ಅಮ್ ಆದ್ಮಿ ಪಾರ್ಟಿ ವೆಂಕಟೇಶ್ ಅಭಿಮತ ಜನರ ಸೇವೆಗಗಾಗಿ ರಾಜಕಾರಣ

ಕೋಲಾರ, ನ. ೧೯- ಜನರ ಸೇವೆಗಾಗಿ ರಾಜಕಾರಣ ಬೇಕು ಹೊರತಾಗಿ ರಾಜಕಾರಣಕ್ಕಾಗಿ ಸೇವೆ ಮಾಡುವುದಲ್ಲ ಎಂದು ಮಾಜಿ ಸಂಸದ ಹಾಗೂ ಅಮ್ ಆದ್ಮಿ ಪಕ್ಷದ ಸಲಹೆಗಾರ ವಿ. ವೆಂಕಟೇಶ್ ಅಭಿಪ್ರಾಯ ಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಭ್ರಷ್ಟಚಾರವನ್ನು ಶೊನ್ಯ ಮಾಡುವ ದೆಸೆಯಲ್ಲಿ ಅಮ್ ಆದ್ಮಿ ಪಾರ್ಟಿ ಅಸ್ಥಿತ್ವಕ್ಕೆ ಬಂದಿದ್ದು ಪ್ರಥಮವಾಗಿ ದೆಹಲಿಯ ಮತದಾರರ ಮನವುಲಿಸಿ ಅಧಿಕಾರಕ್ಕೆ ಬಂದ ಕ್ರೇಸಿವಾಲಾ ಅವರು ಮಾದರಿ ಆಡಳಿತ ನೀಡುತ್ತಿರುವಂತೆ ರಾಜ್ಯದಲ್ಲಿ ಅಪ್ ಪಾರ್ಟಿ ಅಧಿಕಾರಕ್ಕೆ ಬಂದಲ್ಲಿ ಭ್ರಷ್ಟಚಾರವನ್ನು ಹಿಮ್ಮೆಟ್ಟಿಸಲಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೇವೆಗಾಗಿ ಅಧಿಕಾರ ಪಡೆಯ ಬೇಕಾಗಿರುವುದು ಅನಿವಾರ್ಯವಾಗಿದೆ. ಅದರೆ ಇಂದು ರಾಜಕೀಯ ವ್ಯವಸ್ಥೆಯು ತೀರ ಮಲೀನ ಗೊಂಡಿದ್ದು ಜಾತಿ ಪವರ್, ಮನಿ ಪವರ್‌ಗಳನ್ನು ಅಧಾರಿಸಿದೆ. ಪ್ರಮಾಣಿಕ ರಾಜಕೀಯ ವ್ಯವಸ್ಥೆಗಳು ಇತಿಹಾಸ ಸೇರಿ ಕೊಂಡಿದೆ.ರಾಜಕಾರಣ ಎಂಬುವುದು ಕುಟುಂಬದ ಅಸ್ಥಿಯಂತೆ ವಾರಸುದಾರರೇ ಅದಿಪಾತ್ಯ ವಹಿಸುತ್ತಿರುವುದು ಇಂದಿನ ಎಲ್ಲಾ ಪಕ್ಷಗಳಲ್ಲಿ ಕಾಣ ಬಹುದಾಗಿದೆ ಎಂದು ವಿಷಾಧಿಸಿದರು,
ನಮ್ಮ ಪಕ್ಷದಲ್ಲಿ ಮತದಾರರ ಪ್ರಭುಗಳೇ ನಮ್ಮ ನಾಯಕರು, ಮತದಾರರೇ ನಮ್ಮ ಹೈಕಮಾಂಡ್ ಅಗಿದ್ದಾರೆ ಎಂದ ಅವರು ನಾನು ಕಳೆದ ೧೯೮೩-೮೪ರಲ್ಲಿ ಕೋಲಾರ ಲೋಕಸಭಾ ಚುನಾವಣೆಯಲ್ಲಿ ಸಂಸದನಾಗಿ ಆಯ್ಕೆಯಾಗಿದ್ದೆ. ಆಗಾ ದೇಶದಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರ ಹತ್ಯೆಯಾಗಿದ್ದು, ಅನುಕಂಪದ ಅಲೆಯಿದ್ದರೂ ಮತದಾರರು ನನ್ನನ್ನು ಜಯಪ್ರಕಾಶ್ ನೇತ್ರತ್ವದ ಜನತಾ ಪಕ್ಷಕ್ಕೆ ಮತ ನೀಡುವ ಮೂಲಕ ನನ್ನನ್ನು ಆಯ್ಕೆ ಮಾಡಿದ್ದರು ಎಂಬುವುದನ್ನು ನೆನಪಿಸಿ ಕೊಂಡರು.
