ಅರಂತೋಡು: ಮದರಸ ವಿದ್ಯಾರ್ಥಿಗಳಿಗೆ ಓದುವ ಪುಸ್ತಕಗಳ ಕೊಡುಗೆ

ಸುಳ್ಯ , ಜೂ.೧- ಅರಂತೋಡು ನುಸ್ರತ್ತುಲ್ ಇಸ್ಲಾಂ ಮದರಸ ಆನ್ ಲೈನ್ ತರಗತಿ ಜೂನ್ ೨ ರಂದು ಪ್ರಾರಂಭ ವಾಗಲಿರುವುದರಿಂದ ಮದರಸದ ೧ ನೇ ತರಗತಿಯಿಂದ ೧೦ ನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಓದುವ ಪುಸ್ತಕಗಳನ್ನು ಸೋಮವಾರ ವಿತರಿಸಲಾಯಿತು.
ಮದರಸದಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೆ ಓದುವ ಪುಸ್ತಕದ ಕೊಡುಗೆಯನ್ನು ಕೆ.ಎಂ.ಇಬ್ರಾಹಿಂ ಕುಕ್ಕುಂಬಳ ಮತ್ತು ಅವರ ಮಕ್ಕಳು ನೀಡಿ ಸಹಕರಿಸಿದರು. ಪುಸ್ತಕಗಳನ್ನು ಸ್ಥಳೀಯ ಖತೀಬರಾದ ಅಲ್ ಹಾಜ್ ಇಸಾಕ್ ಬಾಖವಿ ವಿತರಿಸಿದರು. ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಅಶ್ರಫ್ ಗುಂಡಿ ವಹಿಸಿದರು ದಾನಿಗಳಾದ ಅಮೀರ್ ಕುಕ್ಕುಂಬಳ , ಇಸ್ಮಾಯಿಲ್ ಕುಕ್ಕುಂಬಳ, ಕಾರ್ಯದರ್ಶಿ ಕೆ.ಎಂ.ಮೂಸಾನ್ ,ಮು ಅಝೀಮ್ ಸಾಜಿದ್ ಅಝ್ ಹರಿ, ಕೋಶಾಧಿಕಾರಿ ಬದುರುದ್ದೀನ್ ಪಠೇಲ್ , ಎ. ಹನೀಫ್ , ಸಿದ್ಧೀಕ್ ಎ.ಎ. ಉಪಸ್ಥಿತರಿದ್ದರು. ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ದಾನಿಗಳ ಕುಟುಂಬದವರಿಗೆ ವಿಶೇಷ ದುವಾ ನೆರವೇರಿಸಲಾಯಿತು.