ಅಯ್ಯಪ್ಪಸ್ವಾಮಿ ಅಭಿಷೇಕ, ಹೋಮ,  ದೀಪೋತ್ಸವ, ಪಡಿಪೂಜೆ

ಸಂಜೆವಾಣಿ ವಾರ್ತೆ 

ದಾವಣಗೆರೆ.ಡಿ.20: ದಾವಣಗೆರೆ ಜಿಲ್ಲಾ ಸಾರ್ವಜನಿಕ ಅಯ್ಯಪ್ಪ ಸೇವಾ ಟ್ರಸ್ಟ್ ವತಿಯಿಂದ ದಾವಣಗೆರೆಯಲ್ಲಿ ಪ್ರಪ್ರಥಮ ಬಾರಿಗೆ ಅಯ್ಯಪ್ಪಸ್ವಾಮಿ ಮಹೋತ್ಸವ ಇದೇ 23 ಹಾಗೂ 24 ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಎಂ.ಚೌವ್ಹಾಣ್ ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೊದಲನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿ ಅಭಿಷೇಕ, ಹೋಮ ಮತ್ತು ದೀಪೋತ್ಸವ ಹಾಗೂ ಪಡಿಪೂಜೆ ಕಾರ್ಯಕ್ರಮ 23 ಹಾಗೂ 24ರಂದು ಹೊಳೆಹೊನ್ನೂರು ತೋಟದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.ಲೋಕಕಲ್ಯಾಣಾರ್ಥವಾಗಿ 23ರ ಶನಿವಾರ ಬೆಳಿಗ್ಗೆ ಗಂಟೆಯಿಂದ ಗಣಹೋಮ, ಸುದರ್ಶನ ಹೋಮ ಹಾಗೂ ಅಯ್ಯಪ್ಪ ಸ್ವಾಮಿಯ ಬೆಳ್ಳಿರಥದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11ಕ್ಕೆ ವಿಶೇಷವಾದ ಮಹಾಮಂಟಪದಲ್ಲಿ ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ ಹಾಗೂ ಶ್ರೀ ಅಯ್ಯಪ್ಪಸ್ವಾಮಿಗೆ ಅಷ್ಟ ಅಭಿಷೇಕ ಮತ್ತು ಶೋಡಷೋಪಚಾರ ಪೂಜೆಯನ್ನು ನೆರವೇರಿಸಲಾಗುತ್ತದೆ. ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ, ರವಿರಾಜ್, ಬಿ.ಜಿ.ವಿನಯಕುಮಾರ್, ಶ್ರೀನಿವಾಸ ಶಿವಗಂಗಾ, ಬಸವರಾಜ್ ಶಿವಗಂಗಾ, ದೇವೇಂದ್ರಪ್ಪ, ಕೆ.ಎಸ್. ಬಸವಂತಪ್ಪ, ವಿನಾಯಕ ಪೈಲ್ವಾನ್ ಇತರರು ಆಗಮಿಸಲಿದ್ದಾರೆ ಎಂದು ತಿಳಿಸಿದರು.