ಅಯೋಧ್ಯೆಗೆ ಮುಸ್ಲಿಂ ಮಹಿಳೆ ಪಾದಯಾತ್ರೆ

ಮುಂಬೈ, ಡಿ.೨೯-ಮುಸ್ಲಿಂ ಮಹಿಳೆಯೊಬ್ಬರು ಸರ್ವಧರ್ಮ ಸಮನ್ವಯದ ದೃಷ್ಟಿಯಿಂದ ರಾಮಮಂದಿರಕ್ಕೆ ಪಾದಯಾತ್ರೆ ಬೆಳೆಸಿದ್ದು, ೧,೪೨೫ ಕಿಲೋಮೀಟರ್ ಕಾಲ್ನಡಿಗೆ ಮೂಲಕವೇ ಅಯೋಧ್ಯೆ ತಲುಪಲು ಹೊರಟಿದ್ದಾರೆ.

ಮುಸ್ಲಿಂ ಯುವತಿ ಶಬನಮ್ ಮುಂಬೈನಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ತನ್ನ ಸಹಚರರಾದ ರಮಣ್ ರಾಜ್ ಶರ್ಮಾ ಮತ್ತು ವಿನೀತ್ ಪಾಂಡೆ ಜೊತೆಯಲ್ಲಿ ಕಾಲ್ನಡಿಗೆ ಮೂಲಕವೇ ಅಯೋಧ್ಯೆ ತಲುಪಲು ಹೊರಟಿದ್ದಾರೆ.ಈಗ ಶಬನಮ್ ಮಧ್ಯಪ್ರದೇಶದ ಸಿಂಧವಾವನ್ನು ತಲುಪಿದ್ದಾರೆ. ಪ್ರತಿದಿನ ೨೫-೩೦ ಕಿಲೋಮೀಟರ್ ಪಾದಯಾತ್ರೆ ಮಾಡುತ್ತಿದ್ದಾರೆ.

ಶಬನಮ್ ಮುಸ್ಲಿಂ ಧರ್ಮೀಯರಾಗಿದ್ದರೂ, ಭಗವಾನ್ ರಾಮನ ಮೇಲೆ ಅಚಲ ಭಕ್ತಿ ಹೊಂದಿದ್ದಾರೆ. ರಾಮನನ್ನು ಪೂಜಿಸಲು ಒಬ್ಬ ಹಿಂದೂ ಆಗುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಶಬನಮ್ ಸಾರಿದ್ದಾರೆ. ಉತ್ತಮ ಮಾನವನಾಗಿರುವುದು ಮುಖ್ಯ. ಸುದೀರ್ಘ ಯಾತ್ರೆಯಿಂದ ಬರುವ ಆಯಾಸದ ಹೊರತಾಗಿಯೂ, ಮೂವರು ಯುವಜನರು ರಾಮನ ಮೇಲಿನ ಭಕ್ತಿ ತಮ್ಮನ್ನು ಮುಂದುವರಿಸುತ್ತಿದೆ ಎಂದು ಹೇಳುತ್ತಾರೆ.

ರಾಮನ ಆರಾಧನೆಯು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ಇದು ಗಡಿಗಳನ್ನು ಮೀರಿದೆ ಮತ್ತು ಇಡೀ ಜಗತ್ತನ್ನು ಒಳಗೊಳ್ಳುವ ಸುಸಮಯವಾಗಿದೆ. ಭಗವಾನ್ ರಾಮನು ಜಾತಿ ಅಥವಾ ಧರ್ಮವನ್ನು ಮೀರಿ ಎಲ್ಲರಿಗೂ ಸೇರಿದವನು ಎಂದು ಶಬನಮ್ ನಂಬಿದ್ದಾರೆ.