
ಯಾದಗಿರಿ : ಏ, 10 : ತಾಲೂಕಿನ ಅರಕೇರಾ ಕೆ ಗ್ರಾಮದ ಸರಕಾರಿ ಪ್ರೌಢ ಶಾಲೆಯಲಿ(ಆರ್‍ಎಂಎಸ್‍ಎ) ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಮಗ್ರ ಶಾಲಾ ಅಭಿವೃದ್ಧಿಯಡಿ ಅನುಷ್ಟಾನ ಮಾಡಿದ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಯಾದಗಿರಿ ಜಿಪಂ ಸಿಇಓ ಗರಿಮಾ ಪನ್ವಾರ ಅವರು ಪರಿಶೀಲನೆ ಮಾಡಿದರು.
ಇತ್ತೀಚೆಗೆ ತಾಲೂಕಿನ ಅರಕೇರಾ ಕೆ. ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿದ, ಅವರು ನರೇಗಾ ಯೋಜನೆಯಡಿ ಶಾಲಾ ಮಕ್ಕಳ ಸಮಗ್ರ ಶಿಕ್ಷಣದ ಅಭಿವೃದ್ಧಿಗೆ ಪೂರಕವಾದ ಭೋಜನಾಲಯ, ಬಾಸ್ಕೆಟ್ ಬಾಲ್, ಖೋ ಖೋ, ವಾಲಿಬಾಲ್, ಕಬ್ಬಡಿ, ರನ್ನಿಂಗ್ ಟ್ರಾ??ಕ್, ಕಾರಿಡಾರ್, ಶಾಲೆಗೆ ಕಾಂಪೌಂಡ್ ಗೇಟ್ ಅಳವಡಿಕೆ, ಶೌಚಾಲಯ, ಅಡುಗೆ ಕೋಣೆ, ಪೌಷ್ಟಿಕ ತೋಟ, ಬಯಲು ರಂಗಮಂದಿರ, ಡ್ರೈನೇಜ್ ಹಾಗೂ ಶಾಲಾ ಅವರಣದಲ್ಲಿ ವಿವಿಧ ಅರಣ್ಯ ಸಸಿಗಳ ನೆಟ್ಟಿರುವ ಕಾಮಗಾರಿಗಳನ್ನು ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಮೊದಲು ಮಕ್ಕಳು ಶಾಲಾವರಣದ ಬಯಲಿನಲ್ಲಿ ಕುಳಿತು ಬಿಸಿಯೂಟ ಸವಿಯುತ್ತಿದ್ದರು. ಬಿಸಿಲು, ಗಾಳಿ, ಮಳೆಗೆ ಮಕ್ಕಳ ಊಟದ ತಟ್ಟೆಯಲ್ಲಿ ಕಸ-ಕಡ್ಡಿ, ಧೂಳು ಬಿದ್ದು ಸಮಸ್ಯೆ ಅನುಭವಿಸುತ್ತಿದ್ದರು. ನೆರಳಲ್ಲಿ ಕುಳಿತು ಬಿಸಿಯೂಟ ಸವಿಯಲು ಹಾಗೂ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಕ್ಕೆ ಪೂರಕವಾಗಿ ಮಕ್ಕಳಿಗೆ ನರೇಗಾ ಯೋಜನೆಯಡಿ ಸುಸಜ್ಜಿತವಾದ ಭೋಜನಾಲಯ ನಿರ್ಮಿಸಿಕೊಡಲಾಗಿದೆ ಎಂದು ಯಾದಗಿರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಬೈ ಅವರು ಮಾಹಿತಿ ನೀಡಿದರು.
ಶಾಲಾ ಮಕ್ಕಳಲ್ಲಿನ ಕ್ರೀಡಾ ಪ್ರತಿಭೆ ಗುರುತಿಸಿ, ಪೆÇ್ರೀತ್ಸಾಹಿಸಲು ನರೇಗಾದಡಿ ನಿರ್ಮಿಸಿದ ವಿವಿಧ ಕ್ರೀಡಾ ಮೈದಾನಗಳ ಸದುಪಯೋಗದ ಪಡೆದು ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸುವ ಜತೆ ಮಕ್ಕಳ ಸಾಂಸ್ಕøತಿಕ ಚಟುವಟಿಕೆಗಳು, ಶಾಲಾ ಕಾರ್ಯಕ್ರಮಗಳ ನಿರ್ವಹಣೆ ಮಾಡಲು ಅಗತ್ಯವಾದ ಬಯಲು ರಂಗಮಂದಿರ ನಿರ್ಮಿಸಿದ್ದು, ಮಕ್ಕಳಲ್ಲಿನ ಬಹುಮುಖ ಪ್ರತಿಭೆ ಅರಳಿಸಲು ಸಕಲ ಸೌಲಭ್ಯಳನ್ನು ಕಲ್ಪಿಸಿದೆ. ಶಾಲಾ ಮುಖ್ಯ ಗುರುಗಳು ಹಾಗೂ ಶಿಕ್ಷಕರು ಜಿಲ್ಲೆಯಲ್ಲಿ ಮಾದರಿ ಶಾಲೆಯನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಇದೇ ವೇಳೆ ಶಾಲೆಗೆ ಹೊದಿಕೊಂಡ ಬಾಲಕಿಯರ ವಸತಿ ಶಾಲೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ಉದ್ಯಾನವನ ವೀಕ್ಷಿಸಿದರು. ಈ ಸಂದರ್ಭದಲ್ಲಿ ಯಾದಗಿರಿ ತಾಪಂ ಇಒ ಬಸವರಾಜ ಶರಬೈ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೌಲಾಲಿ ಪಠಾಣ ಐಕೂರು, ಕಾರ್ಯದರ್ಶಿ ರಾಜು ಪವಾರ, ಶಾಲಾ ಮಖ್ಯ ಗುರುಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು ಇದ್ದರು.