ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಆಗಮನಕ್ಕೆ ಶ್ರೀಗಳಿಗೆ ಆಹ್ವಾನ

ಆಲಮೇಲ :ಜ.18: ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ನೂತನ ಶ್ರೀರಾಮ ಮಂದಿರ ಪ್ರತಿಷ್ಠಾಪನೆ/ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಟ್ಟಣದ ಆಹ್ವಾನ ಪತ್ರಿಕೆಯನ್ನು ಪಟ್ಟಣದ ಗುರು ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರಿಗೆ ಶ್ರೀ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಮೂಲಕ ಇಲ್ಲಿನ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಶ್ರೀ ಮಠಕ್ಕೆ ಭೇಟಿ ನೀಡಿ ಆಮಂತ್ರಣ ಪತ್ರಿಕೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಅರವಿಂದ ಪತ್ತಾರ, ಮಲ್ಲಿಕಾರ್ಜುನ ರಾಂಪೂರ ಮಠ, ರಾಜೇಂದ್ರ ರಾಥೋಡ, ಶ್ರೀಮಂತ ದುದ್ದಗಿ, ಶೇಖರ ಗೌಡ ಅರವಾಲ, ಅನೇಕ ಭಕ್ತ ವೃಂದ ಇದ್ದರು.