ಅಯ್ಯಪ್ಪ ದೇವಸ್ಥಾನದಲ್ಲಿ ಇರುಮುಡಿ ಸಮರ್ಪಣೆ

ಬಳ್ಳಾರಿ ಡಿ 27 : ನಗರದ ರಾಘವೇಂದ್ರ ಕಾಲೋನಿಯಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಾಡಿನ‌ ವಿವಿಧಡೆಯಿಂದ ಬಂದು ಭಕ್ತರು ತಮ್ಮ‌ ಇರುಮುಡಿಯನ್ನು ಸಮರ್ಪಿಸುತ್ತಿದ್ದಾರೆ.
ಇಂದು ಬೆಳಗಾವಿಯ 18, ರಾಮದುರ್ಗಂನ ಐದು, ಆದೋನಿಯ ಐದು, ಬಳ್ಳಾರಿ ನಗರದ ಒಂಭತ್ತು ಮತ್ತು ವಿವಿದಡೆಯಿಂದ ಬಂದ ಒಟ್ಟು 42 ಜನರು ತಮ್ಮ ಇರುಮುಡಿ ಸಮರ್ಪಿಸಿ ದೇವರಿಗೆ ತುಪ್ಪದ ಅಭಿಷೇಕ ಮಾಡಿ ದರ್ಶನ ಪಡೆದರು.
ಈ ವರಗೆ ಈ ದೇವಸ್ಥಾನದಲ್ಲಿ 350 ಜನರುಬತಮ್ಮ ಇರುಮುಡಿಯನ್ನು ಸಮರ್ಪಿಸಿದ್ದಾರೆಂದು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಜಯಪ್ರಕಾಶ್ ಜೆ. ಗುಪ್ತಾ ತಿಳಿಸಿದ್ದಾರೆ.