ಅಯ್ಯಪ್ಪನ ದರ್ಶನ ಭಕ್ತರಿಗೆ ಮಿತಿ

ಕೇರಳ, ನ. ೬- ಶಬರಿ ಮಲೆಯ ಮಂಡಳ ಮಕರ ವಿಳಕ್ಕು ವರ್ಷದ ಕಾರ್ಯಕ್ರಮಕ್ಕೆ ತೆರಳುವ ಭಕ್ತರಿಗೆ ಕೇರಳ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರತಿದಿನ ಒಂದು ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅಯ್ಯಪ್ಪ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕೇರಳ ಸರ್ಕಾರದ ಹೊಸ ಮಾರ್ಗಸೂಚಿಯ ಪ್ರಕಾರ ಪ್ರತಿದಿನ ಒಂದು ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶವಿದ್ದು, ವಾರಾಂತ್ಯದಲ್ಲಿ ಪ್ರತಿ ಎರಡು ಸಾವಿರ ಯಾತ್ರಾರ್ಥಿಗಳಿಗೆ ಅವಕಾಶವಿರುತ್ತದೆ. ಯಾತ್ರೆಗೆ ಹೋಗುವ ಎಲ್ಲಾ ಭಕ್ತರು ಶಬರಿ ಮಲೈ ವೆಬ್ ಸೈಟ್ ಕೋರ್ಟ್‌ನಲ್ಲಿ ನೋಂದಾಣಿ ಮಾಡಿಕೊಳ್ಳಲು ಸೂಚನೆ ನೀಡಿದೆ.
ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್ ಮುಂತಾದ ಕಾರ್ಡ್ ಹೊಂದಿರುವ ಯಾತ್ರೆಗೆ ತೆರಳುವ ಸಮಯದಲ್ಲಿ ಅವುಗಳನ್ನು ಹೊಂದಿರಬೇಕು ಎಂದು ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ದೇವಾಲಯಕ್ಕೆ ಭೇಟಿ ನೀಡುವ ೪೮ ಗಂಟೆ ಅವಧಿಯ ಮೊದಲು ಕೋವಿಡ್-೧೯ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯ. ಪ್ರವೇಶ ಸ್ಥಳದಲ್ಲಿ ಆಂಟಿಜೆನ್ ಟೆಸ್ಟ್ ಅವಕಾಶ ಕಲ್ಪಿಸಲಾಗಿದ್ದು ಅದರ ವೆಚ್ಚವನ್ನು ಭಕ್ತರೇ ಭರಿಸಬೇಕಾಗುತ್ತದೆ.