ಅರಕೇರಾ ತಾಲೂಕಿಗೆ ತಹಸೀಲ್ದಾರ್ ಯಲ್ಲಪ್ಪ ಸುಬೇದಾರ ಅಧಿಕಾರ ಸ್ವೀಕಾರ

ಅರಕೇರಾ,ಮಾ.೧೪- ನೂತನ ತಾಲೂಕು ಕೇಂದ್ರ ಅರಕೇರಾಕ್ಕೆ ತಹಸೀಲ್ದಾರರಾಗಿ ಯಲ್ಲಪ್ಪ ಸುಬೇದಾರ ಅಧಿಕಾರ ಸ್ವೀಕರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂತನ ತಾಲೂಕಿನ ವ್ಯಾಪ್ತಿಗೆ ಒಳಪಡುವ ಹಳ್ಳಿಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸಾರ್ವಜನಿಕರಿಗೆ ಕಂದಾಯ ಸೇವೆಗಳು, ವಿಳಾಸ ಬದಲಾವಣೆ, ನಾಮಫಲಕ ಬದಲಾವಣೆ, ಕಡತಗಳ ಬದಲಾವಣೆ, ದಾಖಲೆ ತಿದ್ದುಪಡಿ ಸೇರಿ ಇನ್ನಿತರ ಬದಲಾವಣೆಗೆ ೬-೮ ತಿಂಗಳುಗಳ ಕಾಲಾವಕಾಶ ಬೇಕಾಗುತ್ತದೆ.
ತಾಲೂಕು ಕಚೇರಿಗೆ ೨೮ ಸಿಬ್ಬಂದಿ ಅವಶ್ಯವಿದೆ. ನೂತನ ತಾಲ್ಲೂಕಿಗೆ ಸಂಬಂಧಿಸಿದ ದಾಖಲೆಗಳ ಸಂಗ್ರಹಕ್ಕೆ ಕಟ್ಟಡದ ಅವಶ್ಯಕತೆಯಿದೆ. ತಾತ್ಕಾಲಿಕವಾಗಿ ಇಲ್ಲಿನ ಡಿಪ್ಲೋಮಾ ಕಾಲೇಜು ಕಟ್ಟಡದಲ್ಲಿ ತಾಲ್ಲೂಕು ತಹಸೀಲ್ದಾರರ ಕಚೇರಿಯನ್ನು ಪ್ರಾಂಭಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ತಾಲ್ಲೂಕಿನ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸೇವೆ ಒದಗಿಸಲು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಾಗುವುದು ಎಂದು ನೂತನ ತಹಸೀಲ್ದಾರ ಯಲ್ಲಪ್ಪ ಸುಬೇದಾರ ಹೇಳಿದರು.