ಅರಕೇರಾ,ಏ.೨೬- ಪಟ್ಟಣದಲ್ಲಿನ ಎಲ್ಲಾ ವಾರ್ಡ್‌ಗಳಲ್ಲಿ ಐಟಿಬಿಪಿ ಮತ್ತು ಸಿಆರ್‌ಪಿಎಫ್ ಮತ್ತು ಪೋಲಿಸ್ ಇಲಾಖೆಯವತಿಯಿಂದ ಮೇ ೧೦ ರಂದು ನಡೆಯುವ ರಾಜ್ಯ ವಿಧಾನಸಭಾ ಚುನಾವಣೆ ೨೦೨೩ ರ ಹಿನ್ನೆಯಲ್ಲಿ ಪಟ್ಟಣದಲ್ಲಿ ಪಥ ಸಂಚಲನ ನಡೆಯಿತು.
ದೇವದುರ್ಗ ಪೋಲಿಸ್ ಠಾಣಾ ಅಧಿಕಾರಿಯಾದ ಕೆ.ಹೊಸಕೆರಪ್ಪ ಮಾತನಾಡಿ ಯಾವುದೇ ಅಂತಕವಿಲ್ಲದೇ ಮತದಾನ ಪ್ರಕಿಯೆಯಲ್ಲಿ ಪ್ರತಿಯೊಬ್ಬರೂ ನಿರ್ಭಯಿಂದ ಮತದಾನ ಮಾಡಿ ಎಂದು ಹೇಳಿದರು. ಮತದಾನ ಪ್ರತಿಯೊಬ್ಬರ ಹಕ್ಕು ಹಾಗೂ ಕರ್ತವ್ಯವಾಗಿದ್ದು, ಯಾರೂ ಹೊರಗೆ ಉಳಿಯಾಬಾರದು ಎಂದು ತಿಳಿಸಿದರು.
ಪಟ್ಟಣಕ್ಕೆ ಪಥ ಸಂಚಲನ ಆಗಮಿಸಿದ ಐಟಿಬಿಪಿ ಮತ್ತು ಸಿಆರ್‌ಪಿಎಫ್ ಮತ್ತು ಪೋಲಿಸ್ ಇಲಾಖೆ ಸಿಬ್ಬಂದಿಯವರನ್ನು ಗ್ರಾಮಸ್ಥರು ಮಹಾತ್ಮಾ ಗಾಂಧಿ ವೃತ್ತದಲ್ಲಿ ಅದ್ದೂರಿಯಾಗಿ ಹೂಗುಚ್ಚ ನೀಡುವುದರಮೂಲಕ ಸ್ವಾಗತಿಸಿಕೊಂಡರು ಇದೇ ಸಂದರ್ಬದಲ್ಲಿ ತುಂತುರು ಮಳೆ ಹನಿಗಳ ಜೊತೆಯಲ್ಲಿ ಆಣೆಕಲ್ಲು ಮಳೆಯು ಕೂಡಾ ಸ್ವಾಗತಿಸಿತು.ಸುಮಾರು ೧ ಘಂಟೆಗಳ ಕಾಲ ಮಳೆ ಸುರಿದು ಪಟ್ಟಣದಲ್ಲಿ ತಂಪುವಾತಾವರಣ ನಿರ್ಮಾಣಗೊಂಡಿತು.