ಅಮ್ಮಿನಬಾವಿ ಪಂಚಗೃಹ ಹಿರೇಮಠಕ್ಕೆರಂಭಾಪುರಿ ಶ್ರೀ ಭೇಟಿ 

 ಧಾರವಾಡ.ನ.೨೩: ಇಲ್ಲಿಗೆ ಸಮೀಪದ ತಾಲೂಕಿನ ಐತಿಹಾಸಿಕ ಅಮ್ಮಿನಬಾವಿ ಪಂಚಗೃಹ ಹಿರೇಮಠಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಮಂಗಳವಾರ ಭೇಟಿ ನೀಡಿ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿAಗ ಶಿವಾಚಾರ್ಯ ಸ್ವಾಮಿಗಳ ಆರೋಗ್ಯ ವಿಚಾರಿಸಿ ಅವರಿಗೆ ಶಾಲು ಹೊದಿಸಿ ಫಲ ಮಂತ್ರಾಕ್ಷತೆ ಅನುಗ್ರಹಿಸಿ ಆಶೀರ್ವದಿಸಿದರು. ಶ್ರೀಜಗದ್ಗುರು ರೇಣುಕಾಚಾರ್ಯರ ಕೃಪಾಕಾರುಣ್ಯದಿಂದ ತಮಗೆ ಉತ್ತಮ ಆರೋಗ್ಯವಿದ್ದು, ಶತಾಯುಷಿಗಳಾಗಿ ಭಕ್ತ ಸಂಕುಲಕ್ಕೆ ಮಾರ್ಗದರ್ಶನ ಮಾಡಿರಿ” ಎಂದು ಶುಭ ಹಾರೈಸಿದರು. ಭಕ್ತರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮಂಗಳವಾರ ಗ್ರಾಮಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿAಗ ಶಿವಾಚಾರ್ಯ ಸ್ವಾಮಿಗಳು ಇದ್ದರು. ಜಿಲ್ಲೆಯಲ್ಲಿಯ ನಿಯೋಜಿತ ಕಾರ್ಯಕ್ರಮಗಳ ಒತ್ತಡದಿಂದಾಗಿ ಕೆಲವೇ ನಿಮಿಷಗಳ ಕಾಲವಿದ್ದು ನಿರ್ಗಮಿಸಿದರು.