
ಅರಕೇರಾ,ಮೇ.೧೧- ಪಟ್ಟಣದಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆ ಮತದಾನ ಪ್ರಕ್ರಿಯೆ ಬುಧವಾರ ಶಾಂತಿಯುತವಾಗಿ ನಡೆದಿದ್ದು, ಶೇ. ೭೫ ರಷ್ಟು ಮತದಾನ ನಡೆದಿದೆ.
ಪಟ್ಟಣದಲ್ಲಿರುವ ೦೭ ಮತದಾನ ಕೇಂದ್ರಗಳಾದ ೧೮೨(ವಾರ್ಡ್ ನಂ.೧)-ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಉತ್ತರ ಭಾಗ) ೫೨೪, ೧೮೩ (ವಾರ್ಡ್ ನಂ.೨) -ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ದಕ್ಷಿಣ ಭಾಗ) ೭೬೩, ೧೮೪ (ವಾರ್ಡ್ ನಂ.೩) -ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಪಶ್ಚಿಮ ಭಾಗ) ೭೪೨, ೧೮೫ (ವಾರ್ಡ್ ನಂ.೪) -ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ದಕ್ಷಿಣ ಭಾಗ) ೭೯೧, ೧೮೬ (ವಾರ್ಡ್ ನಂ.೫) -ಗ್ರಾಪಂ ಕಟ್ಟಡ (ಉತ್ತರ ಭಾಗ) ೬೮೮, ೧೮೭ (ವಾರ್ಡ್ ನಂ.೬) – ಶ್ರೀ ಸಿದ್ದಯ್ಯ ಹವಲ್ದಾರ್ ಸರ್ಕಾರಿ ಬಾಲಕರ ಪ್ರೌಢ ಶಾಲೆ (ಬಲಭಾಗ) ೮೩೬, ೧೮೮ (ವಾರ್ಡ್ ನಂ.೭) – ಶ್ರೀ ಸಿದ್ದಯ್ಯ ಹವಲ್ದಾರ್ ಸರ್ಕಾರಿ ಬಾಲಕರ ಪ್ರೌಢ ಶಾಲೆ (ಎಡಭಾಗ) ೪೧೮, ೧೯೦- ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಳಜಾಡಲದಿನ್ನಿಯಲ್ಲಿ ೫೮೦ ಮತದಾನ ನಡೆದಿದ್ದು, ಒಟ್ಟು ೫೩೪೨ ಮತದಾನ ನಡೆದಿದೆ.
ಬೆ.೧೦ ಗಂಟೆವರೆಗೆ ನಿಧಾನಗತಿಯಲ್ಲಿ ಮತದಾನ ನಡೆದಿದ್ದು, ನಂತರ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯಿತು. ಬಿರುಬಿಸಿಲಿನಿಂದಾಗಿ ಮಧ್ಯಾಹ್ನದ ವೇಳೆಗೆ ತುಸು ಕಡಿಮೆ ಪ್ರಮಾಣದಲ್ಲಿ ಮತದಾನ ನಡೆದರೆ, ಸಂಜೆ ೩ ಗಂಟೆ ನಂತರ ಬಿರುಸಿನ ಮತದಾನ ನಡೆಯಿತು. ಸಂಜೆ ವೇಳೆಗೆ ಶಾಂತ ರೀತಿಯಲ್ಲಿ ಮತದಾನ ಮುಕ್ತಾಯಗೊಂಡಿತು.