ನು.ಕೆ.ಹೊಸಕೇರಪ್ಪ ಬೋಧಿಸಿದರು ಸಾರ್ವಜನಿಕರು ಬಲಗೈ ಮುಂದೆ ಮಾಡಿ ಮತದಾನ ಪ್ರತಿಜ್ಞೆ ವಿಧಿ ಸ್ವೀಕರಿಸಿದರು.ಸಂದರ್ಭದಲ್ಲಿ ಸೇನಾಪಡೆಯ ಅಸಿಸ್ಟೆಂಟ್ ಕಮಾಂಡರ್ ಜ್ಯೋತಿ ರಂಜನ್ ಐಟಿಬಿಟಿ ಇನ್ಸ್ಪೆಕ್ಟರ್ ಪಂಕಜ್ ರೈ ಮತ್ತು ದೇವದುರ್ಗ ಪೋಲಿಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.