ಅರಕೇರಾ : ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಣೆ

ಅರಕೇರಾ.ಜು.೨೧- ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದಲ್ಲಿನ ಶ್ರೀ ಸಿದ್ದಯ್ಯ ಹವಲ್ದಾರ ಸರಕಾರಿ ಬಾಲಕರ ಪ್ರೌಢ ಶಾಲೆ ಮಕ್ಕಳಿಗೆ ಕ್ರೀಡಾಕೂಟದಲ್ಲಿ ಭಾಗವಹಿಸುವ ಮಕ್ಕಳಿಗೆ ಅರಕೇರಾ ಗ್ರಾಮದಲ್ಲಿನ ಕ್ಯಾದಿಗ್ಗೇರಾ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ದಿ.ವೆಂಕಟೇಶಪೂಜಾರಿಯವರ ಅಭಿಮಾನಿ ಬಳಗದವತಿಯಿಂದ ಮುಖಂಡರಾದ ಬಸವರಾಜಪೂಜಾರಿಯವರು ಸ್ಪೋರ್ಟ್ಸ eರ್ಸಿಗಳನ್ನು ಉಡುಗೊರೆಯಾಗಿ ನೀಡಿ ವಿತರಣೆಮಾಡಿದರು.
ಕ್ರೀಡಾ ಪಟುಗಳಿಗೆ ಸಮವಸ್ತ್ರನೀಡಿ ವಿದ್ಯಾರ್ಥಿಗಳಿಗೆ ಕ್ರೀಡೆಗಳಲ್ಲಿ ಭಾಗವಹಿಸಿಸಲು ಅನುಕೂಲಮಾಡಿಕೊಟ್ಟ ವಿ.ಬಿ ಪೂಜಾರಿಯವರ ಅಭಿಮಾನಿಗಳ ಬಳಗಕ್ಕೆ ಶಾಲಾ ಮುಖ್ಯೋಪಾದಯ್ಯರಾದ ಜಗದೀಶಪ್ಪ ಬಿ.ಗಣೇಕಲ್,ವೆಂಕಟೇಶಮಾಲಿಗೌಡ, ಕೆಂಚಣ್ಣ ಕಬ್ಬೇರ, ಮೈನೂ ಸಹಶಿಕ್ಷಕರಾದ ಚಿರಂಜೀವಿ,ವೆಂಕಟೇಶಪ್ಪ ಎಂ.ಕೋಲಾರ.ಹುಸೇನಬಾಷ,ರಾಜು, ಮಿನಾಕ್ಷಿ, ಪೌಜೀಯಾ ಬೇಗಂ ಮತ್ತು ಕ್ರೀಡಾಪಟುಗಳು ಭಾಗವಹಿಸಿದ್ದರು,