ಅಯೋಧ್ಯೆಗೆ ತೆರಳುವ 51 ಅಡಿ ಉದ್ದದ ಭಾಗವಧ್ವಜಕ್ಕೆ ಪೂಜೆ

ಸಂಜೆವಾಣಿ ವಾರ್ತೆ

ಹರಪನಹಳ್ಳಿ, ಜ.೧೮; ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳಲಿರುವ ರಾಮಮಂದಿರಕ್ಕೆ ಸಮರ್ಪಣೆ ಮಾಡಲು ಪಟ್ಟಣದಿಂದ 51 ಅಡಿ ಉದ್ದದ ಭಗವಧ್ವಜ ವನ್ನು ಇಲ್ಲಿಯ ರಾಮಭಕ್ತರು ಕೊಂಡೊಯ್ಯುದ್ದಾರೆ.ಪಟ್ಟಣದ ವೆಂಕಟೇಶ್ವರ ರೆಡಿಮೆಡ್ ಅಂಗಡಿಯ ಮಾಲಿಕ ಶಶಿಕಾಂತ ಸ್ಪಠಿಕ ಅವರು 2019ರಲ್ಲಿ ಅಯೋಧ್ಯೆಗೆ ಹೋಗಿದ್ದಾಗ ನಮಗೆ ಭಗವಧ್ವಜ ಒಪ್ಪಿಸಲು ಅನುಮತಿನ್ನು ರಾಮಮಂದಿರ ಟ್ರಸ್ಟ್ ನವರಿಗೆ ಕೋರಿದ್ದರು.ಟ್ರಸ್ಟ್ ನವರು ಇವರಿಗೆ ಅನುಮತಿ ಹಾಗೂ ಪಾಸ್ ನೀಡಿದ ಹಿನ್ನಲೆಯಲ್ಲಿ ಶಶಿಕಾಂತ ಸ್ಪಠಿಕ ಅವರು ಇಲ್ಲಿಯ ತೆಲುಗರ ಬೀದಿಯಲ್ಲಿರುವ ರಾಮಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಕೋಟೆ ಆಂಜನೇಯ ದೇವಸ್ಥಾನಕ್ಕೆ ಹೋಗಿ ನಂತರ ಸ್ಥಳೀಯ ಸಂತ ಜ್ಞಾನೇಶ್ವರ ಮಂದಿರದ ಧರ್ಮಕರ್ತ ಸ್ಪಠಿಕ ಜ್ಞಾನೇಶ್ವರಮಹಾರಾಜ ಹಾಗೂ ಸ್ಪಠಿಕ ಸುನಿಲ್ ಕುಮಾರ ರವರ ಜೊತೆಗೂಡಿ ಅಯೊಧ್ಯೆಗೆ ತೆರಳಿದರು.ಇದಕ್ಕೂ ಪೂರ್ವದಲ್ಲಿ ಇಲ್ಲಿಯ ರಾಮಾಂಜನೇಯ ದೇವಸ್ಥಾನದಲ್ಲಿ ಸ್ಥಳೀಯ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿಗಳ ಸಾನಿದ್ಯದಲ್ಲಿ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿ ಮುಖಂಡ ಜಿ.ನಂಜನಗೌಡ,ಪೂಜಾರ ಚಂದ್ರಶೇಖರ, ಡಿಷ್ ವೆಂಕಟೇಶ, ಎ.ಎಂ.ವಿಶ್ವನಾಥ ಚಂದ್ರಾಧರಭಟ್ ಸೇರಿದಂತೆ ಭಾವಸಾರ ಕ್ಷತ್ರಿಯ, ಆರ್ಯವೈಶ್ಯ, ಬಜರಂಗದಳ,ಆರ್ ಎಸ್‌ಎಸ್ ವಿಎಚ್ ಪಿ,ಸವಿತಾ ಸಮಾಜದವರು ಉಪಸ್ಥಿತರಿದ್ದರು.