ಅಯ್ಯಪ್ಪಸ್ವಾಮಿ ಮಾಲಾಧಾರಿಗಳು 41ದಿನಗಳ ಪೂಜಾನುಷ್ಠಾನ ಕೈಗೊಳ್ಳಬೇಕು

ಚಿಂಚೋಳಿ,ಡಿ.27- ತಾಲೂಕಿನ ಗಡಿಭಾಗದ ತೆಲಂಗಾಣದ ತಾಂಡೂರ್ ನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜಾ ಅಂಗವಾಗಿ ಪಡಿ ಪೂಜಾ ಕಾರ್ಯಕ್ರಮವನ್ನು ಜರುಗಿತು. ಪಡಿ ಪೂಜೆ ಕಾರ್ಯಕ್ರಮವನ್ನು ಪದ್ಮಾಕರ ಗುರುಸ್ವಾಮಿ ಅವರ ಪರಿವಾರ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
ಪಡಿ ಪೂಜಾ ಕಾರ್ಯಕ್ರಮ ಉದ್ದೇಶಿಸಿ ಚೆನ್ನೈಯಿಂದ ಆಗಮಿಸಿದ ಶ್ರೀಧರ ಗುರುಸ್ವಾಮಿ ಅವರು ಮಾತನಾಡಿ, ಅಯ್ಯಪ್ಪ ಸ್ವಾಮಿ ಮಾಲಾ ಹಾಕುವರು ಕಡ್ಡಾಯವಾಗಿ 41 ದಿನಗಳ ಕಾಲ ನಿಷ್ಠೆಯಿಂದ ಪೂಜೆ ಮಾಡಿ ಅಯ್ಯಪ್ಪಸ್ವಾಮಿ ದೇವರನ್ನು ನೆನೆದು ಕೊಂಡು ವ್ರತ ಅನುಷ್ಠಾನ ಕೈಗೊಳ್ಳಬೇಕು ಮತ್ತು ಕೇರಳ ರಾಜ್ಯದ ಶಬರಿಮಲೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ದೇವಾಲಯದಲ್ಲಿ 18 ಮೆಟ್ಟಿಲು ಏರುವಾಗ ಒಂದೊಂದು ಮೆಟ್ಟಿಲು ಒಂದೊಂದು ದೇವರ ಮೆಟಲ್ ಆಗಿದ್ದು ಭಕ್ತಿಯಿಂದ ಪೂಜೆ ಮಾಡಿ ಮೆಟ್ಟಿಲನ್ನು ಹತ್ತಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾತ ತಾಂಡೂರ್ ಮಣಿಕಂಠ ಆಶ್ರಮ ಗುರು ಸ್ವಾಮಿಗಳಾದ ಶಾಂತಕುಮಾರ ಜಲ್ಲು. ಶಿವಸ್ವಾಮಿಯ ಮಾಲಧಾರಿ ಯಾದ ಸೋಮು ಶಿವ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಮಾದರಿಯಾದ ಹನುಮಂತು ಶಿವ ಸ್ವಾಮಿ. ಅಯ್ಯಪ್ಪಸ್ವಾಮಿ ಮಾಲದಾರ ಕೇಶವ ರೆಡ್ಡಿ ಸ್ವಾಮಿ. ಜೈಪಾಲ ರೆಡ್ಡಿ ಸ್ವಾಮಿ. ಬದ್ರು ಗುರುಸ್ವಾಮಿ. ನರಸಿಂಹಲು ಗೌಡ್ಸ್ ಸ್ವಾಮಿ. ರಾಜಶೇಖರ್ ರೆಡ್ಡಿ ಸ್ವಾಮಿ. ನರೇಶ್ ಗುರುಸ್ವಾಮಿ. ಓಂಕಾರ್ ಸೀನು ಗುರುಸ್ವಾಮಿ. ವಿಜಯವಾರ್ಧನ. ಸಂಗಮೇಶ್ವರ ಸ್ವಾಮಿ. ನವೀನ ಸ್ವಾಮಿ. ವೀರೇಶ ಸ್ವಾಮಿ. ಚಿರಂಜೀವಿ ಗುರುಸ್ವಾಮಿ. ವೆಂಕಟ್ ರೆಡ್ಡಿ ಸ್ವಾಮಿ. ಪ್ರವೀಣ್ ಶೆಟ್ಟಿ ಸ್ವಾಮಿ. ವಿಜಯ ಸ್ವಾಮಿ. ವಿನಯ ಸ್ವಾಮಿ. ಹನುಮಂತ ಗುರುಸ್ವಾಮಿ. ಬೀರಪ್ಪ ಗುರುಸ್ವಾಮಿ.ಪೆÇೀಚಪ್ಪ ಸ್ವಾಮಿ. ಮುನ್ನಯ್ಯ ಸ್ವಾಮಿ. ಸಂಜೀವ ಕುಮಾರ ಪಾಟೀಲ ಸ್ವಾಮಿ ಚಿಂಚೋಳಿ. ಬನ್ನಪ್ಪ ಸ್ವಾಮಿ. ದತ್ತು ಗುರುಸ್ವಾಮಿ. ತಾಂಡೂರ್ ಅಯ್ಯಪ್ಪ ಸ್ವಾಮಿ ದೇಗುಲದ ಪೂಜಾರಿ ಆದ ಕುಮಾರಸ್ವಾಮಿ. ಮತ್ತು .ಅಯ್ಯಪ್ಪ ಸ್ವಾಮಿ ಮಾಲಾ ಹಾಕಿ ಸ್ವಾಮಿಗಳು ಪಡಿ ಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.