೩೦ ವರ್ಷಗಳಿಂದ ಅಭಿವೃದ್ದಿ ಶೂನ್ಯ-
ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಮ್ ಅದ್ಮಿ ಪಾರ್ಟಿಯ ಸಂಭವನೀಯ ಅಭ್ಯರ್ಥಿ ಸುಹೇಲ್ ದಿಲ್ ನವಾಸ್ ಮಾತನಾಡಿ ನಮ್ಮ ತಂದೆ ಅಬ್ದುಲ್ ಲತೀಫ್ ಅವರು ಕಾಂಗ್ರೇಸ್ ಪಕ್ಷದಿಂದ ಕೋಲಾರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು, ಅಗಿನ ಕಾಲದಲ್ಲಿ ಭ್ರಷ್ಟಚಾರ ಎಂಬುವುದು ಇರಲಿಲ್ಲ. ಪ್ರಮಾಣಿಕ ಸೇವೆ ಸಲ್ಲಿಸುತ್ತಿದ್ದ ರಾಜಕಾರಣಿಗಳಿಗೆ ಸಮಾಜದಲ್ಲಿ ಹೆಚ್ಚು ಗೌರವ ಇತ್ತು, ಹಣ, ಆಸ್ತಿಗಳಿಗಿಂತ ಮಾನ,ಮಾರ್ಯದೆ,ಗೌರವಗಳಿಗೆ ಹೆಚ್ಚು ಮಾನ್ಯತೆ ಇತ್ತು ಎಂದರು,
ಆಗಾ ಕೋಲಾರ ಕ್ಷೇತ್ರದಲ್ಲಿ ಟಿ.ಚೆನ್ನಯ್ಯ, ಅಬ್ದುಲ್ ಲತೀಫ್ ಮತ್ತು ಕೆ.ಆರ್. ಶ್ರೀನಿವಾಸಯ್ಯ ಅವರ ಅಭಿವೃದ್ದಿಯ ಸೇವೆಗಳು ಸಮಾಜದಲ್ಲಿ ಅವಿಸ್ಮರಣಿಯವಾಗಿದೆ.ಅದರೆ ಕಳೆದ ೩೦ ವರ್ಷಗಳಿಂದ ಕೋಲಾರದಲ್ಲಿ ಅಭಿವೃದ್ದಿ ಎಂಬುವುದು ಮರೀಚಿಕೆಯಾಗಿದೆ ಎಂದರು.
ಈ ಹಿಂದೆ ಅದಿಚುಂಚನಗಿರಿ ಬಾಲಗಂಗಾಧಾರನಾಥ ಸ್ವಾಮೀಜಿಗಳು ಕಾರ್ಯಕ್ರಮವೊಂದಕ್ಕೆ ಬಂದಿದ್ದ ಸಂದರ್ಭದಲ್ಲಿ ಅಗಿನ ಶಾಸಕ ಕೆ.ಶ್ರೀನಿವಾಸಗೌಡರಿಗೆ ನಗರದಲ್ಲಿ ರಸ್ತೆಗಳ ಅವ್ಯವಸ್ಥೆಗಳ ಬಗ್ಗೆ ಅಸಮಾಧನ ವ್ಯಕ್ತ ಪಡೆಸಿ ಸಂಚರಿಸಲು ಕನಿಷ್ಠ ರಸ್ತೆಗಳಾದರೂ ದುರಸ್ಥಿ ಮಾಡಿಸಪ್ಪ ಎಂದು ಹೇಳಿದ್ದು ಈಗಲು ನೆನಪು ಇದೆ ಎಂದರು.
ಕೋಲಾರವು ಚಿನ್ನ, ಹಾಲು, ರೇಷ್ಮೆಗಳಿಗೆ ಹೆಚ್ಚು ಖ್ಯಾತೆ ಪಡೆದಿತ್ತು, ಅಂದು ೫೬ ಹೆಕ್ಟರ್‌ನಲ್ಲಿ ಬೆಳೆಯುತ್ತಿದ್ದ ರೇಷ್ಮೇ ಇಂದು ೧೮ ಸಾವಿರಕ್ಕೆ ಇಳಿದಿದ್ದು ಎಕ್ಕೂಟೋ ಹೋಗಿದೆ.ಶಾಸಕ ಶ್ರೀನಿವಾಸಗೌಡರು ಯಾವೂದಕ್ಕೂ ಒತ್ತು ನೀಡದ ಹಿನ್ನಲೆಯಲ್ಲಿ ಕೃಷಿಕರು ಬೀದಿ ಪಾಲಾಗುವಂತಾಗಿದೆ ಎಂದು ದೂರಿದರು.
