ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ; ನಗರದಲ್ಲಿ ಸಂಭ್ರಮಾಚರಣೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜ.23: ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರಮೂರ್ತಿಯ ಪ್ರತಿಷ್ಟಾಪನೆಯಾದ ಹಿನ್ನಲೆಯಲ್ಲಿಚಾಮರಾಜನಗರಜಿಲ್ಲೆಯಾದ್ಯಂತ ರಾಮ ಭಕ್ತರಲ್ಲಿ ಸಡಗರ ಸಂಭ್ರಮದಿಂದ ಪೂಜೆ ಸಲ್ಲಿಸಿ ಪಾನಕ ಮಜ್ಜಿಗೆ ಹಾಗೂ ಅನ್ನ ಸಂತರ್ಪಣೆ ಮಾಡುವ ಮೂಲಕ ಪುನೀತರಾದರು.
ಸೋಮವಾರ ಬೆಳಿಗ್ಗೆಯಿಂದಲೇ ವಿವಿಧ ದೇವಸ್ಥಾನಗಳು, ರಾಮ ಮಂದಿರಗಳಲ್ಲಿ ತಳಿರು ತೋರಣದಿಂದ ಸಿಂಗರಿಸಿ ಹೋಮ ಹವನ, ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಿತು. ನಗರದ ಕೊಳದ ಬೀದಿಯಲ್ಲಿರುವ ಮಂಟೇಸ್ವಾಮಿದೇವಸ್ಥಾನದಲ್ಲಿ ವಿಶ್ವಕರ್ಮ ಸಮಾಜ ಹಾಗೂ ರಾಮ ಭಕ್ತರಿಂದರಾಮದೇವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ, ಬಳಿಕ ಪೂಜೆ ಸಲ್ಲಿಸಿ ನೆರೆದಿದ್ದ ಭಕ್ತಿಗೆ ಪಾನಕ, ಮಜ್ಜಿಗೆ ವಿತರಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿರುವ ಹಿನ್ನೆಲೆಗಡಿಜಿಲ್ಲೆಚಾಮರಾಜನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿ, ದೇಗುಲಗಳ ಆವರಣಕೇಸರಿ ಧ್ವಜಗಳಿಂದ ಅಲಂಕೃತಗೊಂಡಿದ್ದವು.
ಶ್ರೀ ರಾಮಲಲ್ಲಾ ಪ್ರಾಣ ಪ್ರತಿ?Á್ಠಪನೆ ಆಗುತ್ತಿರುವ ಶುಭ ದಿನದಲ್ಲಿಚಾಮರಾಜನಗರರಾಮ ಭಕ್ತರ ಸಂಭ್ರಮಜೋರಾಗಿದ್ದುನಗರದ ವಿವಿಧೆಡೆವಿಶೇ?À ಪೂಜೆ, ಹೋಮ ಹವನಗಳು ನಡೆದವು.
ಭಕ್ತರಿಂದರಾಮತಾರಕ ಮಹಾಮಂತ್ರಯಜ್ಞ :ಶಂಕರಪುರ ಬಡಾವಣೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಹಬ್ಬದ ಸಡಗರಉಂಟಾಗಿದ್ದು ಶ್ರೀ ರಾಮತಾರಕ ಮಹಾ ಮಂತ್ರಜಪ ಸಾಂಗತಾಯಜ್ಞಯನ್ನು ಶ್ರೀ ಚಂದ್ರಶೇಖರ ಭಾರತೀ ಸೇವಾ ಟ್ರಸ್ಟ್ ವತಿಯಿಂದ ನಡೆಸಲಾಯಿತು. ನೂರಾರು ಮಂದಿ ರಾಮ ಭಕ್ತರು ಈ ಯಜ್ಞದಲ್ಲಿ ಪಾಲ್ಗೊಂಡಿದ್ದರು.
