ಅಯೋಧ್ಯೆ: ಸುಪ್ರೀಂ ತೀರ್ಪಿಗೆ ಬದ್ಧ

ನವದೆಹಲಿ,ಮೇ.೮- ಆಯೋಧ್ಯೆಯ ರಾಮಮಂದಿರ ಕುರಿತ ಸುಪ್ರೀಂ ತೀರ್ಪಿಗೆ ಕಾಂಗ್ರೆಸ್ ಬದ್ಧವಾಗಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ತೀರ್ಪು ರದ್ದುಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಅಯೋಧ್ಯೆ ತೀರ್ಪನ್ನು ರದ್ದುಪಡಿಸಲು ರಾಹುಲ್ ಗಾಂಧಿ ಪ್ರಯತ್ನಿಸುತ್ತಿದ್ದಾರೆ ಎಂದು ಮಧ್ಯ ಪ್ರದೇಶದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ,ಈ ರೀತಿಯ ಯಾವುದೇ ಯೋಚನೆ, ಯೋಜನೆಯೂ ಇಲ್ಲ .ಸುಖಾಸುಮ್ಮನೆ ಆರೋಪ ಮಾಡಲಾಗುತ್ತಿದೆ ಎಂದು ತಿರುಗೇಟು ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್, ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಒಪ್ಪಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ ಈ ವಿಷಯಕ್ಕೆ ಬದ್ಧವಾಗಿದೆ ಎಂದಿದ್ದಾರೆ.
ಈ ವಿಷಯದಲ್ಲಿ ನ್ಯಾಯಾಲಯದ ಒಳಗೊಳ್ಳುವಿಕೆಯನ್ನು ಮೊದಲು ಪ್ರಶ್ನಿಸಿದ್ದು ಬಿಜೆಪಿ ಮತ್ತು ನಂತರ ಸುಪ್ರೀಂಕೋರ್ಟ್ ಪಾತ್ರವನ್ನು ಒಪ್ಪಿಕೊಳ್ಳುವ ತನ್ನ ನಿಲುವನ್ನು ಬದಲಾಯಿಸಿದೆ ಎಂದು ಆರೋಪಿಸಿದ್ದಾರೆ.
,ಶೆಹಜಾದಾ ತನ್ನ ತಂದೆ ಶಾ ಬಾನೋ ಪ್ರಕರಣದಲ್ಲಿ ಮಾಡಿದಂತೆ ರಾಮ ಮಂದಿರದ ಮೇಲಿನ ಸುಪ್ರೀಂಕೋರ್ಟ್ ತೀರ್ಪನ್ನು ರದ್ದುಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಪ್ರಧಾನಿ ಹೇಳಿರುವುದು ಸುಳ್ಳಿನ ಪರಮಾವಧಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
“ಪ್ರಧಾನಿ ಸುಳ್ಳಿನ ಮಹಾಮಾರಿ ಹರಡುತ್ತಿದ್ದಾರೆ. ಅವರ ಇಡೀ ರಾಜಕೀಯ ಜೀವ ‘ಅಸತ್ಯಮೇವ ಜಯತೆ’ಯಲ್ಲಿ ಲಂಗರು ಹಾಕಿದೆ ಎಂದು ಹೇಳಿದ್ದಾರೆ.