ಅರಕೇರಾ :ಕ್ರೀಡಾಕೂಟದಲ್ಲಿ ಭಾಗವಹಿಸುವ ಮಕ್ಕಳಿಗೆ ಸಮವಸ್ತ್ರ ವಿತರಣೆ

ಅರಕೇರಾ.ಜು.೨೩- ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದಲ್ಲಿನ ಸರಕಾರಿ ಆದರ್ಶವಿದ್ಯಾಲಯದ ಮಕ್ಕಳಿಗೆ ವಿವಿಧ ಕ್ರೀಡೆಯಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸುವ ಮಕ್ಕಳಿಗೆ ಗ್ರಾಮದಲ್ಲಿನ ಯುವ ಮುಖಂಡರುಗಳಾದ ಕೆ.ಭಗವಂತ್ರಾಯನಾಯಕ,ರವಿನಾಯಕ ಇವರು ಸ್ಪೋರ್ಟ್ಸ eರ್ಸಿಗಳನ್ನು ಉಡುಗುರೆಯಾಘಿ ನೀಡಿದರು.
ಕ್ರೀಡಾಪಟುಗಳಿಗೆ ಸಮವಸ್ತ್ರ ನೀಡಿ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಿಲು ಅನೂಕೂಲಮಾಡಿಕೊಟ್ಟ ಗ್ರಾಮದ ಯುವ ಮುಖಂಡರುಗಳಿಗೆ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷರಾದ ಸೂಗೂರೇಶ್ವರ ಎಸ್ ಗುಡಿ ಮತ್ತು ಮುಖ್ಯೋಪಾದಯ್ಯರಾದ ಕುಮಾರಸ್ವಾಮಿ ಹಿರೇಮಠ ಶಾಲಾ ಸುಧಾರಣಾ ಸಮಿತಿಯ ಸದಸ್ಯರುಗಳು ಅಭಿನಂಧಿಸಿದ್ದಾರೆ.ಸಂದರ್ಭದಲ್ಲಿ ಸಹಶಿಕ್ಷಕರಾದ ಶ್ರೀಶೈಲಾ,ಮಂಜುನಾಥ.ಚನ್ನಮಲ್ಲಪ್ಪ,ದೈಹಿಕ ಶಿಕ್ಷಕರಾದ ಮುದುಕಪ್ಪನಾಯಕ ಗಲಗ,ತಿಮ್ಮಣ್ಣನಾಯಕ ಜಲ್ಲೆ,ಹನುಂತ್ರಾಯನಾಯಕ(ಹಮ್ಮು)ಯಲ್ಲನಗೌಡನಾಯಕ ಸೇರಿದಂತೆ ಕ್ರೀಡಾಪಟುಗಳು ಉಪಸ್ಥಿತರಿದ್ದರು.