ಹಾಲಿನ ಉತ್ಪಾದನೆ ದರ ಹೆಚ್ಚಿಸಿಲ್ಲ, ನಿರುದ್ಯೋಗ ಸಮಸ್ಯೆ ಬಗೆಹರಿಸಿಲ್ಲ ಎಂದ ಅವರು ಕೋಲಾರ,ಬಂಗಾರಪೇಟೆ ಮತ್ತು ಕೆ.ಜಿ.ಎಫ್ ನಿಂದ ಉದ್ಯೋಗವನ್ನು ಅರಿಸಿ ಕೊಂಡು ೩೫ ಸಾವಿರ ಮಂದಿ ದಿನನಿತ್ಯ ರೈಲು ಬಸ್ ಮುಂತಾದವುಗಳಲ್ಲಿ ತಿರುಗಾಡಿ ಕೊಂಡು ಅಲೆಮಾರಿಗಳಾಗಿದ್ದಾರೆ ಎಂದು ವ್ಯಂಗವಾಡಿದರು,
ಅಭಿವೃದ್ದಿಗೆ ಜನಪ್ರತಿನಿಧಿಗಳ ಇಚ್ಚಾಕೊರತೆ-
ಜನರ ಸೇವೆಯೇ ನಮ್ಮ ಅಜೆಂಡಾವಾಗಿದೆ.ನಮ್ಮೂರ ಅಭಿವೃದ್ದಿಯೇ ನಮ್ಮ ಗುರಿಯಾಗಿದೆ. ಮೂರು ಪಕ್ಷಗಳನ್ನು ನಾನು ನೋಡಿ ಕೊಂಡು ಬಂದಿರುವೆ, ನಮಗೆ ಹೊರಗಿನವರು ಬೇಕಾಗಿಲ್ಲ. ಸ್ಥಳೀಯರಯ ಬೇಕಾಗಿದೆ. ಸ್ಥಳೀಯರಿಂದ ಆಡಳಿತದ ಸೇವೆ ಪಡೆಯ ಬೇಕಾಗಿದೆ.ಕೋಲಾರ ಇಂದು ರಾಜ್ಯದಲ್ಲಿ ಕೆಳಗಿನಿಂದ ಎರಡನೇ ಸ್ಥಾನದಲ್ಲಿದೆ. ಬೆಂಗಳೂರಿಗೆ ಕೇವಲ ೭೦ ಕಿ.ಮಿ. ಅಂತರದಲ್ಲಿದ್ದರೂ ಬೇರೆ ಜಿಲ್ಲೆಗಳ ಮಾದರಿಯಲ್ಲಿ ಅಭಿವೃದ್ದಿ ಇಲ್ಲದಿರುವುದು ನೀವುಗಳು ಆಯ್ಕೆ ಮಾಡಿದಂತ ಜನಪ್ರತಿನಿಧಿಗಳ ಇಚ್ಚಾಕೊರತೆಯೇ ಕಾರಣ ಎಂದು ಅರೋಪಿಸಿದರು,
ಅಲೆಮಾರಿಯಂತೆ ಸುರಕ್ಷಿತ ಕ್ಷೇತ್ರಕ್ಕೆ
ಸಿದ್ದು ಹುಡುಕಾಟ ಶೋಚನಿಯ-
ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಸುರಕ್ಷಿತವಾದ ಸ್ವಂತ ಕ್ಷೇತ್ರ ಇಲ್ಲದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸುರಕ್ಷಿತ ಕ್ಷೇತ್ರಕ್ಕಾಗಿ ಆಲೆಮಾರಿಯಂತೆ ಹುಡುಕಾಟ ನಡೆಸುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಅವರಿಗೆ ಇಂಥ ಪರಿಸ್ಥಿತಿ ಬರಬಾರದಾಗಿತ್ತು ಎಂದು ವ್ಯಂಗವಾಡಿದರು,
ಮುಂಬರಲಿರುವ ಚುನಾವಣೆಗೆ ಕೋಲಾರ ಕ್ಷೇತ್ರದಲ್ಲಿ ಅಮ್ ಅದ್ಮಿ ಪಕ್ಷದಿಂದ ಸ್ವರ್ದಿಸುತ್ತಿದ್ದು, ಮತದಾರ ಪ್ರಭುಗಳು ಭ್ರಷ್ಟಚಾರ ನಿರ್ಮಾಲನೆ, ಶೈಕ್ಷಣಿಕ ಪ್ರಗತಿಗಾಗಿ, ಉದ್ಯೋಗ ಸೃಷ್ಠಿಗಾಗಿ ನಿಮ್ಮ ಆಯ್ಕೆ ಅಮ್ ಆದ್ಮಿ ಪಕ್ಷದ ಅಭ್ಯರ್ಥಿಗೆ ನೀಡಿ ಎಂದು ಮನವಿ ಮಾಡಿದರು,
ನಿವೃತ್ತ ಕೆ.ಎ.ಎಸ್. ಅದಿಕಾರಿ ರವಿಶಂಕರ್ ಮಾತನಾಡಿದರು, ಸುದ್ದಿಗೋಷ್ಠಿಯಲ್ಲಿ ಅಮ್ ಅದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸುರೇಶ್ ಬಾಲಕೃಷ್ಣ.ಮುಖಂಡ ಬಿ.ಗೋಪಾಲ್.ಸಂಘಟನಕಾರ್ಯದರ್ಶಿ ಸಹರಾ ಬಾನು ಉಪಸ್ಥಿತರಿದ್ದರು, ಇದೇ ಸಂದರ್ಭದಲ್ಲಿ ಹಲವಾರು ಮಂದಿ ಪಕ್ಷಕ್ಕೆ ಸೇರ್ಪಡೆಯಾದರು,