ನೂರಾರುಚಿಣ್ಣರಿಂದರಾಮಚಿತ್ರ: ಚಾಮರಾಜೇಶ್ವರದೇಗುಲ ಮುಂಭಾಗಇಂದುರಾಮ ಮಂದಿರ, ರಾಮನಚಿತ್ರ ಬಿಡುಸುವ ಸ್ಪರ್ಧೆಆಯೋಜನೆ ಮಾಡಲಾಗಿತ್ತು. ನೂರಾರುಚಿಣ್ಣರುತಮ್ಮಕಲ್ಪನೆಯ ಬಾಲರಾಮ, ಶ್ರೀರಾಮಚಂದ್ರ ಹಾಗೂ ರಾಮ ಮಂದಿರದ ಚಿತ್ರಗಳನ್ನು ಬಿಡಿಸಿದ್ದಾರೆ.
ಸಾವಿರಕ್ಕೂ ಹೆಚ್ಚು ದೀಪ ಬೆಳಗಿ ಸಂಭ್ರಮಿಸಿದ ರಾಮ ಭಕ್ತರು :ನಗರದರಾಮಶೇ?À ಪಾಠಶಾಲೆ ಹಾಗೂ ಶ್ರೀ ಪರಿಮಳ ರಾಮ ವಿದ್ಯಾ ಮಂದಿರಕುಟೀರದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿತ್ತು.
ದೀಪಗಳಲ್ಲಿ ಜೈ ಶ್ರೀ ರಾಮ್ ಹಾಗೂ ಓಂ ಸ್ವಸ್ತಿಕ್ ಎಂದು ಬರೆದ ಭಕ್ತರು ಹಾಗೂ ಪಾಠಶಾಲಾ ವಿದ್ಯಾರ್ಥಿಗಳುಸಂಭ್ರಮದಲ್ಲಿ ಭಾಗಿಯಾದರು.
ಈ ಸಂದರ್ಭದಲ್ಲಿರಾಮಶೇ?À ಪಾಠಶಾಲಾ ಪ್ರಾಚಾರ್ಯರಾದ ಪ್ರದೀಪ್‍ಕುಮಾರ್ ದೀಕ್ಷಿತ್,ಮಹೇಶ್ ಸುಮನ್ ಹಾಗೂ ಪಾಠಶಾಲಾ ವಿದ್ಯಾರ್ಥಿಗಳು ಶ್ರೀ ಪರಿಮಳ ರಾಮ ವಿದ್ಯಾಮಂದಿರದ ಪುಟ್ಟ ಮಕ್ಕಳು,ಪೆÇೀ?Àಕರು ಉಪಸ್ಥಿತರಿದ್ದರು.
ಪ್ರಸಾದ ವಿನಿಯೋಗ :ರಾಮ ಮಂದಿರಉದ್ಘಾಟನೆಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಪ್ರಸಾದ ವಿತರಣೆ ಮಾಡಲಾಯಿತು. ನಗರಸಭೆಕಾರ್ಯಾಲಯದ ಮುಂದೆ ವರ್ತಕರು ಶ್ರೀರಾಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಿದರು.
ಚಾಮರಾಜೇಶ್ವರಉದ್ಯಾನವನದ ಮುಂಭಾಗರಾಮಭಕ್ತರು ಪೂಜೆ ಸಲ್ಲಿಸಿ ಸಿಹಿ ವಿತರಿಸಿದರು. ಅಗ್ರಹಾರರಾಮಮಂದಿರ, ಕಾಡು ನಾರಾಯಣಸ್ವಾಮಿದೇವಸ್ಥಾನದಲ್ಲಿ ನಾರಾಯಣ ಸ್ವಾಮಿದೇವರಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ದೇವಾಂಗ ಬೀದಿ ಚೌಡೇಶ್ವರೀದೇವಸ್ಥಾನ, ಚಿಕ್ಕಅಂಗಡಿ ಬೀದಿ ರಾಮ ಮಂದಿರ ಸಂತೇಮರಹಳ್ಳಿ, ಬಿ.ರಾಚಯ್ಯಜೋಡಿರಸ್ತೆ, ಹೀಗೆ ನೂರಾರುಕಡೆರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಪೂಜಾ ಕಾರ್ಯಕ್ರಮಗಳು ಜರುಗಿದವು.