ಅರಕೇರಾದಲ್ಲಿ ಸಂಭ್ರಮದಿಂದ ಟಿಪ್ಪು ಜಯಂತಿ ಆಚರಣೆ

ಅರಕೇರಾ.ನ.೧೧- ಪಟ್ಟಣದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಿದರು. ಇಲ್ಲಿನ ಜಾಮಿಯಾ ಮಸೀದಿಯಿಂದ ಪ್ರಮುಖ ರಸ್ತೆ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಟಿಪ್ಪುವಿನ ಭಾವ ಚಿತ್ರವನ್ನು ಟಿಪ್ಪು ಸುಲ್ತಾನ್ ವೃತ್ತದ ವರೆಗೆ ಮೆರವಣಿಗೆ ಮಾಡಿದರು.
ಮುಸ್ಲಿಂ ಸಮಾಜದ ಯುವಕರು ಕುಣಿದು ಕುಪ್ಪಳಿಸಿ ಟಿಪ್ಪುವಿನ ಘೋಷಣೆ ಕೂಗಿ ಸಂಭ್ರಮಿಸಿದರು. ನಂತರ ಟಿಪ್ಪು ಸುಲ್ತಾನ್ ಭಾವ ಚಿತ್ರಕ್ಕೆ ಗಣ್ಯರು ಮಾಲಾರ್ಪಣೆ ಮಾಡಿದರು. ಕಾರ್ಯಕ್ರಮದ ಕುರಿತು ಬಿಜೆಪಿಯ ಹಿರಿಯ ಮುಖಂಡ ಕೆ.ಅನಂತರಾಜ ನಾಯಕ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ,ಮುದಕಪ್ಪನಾಯಕ ನಿವೃತ್ತ ಮುಖ್ಯೋಪಾಧ್ಯಾಯರು ಮಾತನಾಡಿದರು.
ಈ ವೇಳೆ ತಿಮ್ಮಪ್ಪ ನಾಯಕ ಪೋ.ಪಾ, ಬಸವರಾಜ ಪೂಜಾರಿ, ಕೆ.ಭಗವಂತ್ರಾಯ ನಾಯಕ, ಗ್ರಾಪಂ ಉಪಾಧ್ಯಕ್ಷ ಸಿದ್ದಪ್ಪ ಪೈಕಾರ, ನಾಗರಾಜ ನಾಯಕ ಕರ್ನಾಳ್, ಚಂದ್ರಶೇಖರ ಶೆಟ್ಟಿ, ರವಿ ಪತ್ತಾರ, ಮಹಾಂತೇಶ ಪೂಜಾರಿ, ರವಿ ನಾಯಕ, ಹನ್ಮಂತ್ರಾಯ ಪೂಜಾರಿ, ಗ್ರಾಪಂ ಸದಸ್ಯ ವೆಂಕಟೇಶ ಕರ್ನಾಳ್, ಶೇಖರಪ್ಪಗೌಡ ಮಾ.ಪಾ, ಬಸವ ಪೂಜಾರಿ, ಮುದುಕಪ್ಪ ಮೆಣಸಿನ ಕಾಯಿ,ಬೂದೇಪ್ಪ ಇರವಲಕುಂಟಾ, ಕರೀಂ ಸಾಬ್, ಹಫೀಸಾಬ್,ಅಲ್ಲಿಸಾಬ ಕರೆಂಟ್,ಸಲಿಂಸಾಬಬ ಟೈಲರ್. ಮೈಬೂಬ್ ಬಡಿಗೇರಾ, ಚಾಂದ್‌ಪಾಷ, ರಹೀಮ್ ಖಾಜಿ, ಟಿಪ್ಪು ಸುಲ್ತಾನ್ ತಾಲ್ಲೂಕ ಘಟಕದ ಅಧ್ಯಕ್ಷ ಖಾಜಾ ಸಾಬ್, ಉಪಾಧ್ಯಕ್ಷ ಯುಸುಬ್, ಸಾಹೇಬ್ ಹುಸೇನ್, ಇಮ್ರಾನ್ ಖಾನ್,sssದಾದ,ಸೋಪಿಸಾಬ, ಅರೂನ, ಸೇರಿದಂತೆ ಸಮಾಜದ ಮುಖಂಡರು ಹಾಗೂ ಯುವಕರು ಇನ್ನಿತರರು ಇದ್ದರು.