ಅರಕೇರಾದಲ್ಲಿ ಶಾಂತಿಯುತ ಮತದಾನ

ಅರಕೇರಾ,ಮೇ.೧೦- ಪಟ್ಟಣದಲ್ಲಿ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ (ಮತಗಟ್ಟೆ ಸಂಖ್ಯೆ: ೧೮೪), ಕಾಂಗ್ರೆಸ್ ಅಭ್ಯರ್ಥಿ ಶ್ರೀದೇವಿ ರಾಜಶೇಖರ ನಾಯಕ (ಮತಗಟ್ಟೆ ಸಂಖ್ಯೆ: ೧೮೭) ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವಿ ನಾಯಕ (ಮತಗಟ್ಟೆ ಸಂಖ್ಯೆ: ೧೮೭) ಬೆಳಗ್ಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.
ಪಟ್ಟಣದಲ್ಲಿರುವ ೭ ಮತಗಟ್ಟೆಗಳಲ್ಲಿ ಬೆ.೧೦ ರವರೆಗೆ ನಿಧಾನಗತಿಯಲ್ಲಿ ಮತದಾನ ನಡೆದಿದ್ದು, ನಂತರ ಬಿರುಸಿನ ಮತದಾನ ನಡೆಯಿತು. ಚುನಾವಣಾ ಆಯೋಗ ವ್ಯವಸ್ಥಿತವಾಗಿ ಮತಗಟ್ಟೆ ಹಾಗೂ ಕೇಂದ್ರಗಳನ್ನು ತೆರೆದಿದ್ದರು. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಗ್ರಾ.ಪಂ ಕಟ್ಟಡ, ಶ್ರೀ ಸಿದ್ದಯ್ಯ ಹವಲ್ದಾರ್ ಸರ್ಕಾರಿ ಬಾಲಕರ ಪ್ರೌಢ ಶಾಲೆಗಳಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಪ್ರಥಮ ಬಾರಿಗೆ ಮತದಾನ ಮಾಡಿದ ಯುವ ಮತದಾರರು ಉತ್ಸುಕರಾಗಿ ಭಾಗಿಯಾಗಿದ್ದರು. ವಯೋವೃದ್ಧೆ ಶಾಮೀದಾ ಬೇಗಂ ಬಾಸ್ಮೀಯ ಬಳಿಗೆರ್ (೧೦೨) ವೀಲ್ ಚೇರ್ ನೊಂದಿಗೆ ಆಗಮಿಸಿ ಮತದಾನ ಮಾಡಿ ಗಮನಸೆಳೆದರು.
ಪೋಲಿಸ್ ಹಾಗೂ ಅರೆ ಸೇನಾ ಸಿಬ್ಬಂದಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.
೧ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ
೨ ಕಾಂಗ್ರೆಸ್ ಅಭ್ಯರ್ಥಿ ಶ್ರೀದೇವಿ ಆರ್. ನಾಯಕ
೩) ಮಾನ್ವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವಿ ನಾಯಕ
೪)ವಯೋವೃದ್ಧೆ ಶಾಮೀದಾ ಬೇಗಂ ಬಾಸ್ಮೀಯ ಬಳಿಗೆರ್ (೧೦೨) ವೀಲ್ ಚೇರ್ ನೊಂದಿಗೆ ಆಗಮಿಸಿ ಮತದಾನ ಮಾಡಿ ಗಮನಸೆಳೆದರು.