ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಭೂಮಿಪೂಜೆಮಾ.28 ಕ್ಕೆ ಅಥಣಿಗೆ ಸಿ.ಎಮ್ : ಶಾಸಕ ಕುಮಠಳ್ಳಿ

ಅಥಣಿ : ಮಾ.25:ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಾರ್ಚ 28 ರಂದು ಸಿಎಮ್ ಬಸವರಾಜ ಬೊಮ್ಮಾಯಿ ಅವರಿಂದ ಅದನ್ನು ಉದ್ಘಾಟನೆ ಮಾಡಿಸಲಾಗುವುದು ಎಂದು ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಹೇಳಿದರು.

ಅವರು ಕಕಮರಿ ಗ್ರಾಮದಲ್ಲಿ 3 ಕೋಟಿ ವೆಚ್ಚದ ಕಕಮರಿ ಮಹಾರಾಷ್ಟ್ರ ಗಡಿಯ ಉಮರಾಣಿ ವರೆಗಿನ ರಸ್ತೆಗೆ, ಕಕಮರಿ ಯಿಂದ ರಾಮತೀರ್ಥ ಮಹಾರಾಜರ ತೋಟದವರೆಗಿನ, ಕೊಕಟನೂರ ದಿಂದ ಶಿರಹಟ್ಟಿ 1ಕೋಟಿ 41 ಲಕ್ಷ ರೂ.ಗಳ ರಸ್ತೆ ಕಾಮಗಾರಿ, 2 ಕೋಟಿ ರೂ ವೆಚ್ಚದ ಐಗಳಿಕ್ರಾಸ್ ದಿಂದ ಯಲ್ಲಮ್ಮವಾಡಿ ರಸ್ತೆ, ಕೊಟಕನೂರ ಪದವಿ ಕಾಲೇಜನ 1 ಕೊಠಡಿ ಕಾಮಗಾರಿ. ಶಿರಹಟ್ಟಿ ಗ್ರಾಮದಲ್ಲಿ 1 ಕೋಟಿ 60 ಲಕ್ಷ ರೂ ವೆಚ್ಚದ ಶಿರಹಟ್ಟಿದಿಂದ ಕೊಕಟನೂರ ರಸ್ತೆ ಕಾಮಗಾರಿ, ಸವದಿ ಗ್ರಾಮದಲ್ಲಿ 5 ಕೋಟಿ ರೂ ವೆಚ್ಚದ ಸವದಿ ದಿಂದ ನಂದಗಾಂವ ರಸ್ತೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಅಮ್ಮಾಜೇಶ್ಚರಿ ಏತ ನೀರಾವರಿ ಮಂಜೂರಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿಯವರ ಸಹಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ ಎಂದರು.

ಅಥಣಿ ಮತಕ್ಷೇತ್ರದಲ್ಲಿ ಮಾರ್ಚ 24 ರಂದು 13 ಕೋಟಿ 48 ಲಕ್ಷ ರೂ ಅನುದಾನದಲ್ಲಿ ಜನಪರ ಹಾಗೂ ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನ ಗೊಳಿಸಿರುವೆ. ಜೈನ್ ಸಮುದಾಯದ ಭವನಗಳಿಗಾಗಿ 2 ಕೋಟಿ 10 ಲಕ್ಷ ಅನುದಾನ ಮಂಜೂರಾಗಿದ್ದು, ಕೆಲವೇ ದಿನಗಳಲ್ಲಿಯೇ ಈ ಭವನಗಳಿಗೂ ಭೂಮಿ ಪೂಜೆ ನೆರವೇರಿಸುವೆ ಎಂದರು.

ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಶಿವಾನಂದ ಸಿಂಧೂರ, ಗುರು ಪಾಟೀಲ, ಶ್ರೀಧರ ಹಂಡಿ, ಅಪ್ಪಾಸಾಬ ಅವತಾಡೆ, ನಾನಾಸಾಹೇಬ ಅವತಾಡೆ, ರಮೇಶ ಧುಮಾಳೆ, ಧುರೀಣರಾದ ವೆಂಕಣ್ಣಗೌಡ ಪಾಟೀಲ, ಗುರಪ್ಪ ದಾಶಾಳ, ಶ್ರೀಶೈಲ ಜನಗೌಡ, ಗೀರಿಶ ಬಸರಗಿ, ಗಿರೀಶ ಸಜ್ಜನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.