ಅಯುಕ್ತ ಐಟಂ ಹಾಡು ಬಿಡುಗಡೆ

“ಅಯುಕ್ತ” ಚಿತ್ರವನ್ನು ಮಂಡ್ಯ, ಕಿರುಗಾವಲು ಸೇರಿದಂತೆ  ಮತ್ತಿತತರ ಕಡೆ ಚಿತ್ರೀಕರಣ ಮಾಡಲಾಗಿದ್ದು ಬಿಡುಗಡೆಗೆ ಸಜ್ಜಾಗಿರುವ  ಹಿನ್ನೆಲೆಯಲ್ಲಿ ಐಟಂ ಹಾಡು ಬಿಡುಗಡೆಯಾಗಿದೆ. ಅಯುಕ್ತ ಎಂದರೆ ಉಪಯುಕ್ತವಲ್ಲದೆ ಕೆಲಸ. ಹೀಗಾಗಿ ಚಿತ್ರಕ್ಕೆ ಹೆಸರು ಇಟ್ಟಿದ್ದೇವೆ ಎಂದು ಮಾತಿಗಿಳಿದರು.

ನಿರ್ದೇಶಕ ಕನಸು ರಮೇಶ್. “ಅಯುಕ್ತ” ಸಾಂಸಾರಿಕ ಚಿತ್ರ .ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಮತ್ತು  ಮಕ್ಕಳ ನಿರ್ಧಾರಕ್ಕೆ ಮನೆಯವರು ಯಾವ ರೀತಿ ಪೆÇ್ರೀತ್ಸಾಹ ನೀಡ್ತಾರೆ ಎನ್ನುವುದು ಚಿತ್ರದ ತಿರುಳು ವೈವಿದ್ಯಮ ಕಥೆ ಹಿರಿಯ ಕಲಾವಿದ ಗಣೇಶ್ ರಾವ್ ಕೇಸರ್ ಕರ್ ಕಥೆ ಕೇಳಿ ಬೆನ್ನುತಟ್ಟಿದ್ದಾರೆ ಎಂದರು. ನಿರ್ಮಾಪಕ ವಿಶ್ವಾಸ್ ಗಂಗಡ್ಕರ್, ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಕೆಲವೇ ದಿನಗಳಲ್ಲಿ ಬಿಡುಗಡೆಯಾಗುತ್ತಿದೆ ಸಹಕಾರವಿರಲಿ ಎಂದು ಕೇಳಿಕೊಂಡರು.

ಹಿರಿಯ ಕಲಾವಿದ ಗಣೇಶ್‍ರಾವ್ ಕೇಸರ್‍ಕರ್ , ನಿರ್ದೇಶಕರು ಹೆಚ್ಚಿನ ನಾಟಕ ಬರೆದಿದ್ದಾರೆ. ಸಿನಿಮಾ ನಿರ್ದೇಶನ ಮಾಡ್ತಾರೆ ಎನ್ನುವ ಕುತೂಹಲವಿತ್ತು. ನಾಟಕ ಬಿಟ್ಟು ಸಿನಿಮಾಗೆ ಯಾವ ರೀತಿಬೇಕು ಆ ರೀತಿ ಚಿತ್ರ ಮಾಡಿದ್ದಾರೆ. ಕೆಲಸ ಮಾಡಿದ ರೀತಿ ಖುಷಿ ಆಯಿತು. ಚಿತ್ರದಲ್ಲಿ ತಮ್ಮನಿಗಾಗಿ ಅಣ್ಣ ತ್ಯಾಗ ಮಾಡ್ತಾನೆ. ಉಪಯುಕ್ತವಾಗಿ ಬದುಕುತ್ತಾರೆ ಎನ್ನುವ ಕಥೆ  ಚಿತ್ರದಲ್ಲಿದೆ ಚಿತ್ರ ಹೆಚ್ಚಿನ ಯಶಸ್ವಿಯಾಗಲಿ ಎಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.

ಕಲಾವಿದರಾದ ಸೌಂದರ್ಯ ಗೌಡ , ಫಯು ಸೂಪಿಯಾನ್, ಅದ್ದೂರಿ ಬಸವ, ಅಮೃತಾ ,ಚನ್ನಬಸವ ಋತ್ವಿಕಾ  ಸಹ ನಿರ್ಮಾಪಕ ಗಿರಿರಾಜ್ ಕಲ್ಲೂರು, ಲಯನ್ಸ್ ಅಧ್ಯಕ್ಣ ರಾಮಕೃಷ್ಫ್ಪ ರೈತ  ಸಂಘದ ಮುಖಂದ ಹನುಮಂತಪ್ಪ , ಛಾಯಾಗ್ರಾಹಕ ಅರಸಿಕೆರೆ ದೀಪು ಸೇರಿದಂತೆ ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು