ಅಯೋಧ್ಯ ಶ್ರೀರಾಮ ಮಂದಿರ ಉದ್ಘಾಟನೆ ಪಟ್ಟದಲ್ಲಿ ವಿಶೇಷ ಕಾರ್ಯಕ್ರಮಗಳು

ಕೆ.ಜಿ.ಎಫ್.:೧೯. ಸುಮಾರು ೫೦೦ ವರ್ಷ ಹೋರಾಟಗಳು, ಪ್ರಾಣತ್ಯಾಗಗಳು ಹಾಗೂ ವಿವಿಧ ಕಷ್ಟಗಳ ಫಲವಾಗಿ ದಿನಾಂಕ ೨೨-೧-೨೦೨೪ ರಂದು ಅಯೋಧ್ಯ ಪುಣ್ಯಭೂಮಿಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ನಡೆಯಲಿದೆ.
ಇದುಸಂಬಂದವಾಗಿ ಕೆ.ಜಿ.ಎಫ್. ಆಂಡ್ರಸನ್‌ಪೇಟೆ, ಬಿ.ಎಂ.ರಸ್ತೆಯಲ್ಲಿರುವ ಶ್ರೀ ರಾಮಚಂದ್ರಮೂರ್ತಿ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.
ಬೆಳಿಗ್ಗೆ ೯.೦೦ ಗಂಟೆಗೆ ಗಣಪತಿ ಹೋಮ, ಪುಣ್ಯಾಹವಾಚನ, ನವಗ್ರಹ ಹೋಮ ಹಾಗೂ ಮೂಲಸ್ಥಾನ ವಿಗ್ರಹಕ್ಕೆ ವಿಶೇಷ ಅಭಿಷೇಕ ಅಲಂಕಾರಗಳು ನಡೆಯಲಿದೆ. ಮದ್ಯಾಹ್ನ ೧೨.೦೦ ಗಂಟೆಗೆ ಪುಣ್ಯಾಹೂದಿ, ಮಹಾಮಂಗಳಾರತಿಯ ನಂತರ ವಿಶೇಷ ಅನ್ನ ಸಂತರ್ಪನೆ ನಡೆಯಲಿದೆ.
ಕಾರ್ಯಕ್ರ ಏರ್ಪಾಡುಗಳನ್ನು ದೇವಸ್ಥಾನ ಅರ್ಚಕರು ಕೆ.ಹರೀಶ್ ಹಾಗೂ ದೇವಸ್ಥಾನ ಆಡಳಿತ ಸಮಿತಿಯವರು ಮಾಡುತ್ತಿದ್ದಾರೆ. ಕಾರ್ಯಕ್ರಮಗಳಲ್ಲಿ ಸಾರ್ವಜನಿಕರೆಲ್ಲರೂ ಪಾಲ್ಗೊಳ್ಳಬೇಕೆಂದು ಆಹ್ವಾನಿಸಿರುತ್ತಾರೆ.