ಅಯ್ಯಪ್ಪ ಸ್ವಾಮಿ ದೇವಾಲಯದ 9ನೇ ವಾರ್ಷಿಕೋತ್ಸವ

ಬಳ್ಳಾರಿ, ಮೇ.31: ನಗರದ ರಾಘವೇಂದ್ರ ಕಾಲೋನಿಯಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ 9ನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ದೇವಾಲಯದಲ್ಲಿ ಅಯ್ಯಪ್ಪಸ್ವಾಮಿ ವಿಗ್ರಹಕ್ಕೆ ವಿಶೇಷ ಪೂಜೆ, ಹೋಮ, ಅಭಿಷೇಕ, ಪ್ರಸಾದ ವಿತರಣೆ ನಡೆಯಿತು.
ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷ ಜಯಪ್ರಕಾಶ್ ಜೆ ಗುಪ್ತಾ ಮತ್ತಿತರರು ಮಾತ್ರ ಸೇರಿ ದೇವರಿಗೆ ಅಷ್ಟ ದ್ರವ್ಯ ಅಭಿಷೇಕ, ಧನ್ವಂತರಿ ಹೋಮ, ಮೊದಲಾದವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್.ಎಂ.ಮಂಜುನಾಥ, ಮಹೇಶ್, ಪೂಜಾರಿಗಳಾದ ಭರತ್, ಹರ್ಷ, ನಾಗರಾಜಸ್ವಾಮಿ, ರಾಘವೇಂದ್ರ, ಮೊದಲಾದವರು ಇದ್ದರು.